janadhvani

Kannada Online News Paper

ಪಿಎಫ್ಐ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ- ಕಾಜೂರಿನಲ್ಲಿ ನೂತನ ಮನೆ ನಿರ್ಮಾಣಕ್ಕೆ ಚಾಲನೆ

ಬೆಳ್ತಂಗಡಿ:ಮಾ.05 – ಪಾಪ್ಯುಲರ್ ಫ್ರಂಟ್ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ಇದರ ವತಿಯಿಂದ “ಬಡ ಕುಟುಂಬಕ್ಕೆ ಮನೆ”ಯೋಜನೆಯ 18ನೇ ಮನೆ ನಿರ್ಮಾಣಕ್ಕೆ ಕಾಜೂರಿನಲ್ಲಿ ಚಾಲನೆ ನೀಡಲಾಯಿತು.

ಅಸ್ಸಯ್ಯದ್ ಕೆ.ಪಿ.ಎಸ್ ಝೈನುಲ್ ಆಬಿದೀನ್ ಜಮಾಲುಲೈಲಿ ತಂಙಳ್ ಕಾಜೂರು ಇವರು ದುವಾಶೀರ್ವಾಚನ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಕಾಜೂರು ಎಸ್ ವೈ ಎಸ್ ಅಧ್ಯಕ್ಷರಾದ ಅಬೂಬಕ್ಕರ್ ಕುಕ್ಕಾವು, ರಹ್ಮಾನಿಯ ಎಜುಕೇಶನಲ್ ಕಮಿಟಿ ಇದರ ಅಧ್ಯಕ್ಷರಾದ ಉಮರ್ ಕುಕ್ಕಾವು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಜೂರು ಇದರ ಅಧ್ಯಕ್ಷರೂ ಮಿತ್ತಬಾಗಿಲು ಗ್ರಾಮ ಪಂಚಾಯಿತ್ ಸದಸ್ಯರೂ ಆದ ಅಹಮದ್ ಕಬೀರ್ ಕಾಜೂರು, ಪೆರ್ದಾಡಿ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಉಮರ್ ಪೆರ್ದಾಡಿ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.