ಮಂಗಳೂರು ( ಮಾ 1 ) :ನಕಲಿ ಬುರ್ಕಾಧಾರಿ ಮುಸ್ಲಿಂ ವಿದ್ಯಾರ್ಥಿನಿಯ ಪಾತ್ರವನ್ನು ಸೃಷ್ಟಿಸಿ ಎರಡು ಸಮುದಾಯವನ್ನು ಎತ್ತಿಕಟ್ಟುವ, ಅಶಾಂತಿ ಸೃಷ್ಟಿಸಿ ಪ್ರಚೋದನೆಗೊಳಪಡಿಸುವ, ಧರ್ಮವನ್ನು ಅವಮಾನಿಸುವ ಅಪರಾಧ ಮಾಡಿರುವ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ, ಮಹೇಶ್ ವಿಕ್ರಂ ಹೆಗ್ಡೆ ಮತ್ತು ಅನಾಮಿಕ ಬುರ್ಕಾಧಾರಿ ನಕಲಿ ಮಹಿಳೆಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಇಂದು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದಿನಾಂಕ 18.02.2022 ರಂದು ಟಿವಿ ವಿಕ್ರಮ (TV VIKRAMA) ಎಂಬ ಅನಧಿಕೃತ ಯೂಟ್ಯೂಬ್ ಅಕೌಂಟ್ ನಲ್ಲಿ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ ಎಂಬ ವ್ಯಕ್ತಿಯು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳನ್ನು ಸಂದರ್ಶನ ಮಾಡುವ ವಿಡಿಯೋ ವನ್ನು ಪ್ರಸಾರ ಮಾಡಲಾಗಿದೆ. ಸದ್ರಿ ವಿಡಿಯೊದ ಮೊದಲಿಗೆ ಚಿಕ್ಕದಾಗಿ ಕಾಲ್ಪನಿಕ ಎಂದು ಬರೆದುಕೊಂಡು ಸಂದರ್ಶನದ ಮಧ್ಯ ಭಾಗದಲ್ಲಿ ನಕಲಿ ಮುಸ್ಲಿಂ ವಿದ್ಯಾರ್ಥಿನಿ ಬುರ್ಕಾ ಮತ್ತು ಹಲ್ಲಿನ ಚಿಕಿತ್ಸೆ ಬಗ್ಗೆ ಹೇಳಲಾದ ಮಾತುಗಳನ್ನು ತುಂಡರಿಸಿ ವಾಟ್ಸಪ್ ಮತ್ತು ಪೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಇದೇ ವಿಡಿಯೋವನ್ನು ಈ ಅನಧಿಕೃತ ಯೂಟ್ಯೂಬ್ ಅಕೌಂಟ್ ನ ಸೃಷ್ಟಿಕರ್ತ ಮಹೇಶ್ ವಿಕ್ರಂ ಹೆಗ್ಡೆ ಕೂಡಾ ಹಂಚಿಕೊಂಡಿದ್ದಾರೆ. ಮಹೇಶ್ ವಿಕ್ರಂ ಹೆಗ್ಡೆ ಎಂಬಾತ ಎಬಿಚ್ಯುವಲ್ ಅಫೆಂಡರ್ ಆಗಿದ್ದು ಈ ಹಿಂದೆ ಜೈನ ಧರ್ಮದ ಮುನಿಗಳ ಅಪಘಾತ ಪ್ರಕರಣವನ್ನು ತಿರುಚಿ ವದಂತಿ ಹಬ್ಬಿಸಿದ್ದಕ್ಕೆ ಜೈನ ಸಮುದಾಯದ ವ್ಯಕ್ತಿಗಳು ಈತನ ವಿರುದ್ದ ದೂರು ನೀಡಿದ್ದರು.
ಈ ವಿಡಿಯೊದಿಂದ ಧರ್ಮನಿಂದನೆ ಆಗಿರುವುದಲ್ಲದೇ, ಎರಡು ಧರ್ಮಗಳ ಮಧ್ಯೆ ಅಪನಂಬಿಕೆ, ಗೊಂದಲ, ಅಸಹಜ ಅಶಾಂತಿ ಉಂಟಾಗಿದೆ. ಹಿಜಾಬ್ ವಿವಾದ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿರುವ ದಿನಗಳಲ್ಲಿ ಧರ್ಮವನ್ನು ಬಳಸಿ ಗಲಭೆ ಸೃಷ್ಟಿಸುವ ಉದ್ದೇಶದಿಂದ ಮಹಿಳೆಯೊಬ್ಬಳಿಗೆ ಬುರ್ಕಾ ತೊಡಿಸಿ ನಕಲಿ ಮುಸ್ಲಿಂ ಮಹಿಳೆಯನ್ನು ಸೃಷ್ಟಿಸಿ ಗಲಭೆ, ಅಶಾಂತಿ ಸೃಷ್ಟಿಸಲು ಪ್ರಚೋದನೆ ಮಾಡಲಾಗಿದೆ. ಇಂತಹ ಕಿಡಿಗೇಡಿ ಕೃತ್ಯಗಳಿಂದಲೇ ರಾಜ್ಯದಲ್ಲಿ ಹಲವಾರು ಬಾರಿ ಕಾನೂನು ಸುವ್ಯವಸ್ಥೆ, ಶಾಂತಿ ಕದಡಿ ಕೋಮುಗಲಭೆಗಳು ನಡೆದ ಉದಾಹರಣೆ ಇದೆ. .ನಕಲಿ ಬುರ್ಕಾಧಾರಿ ಮುಸ್ಲಿಂ ವಿದ್ಯಾರ್ಥಿನಿಯ ಪಾತ್ರವನ್ನು ಸೃಷ್ಟಿಸಿ ಎರಡು ಸಮುದಾಯವನ್ನು ಎತ್ತಿಕಟ್ಟುವ(IPC 153, 153a, 153b,), ಅಶಾಂತಿ, ಧರ್ಮವನ್ನು ಬಳಸಿ ಗಲಭೆ ಸೃಷ್ಟಿಸುವ (IPC 298), ಪ್ರಚೋದನೆಗೊಳಪಡಿಸುವ(IPC 504), ಧರ್ಮವನ್ನು ಅವಮಾನಿಸುವ ( 295A) ಅಪರಾಧ ಮಾಡಿರುವ ಕಿರಿಕ್ ಕೀರ್ತಿ ಯಾನೆ ಕೀರ್ತಿ ಶಂಕರಘಟ್ಟ, ಮಹೇಶ್ ವಿಕ್ರಂ ಹೆಗ್ಡೆ ಮತ್ತು ಅನಾಮಿಕ ಬುರ್ಕಾಧಾರಿ ನಕಲಿ ಮಹಿಳೆಯ ವಿರುದ್ದ ದೂರು ನೀಡುತ್ತಿದ್ದು ಈ ಮೂವರು ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಸುಹೈಲ್ ಖಾನ್ ದೂರು ಸಲ್ಲಿಸಿದರು. ಈ ಸಂದರ್ಭ ಎಸ್.ಡಿ.ಟಿ.ಯು ಸಂಘಟನೆಯ ರಾಜ್ಯ ನಾಯಕ ಶರೀಫ್ ಪಾಂಡೇಶ್ವರ ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ