janadhvani

Kannada Online News Paper

ಉದ್ದಬೆಟ್ಟು: ಐತಿಹಾಸಿಕ 14 ನೇ ತ್ರೈ ವಾರ್ಷಿಕ ನೇರ್ಚೆ- ಫೆ.28 ರಿಂದ ಮಾ.5 ರವರೆಗೆ

ಮಂಗಳೂರು: ಇತಿಹಾಸ ಪ್ರಸಿದ್ಧ ಸಯ್ಯಿದ್ ಹಸನ್ ಹೈದ್ರೋಸ್ ಜುಮಾ ಮಸ್ಜಿದ್ ಉದ್ದಬೆಟ್ಟು, ಮಲ್ಲೂರು ಇದರ ಶಿಲಾನ್ಯಾಸಗೈದವರೂ ಹಲವಾರು ಕರಾಮತ್ ಗಳಿಂದ ಸುಪ್ರಸಿದ್ಧರೂ ಆಗಿರುವ ಸಯ್ಯಿದ್ ಹಸನ್ ಹೈದ್ರೋಸ್ ತಂಞಳ್ (ಖ.ಸಿ) ರವರ ಸ್ಮರಣಾರ್ಥ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಐತಿಹಾಸಿಕ 14 ನೇ ತ್ರೈ ವಾರ್ಷಿಕ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಇದೇ ಬರುವ ದಿನಾಂಕ 28-02-2022 ರಿಂದ 05-03-2022 ರವರೆಗೆ ಜರುಗಲಿರುವುದು.

ದಿನಾಂಕ 28-02-2022 ರಂದು ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಜಮಾಲಿಯಾ ಜುಮ್ಮಾ ಮಸ್ಜಿದ್ ಬೈಲುಪೇಟೆ ಖತೀಬರಾದ ಮುಹಮ್ಮದ್ ಶರೀಫ್ ಅರ್ಶದಿ ಉದ್ಘಾಟಿಸಲಿರುವರು. ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ದುಆ ಗೈಯಲಿರುವರು. ಉದ್ದಬೆಟ್ಟು ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಬಿ. ನಿಝಾಮುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ದಬೆಟ್ಟು ಜುಮ್ಮಾ ಮಸ್ಜಿದ್ ಖತೀಬರಾದ ಮುಹಮ್ಮದ್ ಶರೀಫ್ ದಾರಿಮಿ ಮುಖ್ಯ ಪ್ರಭಾಷಣಗೈಯಲಿದ್ದಾರೆ. ಅಬ್ದುಲ್ ಖಾದರ್ ಮುನವ್ವರಿ, ಮುಹಮ್ಮದ್ ಶರೀಫ್ ಫೈಝಿ, ಇಬ್ರಾಹಿಂ ಸಜಿಪ, ಎಂ ಮುಹಮ್ಮದ್ ಸೇರಿದಂತೆ ಮಸ್ಜಿದ್ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ದಿನಾಂಕ 01-03-2022 ರಂದು ಉಡುಪಿ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಗೈಯಲಿದ್ದು, ರಫೀಖ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಗೈಯಲಿರುವರು.

ದಿನಾಂಕ 02-03-2022 ರಂದು ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಲಕಟ್ಟೆ ಹಝ್ರತ್ ದುಆ ನೆರವೇರಿಸಲಿದ್ದು ಅಶ್ರಫ್ ರಹ್ಮಾನಿ ಚೌಕಿ ಕಾಸರಗೋಡು ಮುಖ್ಯ ಪ್ರಭಾಷಣಗೈಯಲಿರುವರು.

ದಿನಾಂಕ 03-03-2022 ರಂದು ಸ್ವಲಾತ್ ವಾರ್ಷಿಕ ಕಾರ್ಯಕ್ರಮ ನಡೆಯಲಿದ್ದು ಇದರ ನೇತೃತ್ವವನ್ನು ಸಯ್ಯಿದ್ ನಜ್ಮುದ್ದೀನ್ ಪೂಕೋಯ ತಂಞಳ್ ಅಲ್ ಹೈದ್ರೋಸಿ ವಹಿಸಲಿದ್ದಾರೆ. ಅಶ್ಫಾಕ್ ಫೈಝಿ ನಂದಾವರ ಮುಖ್ಯ ಪ್ರಭಾಷಣಗೈಯಲಿರುವರು.

ದಿನಾಂಕ 04-03-2022 ರಂದು ಸಂಜೆ 6.30 ಕ್ಕೆ ಸೌಹಾರ್ದ ಸಂಗಮ ಕಾರ್ಯಕ್ರಮ ಜರುಗಲಿರುವುದು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ‌.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು. ಸಂಸದರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿರುವರು. ಅಹ್ಮದ್ ನಈಮ್ ಮುಕ್ವೆ ಸೌಹಾರ್ದ ಸಂದೇಶ ನೀಡಲಿರುವರು. ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್, ಮಾಜಿ ಸಚಿವರಾದ ಬಿ‌. ರಮಾನಾಥ ರೈ, ಮಾಜಿ ಶಾಸಕರಾದ ಮೊಹಿದ್ದೀನ್ ಬಾವಾ, ಮಲ್ಲೂರು ಗ್ರಾ.ಪಂ. ಅಧ್ಯಕ್ಷರಾದ ಇಸ್ಮಾಯಿಲ್ ಎಂ.ಇ, ಎಸ್ ಡಿ ಪಿ ಐ ಮುಖಂಡರಾದ ರಿಯಾಝ್ ಫರಂಗಿಪೇಟೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಯುವ ಕಾಂಗ್ರೆಸ್ ರಾಜ್ಯ ಮುಖಂಡರಾದ ಮಿಥುನ್ ರೈ ಸೇರಿದಂತೆ ಸ್ಥಳೀಯ ಹಿಂದೂ ಮುಸ್ಲಿಂ ಕ್ರೈಸ್ತ ಮುಖಂಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ 8.30 ಕ್ಕೆ ಸಯ್ಯಿದ್ ಶರಫುದ್ದೀನ್ ತಂಞಳ್ ಗಾಂಧಿನಗರ ದುಆ ನೆರವೇರಿಸಲಿದ್ದು, ಅಂತಾರಾಷ್ಟ್ರೀಯ ವಾಗ್ಮಿ ಖಲೀಲ್ ಹುದವಿ ಕಾಸರಗೋಡು ಮುಖ್ಯ ಪ್ರಭಾಷಣ ಗೈಯಲಿದ್ದಾರೆ.

ದಿನಾಂಕ 05-03-2022 ರಂದು ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಸಯ್ಯಿದ್ ಆಲೀ ತಂಞಳ್ ಕುಂಬೋಳ್ ದುಆ ನೆರವೇರಿಸಲಿದ್ದಾರೆ. ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಉದ್ಘಾಟಿಸಲಿದ್ದಾರೆ. ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಅಧ್ಯಕ್ಷರಾದ ಅನೀಸ್ ಕೌಸರಿ ಮುಖ್ಯ ಪ್ರಭಾಷಣ ಗೈಯಲಿರುವರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೆಯರ್ ಮ್ಯಾನ್ ಮೌಲಾನಾ ಶಾಫಿ ಸಅದಿ ಬೆಂಗಳೂರು, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್, ಭಾಷಾ ತಂಗಳ್, ಹಾಜಿ ಅಬ್ದುಲ್ ಸತ್ತಾರ್ ಚಿಕ್ಕಮಗಳೂರು, ಹಾಜಿ ಅಬ್ದುಲ್ ರಹಿಮಾನ್ ಹಾಸ್ಕೋ ಮೂಡಬಿದ್ರೆ, ಮುಹಮ್ಮದ್ ಹನೀಫ್ ಸೆಂಟ್ರಲ್ ಕಮಿಟಿ, ಹಾಜಿ ಅಬ್ದುಲ್ ರಝಾಕ್, ನೌಶಾದ್ ಹಾಜಿ ಸೂರಲ್ಪಾಡಿ ಸೇರಿದಂತೆ ಸ್ಥಳೀಯ ಮಸ್ಜಿದ್ ಖತೀಬರು, ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಉದ್ದಬೆಟ್ಟು ಮಸ್ಜಿದ್ ಅಧ್ಯಕ್ಷರಾದ ಬಿ. ನಿಝಾಮುದ್ದೀನ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಯು.ಉಮರಬ್ಬ, ಜೊತೆ ಕಾರ್ಯದರ್ಶಿ ಸುಹೈಲ್ ಉದ್ದಬೆಟ್ಟು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com