ಫೆಬ್ರವರಿ 23ರಂದು ರೌಳತುಲ್ ಉಲೂಂ ಓಲ್ಡ್ ಸ್ಟೂಡೆಂಟ್ಸ್ ಉಕ್ಕುಡ ಇದರ ಮಹಾಸಭೆ ಹಾಗೂ ಸ್ನೇಹ ಸಂಗಮವು ಕರ್ನಾಟಕ ಮುಸ್ಲಿಮ್ ಜಮಾಅತ್ ಪುತ್ತೂರು ತಾಲೂಕು ಕಚೇರಿಯಲ್ಲಿ ಶೈಖುನಾ ಅಬ್ದುರ್ರಹ್ಮಾನ್ ಫೈಝಿ ಉಸ್ತಾದ್ ಕರ್ನೂರು (ಉಕ್ಕುಡ ಉಸ್ತಾದ್) ರವರ ನೇತೃತ್ವದಲ್ಲಿ ನಡೆಯಿತು. ಮೂಸ ಸಖಾಫಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಸಖಾಫಿ ಎಣ್ಮೂರು ರವರು ಖಿರಾಅತ್ ಪಠಿಸಿದರು, ಹಾಜಿ ಮುಹಮ್ಮದ್ ಸಖಾಫಿ ಅಲಿಕೆ ಜಗದೊಡೆಯನ ನಾಮದಿಂದ ಕಾರ್ಯಕ್ರಮ ವನ್ನು ಉದ್ಘಾಟಿಸಿದರು
ಪ್ರಧಾನ ಕಾರ್ಯದರ್ಶಿ ಮಂಡಿಸಿದ ವರದಿ ಹಾಗೂ ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗಿಕರಿಸಲಾಯಿತು. ಸದ್ರಿ ಕಾರ್ಯಕ್ರಮದಲ್ಲಿ ಖಾಲಿದ್ ಸಖಾಫಿ ಪಂಜ, ಮುಹಮ್ಮದ್ ಅಲಿ ಸಖಾಫಿ ಮಾದಾಪುರ, ಅಬ್ದುಲ್ಲಾ ಸಖಾಫಿ ಕಂಬಿಬಾನ, ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಮುಹಮ್ಮದ್ ಶರೀಫ್ ಸಖಾಫಿ ಸತ್ತಿಕ್ಕಳ್, ಅಬೂಬಕ್ಕರ್ ಝುಹ್ರಿ ಕೋಟ್ಟುಂಬೆ, ಅಶ್ರಫ್ ಸಖಾಫಿ ಪರ್ಪುಂಜ, ಝೈನುದ್ದೀನ್ ಸಖಾಫಿ ತೆಕ್ಕಾರು ಹಾಗೂ ಮುಹಮ್ಮದ್ ಹನೀಫ್ ಸಖಾಫಿ ಗರ್ಗಂದೂರು ಅನುಭವದ ಮಾತು ಮಾತನಾಡಿದರು
ನಂತರ ನೂತನ ಸಮಿತಿ ರಚನೆ ಶೈಖುನಾ ಉಕ್ಕುಡ ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರಾಗಿ ಮೂಸ ಸಖಾಫಿ ಮಾದಾಪುರ, ಪ್ರ ಕಾರ್ಯದರ್ಶಿ ಅಬ್ದುಲ್ ರಝಾಕ್ ಲತೀಫಿ ಕುಂತೂರು, ಕೋಶಾಧಿಕಾರಿ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ, ಉಪಾಧ್ಯಕ್ಷರಾಗಿ ಮುಹಮ್ಮದ್ ಅಲಿ ಸಖಾಫಿ ಮಾದಾಪುರ, ಮುಹಮ್ಮದ್ ಶರೀಫ್ ಸಖಾಫಿ ಸತ್ತಿಕ್ಕಳ್ ಹಾಗೂ ಆಬೀದ್ ಸಖಾಫಿ ಮುಳರಪಟ್ನ, ಕಾರ್ಯದರ್ಶಿಗಳಾಗಿ ಶಮೀರ್ ಸಖಾಫಿ ಗರ್ಗಂದೂರು ಹಾಗೂ ಬಶೀರ್ ಸಖಾಫಿ ಉಕ್ಕುಡ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬೂಬಕ್ಕರ್ ಝುಹ್ರಿ ಕೋಟ್ಟುಂಬೆ, ಇಸ್ಮಾಯಿಲ್ ಸಖಾಫಿ ಕರ್ನೂರು, ಅಬ್ದುರ್ರಹ್ಮಾನ್ ಸಖಾಫಿ ಬೀಟಿಗೆ, ಅಶ್ರಫ್ ಸಖಾಫಿ ಪರ್ಪುಂಜ, ಅಬ್ದುಲ್ ಲತೀಫ್ ಝುಹ್ರಿ ಕೆಮ್ಮಾರ, ಸುಲೈಮಾನ್ ಸಖಾಫಿ ಗರ್ಗಂದೂರು ಹಾಗೂ ಆದಂ ಮುಸ್ಲಿಯಾರ್ ನಚ್ಚಬೊಟ್ಟು ರವರನ್ನು ಆಯ್ಕೆ ಮಾಡಲಾಯಿತು
ಪ್ರ ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು ರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಶಮೀರ್ ಸಖಾಫಿ ಗರ್ಗಂದೂರು ಧನ್ಯವಾದ ಹೇಳಿದರು.