janadhvani

Kannada Online News Paper

ಪಿಎಫ್ಐ ಸಂಸ್ಥಾಪನಾ ದಿನ: ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಧ್ವಜಾರೋಹಣ

ಬೆಳ್ತಂಗಡಿ (ಫೆ.17): ಗಣರಾಜ್ಯ ರಕ್ಷಿಸಿ ಘೋಷಣೆಯಡಿ ಸಂಸ್ಥಾಪನಾ ದಿನದ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ವತಿಯಿಂದ ತಾಲೂಕಿನಾದ್ಯಂತ 12 ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಪುಂಜಾಲಕಟ್ಟೆಯಲ್ಲಿ ಧ್ವಜಾರೋಹಣಗೈದು ಸಂದೇಶ ಭಾಷಣ ಮಾಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಮುಸ್ತಾಫ ಜಿ ಕೆ ಸುನ್ನತ್ ಕೆರೆಯಲ್ಲಿ ಧ್ವಜಾರೋಹಣ ಮಾಡಿದರು.

ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ, ಟಿ ಬಿ ಕ್ರಾಸ್ ಉಜಿರೆ, ಬೆಳ್ತಂಗಡಿ, ಬೆದ್ರಬೆಟ್ಟು, ಸುನ್ನತ್ ಕೆರೆ, ಪಡ್ಡಂದಡ್ಕ, ಪುಂಜಾಲಕಟ್ಟೆ, ಕುದ್ರಡ್ಕ, ಬಂಗೇರಕಟ್ಟೆ, ಪಣಕಜೆ, ಕಾವಳಕಟ್ಟೆ, ಪಾಂಡವರಕಲ್ಲು ಸ್ಥಳಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕಿನ ಹಲವಾರು ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.