ಮಂಗಳೂರು: 2019 ನವೆಂಬರ್ 24ರಂದು ಸೌದಿ ಅರೇಬಿಯಾದ ಅಲ್-ಖೋಬಾರ್, ದಹ್’ರಾನ್ ನಲ್ಲಿ ಕೃಷ್ಣಾಪುರದ ಮುಹಮ್ಮದ್ ನೌಶೀದ್ ರವರು ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದರು. ಮರಣ ಹೊಂದಿದ ಮೂರೇ ದಿನಗಳಲ್ಲಿ ಅದಕ್ಕೆ ಬೇಕಾದ ದಾಖಲೆಗಳನ್ನು ಸರಿಪಡಿಸಿ ಜುಬೈಲ್ ನಲ್ಲಿ ಅವರ ದಫನ ಮಾಡಲಾಗಿದೆ.
ಈ ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಧನಕ್ಕೆ ಬೇಕಾದ ದಾಖಲೆಗಳು ಹಾಗೂ ಇನ್ನಿತರ ಕಾರ್ಯಗಳನ್ನು ಮಾಡುವ ಜವಾಬ್ದಾರಿಯನ್ನು ನೌಶೀದ್ ರವರ ಕುಟುಂಬದವರು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ರವರಿಗೆ ವಹಿಸಿ ಕೊಟ್ಟಿದ್ದರು.
ಅದರಂತೆ ಮುಹಮ್ಮದ್ ಮಲೆಬೆಟ್ಟು ರವರ ಕಳೆದ ಎರಡು ವರ್ಷಗಳ ಸತತ ಪ್ರಯತ್ನದಿಂದ ನೌಶೀದ್ ರವರ ಕುಟುಂಬಕ್ಕೆ ಪರಿಹಾರವಾಗಿ 3 ಲಕ್ಷ ಸೌದಿ ಅರೇಬಿಯಾ ರಿಯಾಲ್ (58,56,200 ರೂಪಾಯಿ) ಸಿಕ್ಕಿರುತ್ತದೆ.
ಈ ಮೊತ್ತವನ್ನು 2022 ಫೆಬ್ರವರಿ 04 ರಂದು ಕೃಷ್ಣಾಪುರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಲ್ಲಿನ ಅಧ್ಯಕ್ಷರಾದ ಮುಮ್ತಾಝ್ ಅಲಿ, ಇಮಾಮ್ ಫಾರೂಕ್ ಸಖಾಫಿ ಉಸ್ತಾದರು ಜಮಾಅತಿನವರ ಸಮ್ಮುಖದಲ್ಲಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಕಲ್ಚರಲ್ ಫೌಂಡೇಶನ್ ಅನಿವಾಸಿ ಕನ್ನಡಿಗರಿಗೆ ನೆರಳಾಗಿ ವಿದೇಶದಲ್ಲಿ ಕಾರ್ಯಾಚರಿಸುತ್ತಿದೆ. ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಸತತ ಪ್ರಯತ್ನದಿಂದಾಗಿ ಇಂದು ಈ ಪರಿಹಾರ ಧನ ನೌಶೀದ್ ರವರ ಕುಟುಂಬಕ್ಕೆ ಸಿಗುವಂತಾಗಿದೆ ಎಂದು ಹಸ್ತಾಂತರ ಸಮಯದಲ್ಲಿ ಮುಮ್ತಾಝ್ ಅಲಿಯವರು ಹೇಳಿದರು.
ಈ ಪರಿಹಾರ ಧನ ಸಿಗಲು ಎರಡು ವರ್ಷಗಳಿಂದ ಪ್ರಯತ್ನಿಸಿದ ಸೌದಿ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ರವರನ್ನು ದಮ್ಮಾಮ್ ಝೋನ್ ಹಾಗೂ ಸೌದಿ ರಾಷ್ಟ್ರೀಯ ಸಮಿತಿ ನೇತಾರರು ಅಭಿನಂದಿಸಿದ್ದಾರೆ.
ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ