janadhvani

Kannada Online News Paper

ಎಸ್.ಎಮ್.ಎ ಉಡುಪಿ ರಿಜಿನಲ್: ಎಮ್ಮೆಮ್ ಮೀಟ್ ಯಶಸ್ವಿ ಸಮಾಪ್ತಿ

ಉಡುಪಿ: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಎಸ್ ಎಮ್ ಎ ಉಡುಪಿ ರಿಜಿನಲ್ ಸಮಿತಿ ನಡೆಸಿದ ರಿಜಿನಲ್ ಸಮಿತಿಗೆ ಒಳಪಟ್ಟ 22 ಮದ್ರಸಗಳ ಸಂದರ್ಶನ ಹಾಗೂ ಏಕ ದಿನ ಕ್ಯಾಂಪ್ ಬಹಳ ಯಶಸ್ವಿಯೊಂದಿಗೆ ಸಮಾಪ್ತಿಗೊಂಡಿತು.

ಕಟಪಾಡಿ ಅಶೈಖ್ ಫಕೀರ್ ಶಾಹ್ ವಲಿಯುಲ್ಲಾಹಿ ರವರ ಮಖಾಂ ಝಿಯಾರತ್ ನೊಂದಿಗೆ ಕಟಪಾಡಿ ಮದ್ರಸಾ ಸಭಾಂಗಣದಲ್ಲಿ ಆರಂಭ ಗೊಂಡ ಎಮ್ಮೆಮ್ ಮೀಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಜಿನಲ್ ಸಮಿತಿಯ ಅಧ್ಯಕ್ಷರಾದ ಅಡ್ವಕೆಟ್ ಹಬೀಬ್ ಅಲಿ ಅಂಬಾಗಿಲು ರವರು ವಹಿಸಿದ್ದರು.

ಎಸ್ ಜೆ ಎಮ್ ಉಡುಪಿ ರೇಂಜ್ ಅಧ್ಯಕ್ಷರಾದ ಅಲ್ಹಾಜ್ ಬಶೀರ್ ಮದನಿ ಕಟಪಾಡಿ ಉದ್ಘಾಟಿಸಿದರು.
ಎಸ್ ಎಮ್ ಎ ಕ್ಷೇಮ ನಿಧಿ ವಿಭಾಗದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಸಖಾಫಿ ಮೂಡಡ್ಕ ಎಸ್ ಎಮ್ ಎ ಹಾಗೂ ಎಸ್ ಜೆ ಎಮ್ ಇದರ ಕಾರ್ಯಾಚರಣೆ ಬಗ್ಗೆ ಹಾಗೂ ಎಸ್ ಎಮ್ ಎ ರಾಜ್ಯ ನಾಯಕ ಎನ್ ಎಸ್ ಉಮರ್ ಮಾಸ್ಟರ್ ಮದ್ದಡ್ಕ ಹೀಗಿನ ಮದ್ರಸ ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ಅಜ್ಮೀರ್ ಖಾಜಾ ತಂಙಳ್ ಹಾಗೂ ನಮ್ಮಿಂದ ಅಗಲಿದ ನಾಯಕರ ಹೆಸರಲ್ಲಿ ಅನುಸ್ಮರಣಾ ಮಜ್ಲಿಸ್ ನ ನೇತೃತ್ವವನ್ನು ಅಸ್ಸಯ್ಯಿದ್ ಜುನೈದ್ ಅರ್ರಿಫಾಯಿ ತಂಙಳ್ ವಹಿಸಿದ್ದರು
ಸುನ್ನೀ ಸಂಘಟನೆಗಳ ಒಕ್ಕೂಟ ಇದರ ಜಿಲ್ಲಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಅನುಸ್ಮರಣಾ ಭಾಷಣ ಮಾಡಿದರು.

ಎಸ್ ಎಮ್ ಎ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಕೋಡಿ, ಪ್ರಧಾನ ಕಾರ್ಯದರ್ಶಿ ಕೊಂಬಾಳಿ ಝುಹ್ರಿ, ಫಾರೂಖ್ ಮಿಸ್ಬಾಹಿ ಹೊಡೆ, ಅಲ್ಹಾಜ್ ಉಸ್ಮಾನ್ ಮದನಿ ನೇಜಾರು,ಕರ್ನಾಟಕ ಮುಸ್ಲಿಂ ಜಿಲ್ಲಾ ಉಪಾಧ್ಯಕ್ಷ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಮೊಯ್ದಿನ್ ಸಾಹೇಬ್ ಭದ್ರಗಿರಿ, ಆರ್ ಕೆ ಫಾರೂಖ್ ರಂಗಿನಕೆರೆ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ರಿಜಿನಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಕಟಪಾಡಿ ಸ್ವಾಗತಿಸಿದರು ಕೋಶಾಧಿಕಾರಿ ವೈ ಎಮ್ ಇಲ್ಯಾಸ್ ಕಟಪಾಡಿ ವಂದಿಸಿದರು.
ವರದಿ: ಅಬ್ದು,ಹೊಸ್ಮಾರು