ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66,ರ NITK ಟೋಲ್ ಗೇಟ್ ವಿರುದ್ಧ ಮತ್ತೊಮ್ಮೆ ಪ್ರತಿಭಟನೆಯ ಕೂಗು ಕೇಳಿಬಂದಿದೆ.
“ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಪಾವತಿಸಬೇಕೇ.?, ತಾತ್ಕಾಲಿಕ ನೆಲೆಯಲ್ಲಿ ಸ್ಥಾಪಿಸಿದ ಅಕ್ರಮ NITK ಸುಲಿಗೆ ಕೇಂದ್ರವನ್ನು ಸ್ಥಗಿತಗೊಳಿಸಬೇಕು, ಇಲ್ಲವೇ, ಹೆಜಮಾಡಿಯಲ್ಲಿ ಟೋಲ್ ಶುಲ್ಕ ನೀಡಿ ಬರುವ ವಾಹನಗಳಿಗೆ ಇಲ್ಲಿ ಉಚಿತ ಪ್ರವೇಶ ನೀಡಬೇಕು” ಎಂಬುವುದಾಗಿದೆ ಪ್ರತಿಭಟನೆ ನಿರತರ ಕೂಗು.
ಸೋಮವಾರ ಬೆಳಿಗ್ಗೆಯಿಂದಲೇ NITK ಟೋಲ್ ಕೇಂದ್ರದ ಬಳಿ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ, ನಡೆಯುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯಲ್ಲಿ, ಸ್ಥಳೀಯ ಸಂಘ ಸಂಸ್ಥೆಗಳು, ಟೆಂಪೋ, ಟ್ಯಾಕ್ಸಿ ಯೂನಿಯನ್ ಗಳು, ಲಾರಿ, ಟಿಪ್ಪರ್, ಬಸ್ಸು ಮಾಲಕರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕ, ಸಾಮಾಜಿಕ ಕಾರ್ಯಕರ್ತರು ಸಾತ್ ನೀಡಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸದಸ್ಯ, ಲಯನ್ ಹರೀಶ್ ಪುತ್ರನ್ ಮುಲ್ಕಿ, ರಾಜ್ಯ ಟ್ರಕ್ ಮಾಲಕರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸುಶಾಂತ್ ಶೆಟ್ಟಿ, ಕುಂದಾಪುರ ಲಾರಿ ಮಾಲಕರ ಸಂಘದ ಅಧ್ಯಕ್ಷ, ಮನ್ಸೂರು ಅಹ್ಮದ್, ಉಡುಪಿ ಜಿಲ್ಲಾ ಲಾರಿ ಯೂನಿಯನ್ ಅಧ್ಯಕ್ಷ, ಮಸೂದ್ ಬ್ರಹ್ಮಾವರ, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ಕ.ರ.ವೆ ಕಾಪು ಅಧ್ಯಕ್ಷ ನಿಝಾಮ್ ಪಡುಬಿದ್ರಿ, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು,
ಮುಲ್ಕಿ-ಮೂಡಬಿದ್ರೆ ಕ್ಷೇತ್ರದ SDPI ಅಧ್ಯಕ್ಷರು ಅಶಿಫ್ ಕೋಟೆಬಾಗಿಲು ಆಧ್ಯಾತ್ಮಿಕ ಗುರೂಜಿ ಜೆ.ಶ್ರೀಯಾನ್, ಕರ್ನಾಟಕ ಪ್ರಾಂತ್ಯ ಮತ್ತು ಕಾರ್ಮಿಕ ರಕ್ಷಣ ವೇದಿಕೆ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಇಲ್ಯಾಸ್ ಚೊಕ್ಕಬೆಟ್ಟು, ರಿಲಯನ್ಸ್ ಅಸೋಸಿಯೇಷನ್ ನ ಆರಿಸ್ ನವರಂಗ್, ಅಬ್ದುಲ್ ಖಾದರ್ ಕೃಷ್ಣಾಪುರ, ನೌಫಲ್ ಕಲ್ಕಾರ್, ಜನಾರ್ಧನ ತೋನ್ಸೆ, ರಝಾಕ್ ಕಂಚಿನಡ್ಕ, ಸಾದಿಕ್ ಬಂಟ್ವಾಳ, ಅಕ್ಷಯ ಪೂಜಾರಿ ಪಲಿಮಾರ್, ನಿಝಾಮ್ ಪಡುಬಿದ್ರೆ, ಮ್ಯಾನುವಲ್ ಸುಕುಮಾರ್, ಪ್ರಶಾಂತ್ ಕಾಂಚನ್ ಕೊಲ್ನಾಡ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.