janadhvani

Kannada Online News Paper

ಭಾರೀ ಮಳೆ: ತಾಜ್‌ ಮಹಲ್‌ ಪ್ರವೇಶ ದ್ವಾರದ ಸ್ತಂಭ ಉರುಳಿ ಬಿತ್ತು

ಆಗ್ರಾ : ನಿನ್ನೆ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಬೀಸಿದ ಪ್ರಬಲ ಗಾಳಿಗೆ ಇಲ್ಲಿನ ವಿಶ್ವ ಪ್ರಸಿದ್ಧ ತಾಜ್‌ ಮಹಲ್‌ ಐತಿಹಾಸಿಕ ಸ್ಮಾಕರದ ಪ್ರವೇಶ ದ್ವಾರದ ಸ್ತಂಭವೊಂದು ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ.

ತಾಜ್‌ ಮಹಲ್‌ ಪ್ರವೇಶಿಸುವ ದಕ್ಷಿಣ ಭಾಗದಲ್ಲಿರುವ ಪ್ರವೇಶ ದ್ವಾರದ ಸ್ತಂಭ ಉರುಳಿ ಬಿದ್ದಾಗ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ವರದಿಗಳು ತಿಳಿಸಿವೆ.

ತಾಜ್‌ ಮಹಲ್‌ಗೆ ಯಾವುದೇ ರೀತಿಯಲ್ಲಿ ಪ್ರಾಕೃತಿಕ ಹಾನಿ ಉಂಟಾಗದಂತೆ ಅದನ್ನು ಸಂರಕ್ಷಿಸಿಡುವ ಕೆಲಸಗಳು ನಡೆಯುತ್ತಿರುವ ನಡುವೆಯೇ ಈ ದುರಂತ ಸಂಭವಿಸಿದೆ.

ಈಚೆಗಷ್ಟೇ ಅಧಿಕಾರಿಗಳು ತಾಜ್‌ ಮಹಲ್‌ ಪ್ರವೇಶಿಸುವ ಅವಧಿಯನ್ನು ಮೂರು ಗಂಟೆಗೆ ಇಳಿಸುವ ಕ್ರಮ ಕೈಗೊಂಡಿದ್ದರು. ಈ ಐತಿಹಾಸಿಕ ಸ್ಮಾರಕ ಸಾಕಷ್ಟು ಹಳತಾಗಿರುವುದರಿಂದ ಪ್ರವಾಸಿಗರ ಒತ್ತಡಕ್ಕೆ ಗುರಿಯಾಗುವುದನ್ನು ಕಡಿಮೆ ಮಾಡಲು ಅಧಿಕಾರಿಗಳು ಈ ಕ್ರಮ ತೆಗೆದುಕೊಂಡಿದ್ದರು.

ಉತ್ತರ ಪ್ರದೇಶದ ಲಕ್ನೋ, ಕಾನ್ಪುರ, ಮಥುರಾ, ಕನೌಜ್‌, ಫಾರೂಕಾಬಾದ್‌, ಇಟಾವಾ ಮತ್ತು ಮೈನ್‌ಪುರಿಯಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ.

error: Content is protected !! Not allowed copy content from janadhvani.com