ದುಬೈ: ದುಬೈನಲ್ಲಿ, ಗಂಭೀರವಲ್ಲದ ಪ್ರಕರಣಗಳಲ್ಲಿ ಬಂಧಿತರಾಗಿರುವವರು ಇನ್ನುಮುಂದೆ ಜಾಮೀನು ಲಭಿಸಲು ತಮ್ಮ ಪಾಸ್ ಪೋರ್ಟ್ ಗಳನ್ನು ಶರಣಾಗತಿ ಮಾಡಬೇಕಾದ ಅವಶ್ಯಕತೆ ಇಲ್ಲ. ಸ್ಮಾರ್ಟ್ ಬೇಲ್ ಅನುಷ್ಠಾನದ ನಂತರ ಈ ಬದಲಾವಣೆಯನ್ನು ಮಾಡಲಾಗುವುದು.
ದುಬೈನಲ್ಲಿ ಗಂಭೀರವಲ್ಲದ ಪ್ರಕರಣಗಳಲ್ಲಿ ಬಂಧಿಸಲ್ಪಡುವ ಆರೋಪಿ ಮತ್ತು ಜಾಮೀನುದಾರನ ವಿವರಗಳನ್ನು ಎಲೆಕ್ಟ್ರಾನಿಕ್ ರೆಕಾರ್ಡ್ ನಲ್ಲಿ ದಾಖಲಿಸಲಾಗುವುದು. ಆರೋಪಿಗೆ ಪಾಸ್ಪೋರ್ಟ್ ಕೈಯಲ್ಲಿದ್ದರೂ ದೇಶವನ್ನು ಬಿಡುವಂತಿಲ್ಲ, ಆದ್ದರಿಂದ ಜಾಮೀನಿಗಾಗಿ ಇನ್ನುಮುಂದೆ ಪಾಸ್ ಪೋರ್ಟ್ ನ್ನು ಅಡವಿಯಲ್ಲಿ ಇಡಬೇಕಾಗಿಲ್ಲ. ಈ ಮೂಲಕ ಅವರ ವೀಸಾವನ್ನು ನವೀಕರಿಸಲು ಮತ್ತು ಅವರ ಪಾಸ್ ಪೋರ್ಟ್ ಗಳನ್ನು ನವೀಕರಿಸಲು ಸಾಧ್ಯವಾಗುತ್ತದೆ.
ದೇಶದಲ್ಲಿ ಸಾಧಾರಣ ರೀತಿಯಲ್ಲಿ ಪ್ರತಿವಾದಿಗಳಿಗೂ ಬದುಕಲು ಸಾಧ್ಯವಾಗುತ್ತದೆ ಎಂದು ದುಬೈ ಸಾರ್ವಜನಿಕ ಪ್ರಾಸಿಕ್ಯೂಷನ್‌ನ ಮುಖ್ಯ ಪ್ರಾಸಿಕ್ಯೂಟರ್ ಅಲಿ ಹುಮೈದ್ ಅಲ್ ಖತಿಂ ಹೇಳಿದರು.
ಈ ವರ್ಷದ ಜನವರಿಯಿಂದ, ಹೊಸ ವ್ಯವಸ್ಥೆಯು ಜಬೆಲ್ ಅಲಿ ಪೊಲೀಸ್ ಠಾಣೆಯಲ್ಲಿ ಜಾರಿಗೆ ಬಂದಿದೆ.
ಚೆಕ್‌ಗಳ ಮರಳುವಿಕೆ, ವಿಶ್ವಾಸ ವಂಚನೆ, ಮದ್ಯಪಾನ, ಕಳ್ಳತನ ಇತ್ಯಾದಿಗಳನ್ನು ಈ ಸಿಸ್ಟಮ್ ಮೂಲಕ ಜಾಮೀನು ಒದಗಿಸಲಾಗುತ್ತದೆ.
ಹೊಸ ಕಾನೂನು ಮುಖಾಂತರ ವರ್ಷವೊಂದಕ್ಕೆ ಸರಾಸರಿ 30,000 ರಿಂದ 40,000 ಪಾಸ್ ಪೋರ್ಟ್ ಗಳ ವ್ಯವಹರಣಕ್ಕಾಗಿ ಮಾಡಲಾಗುವ ಖರ್ಚು ಲಾಭವಾಗಲಿದೆ. ದುಬೈನಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸ್ಮಾರ್ಟ್ ಬೇಲ್ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ಅಲಿ ಹಮೈದ್ ಅಲ್-ಖಾತಿಂ ಹೇಳಿದರು.