janadhvani

Kannada Online News Paper

ಭಾರತದಲ್ಲಿ facebook ಬದಲು ‘hello’ ಹೊಸ ಸಾಮಾಜಿಕ ಜಾಲತಾಣ ಆರಂಭ

ಹೊಸದಿಲ್ಲಿ: ಕೇಂಬ್ರಿಜ್‌ ಅನಾಲಿಟಿಕಾ ಪ್ರಕರಣದ ನಂತರ, ಫೇಸ್‌ಬುಕ್‌ನಲ್ಲಿ ಗ್ರಾಹಕರ ವಿವರಗಳು ಭದ್ರವಾಗಿಲ್ಲ ಎಂಬ ಭಾವನೆ ಮನೆ ಮಾಡಿರುವ ಈ ಸಂದರ್ಭದಲ್ಲಿ ಭಾರತದಲ್ಲಿ ಫೇಸ್‌ಬುಕ್‌ಗೆ ಪರ್ಯಾಯವಾಗಿ “ಹಲೋ’ ಎಂಬ ಹೊಸ ಸಾಮಾಜಿಕ ಜಾಲತಾಣವೊಂದು ತನ್ನ ಸೇವೆ ಆರಂಭಿಸಿದೆ.

ಫೇಸ್‌ಬುಕ್‌ಗೂ ಮುನ್ನ ಭಾರತದಲ್ಲಿ ಚಾಲ್ತಿಯಲ್ಲಿದ್ದ ಆರ್ಕುಟ್‌ ಸಾಮಾಜಿಕ ಜಾಲತಾಣದ ಮಾತೃಸಂಸ್ಥೆಯಾದ ಹಲೋ ನೆಟ್‌ವರ್ಕ್‌ ಇಂಕ್‌ ಸಂಸ್ಥೆ “ಹಲೋ’ ಜಾರಿಗೆ ತಂದಿದ್ದು, ಇದಕ್ಕೆ ಸೇರ್ಪಡೆಗೊಳ್ಳುವ ಗ್ರಾಹಕರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡುವ ಹಾಗೂ ಮೂರನೇ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಇದರ ಮಾಹಿತಿ ಸೋರಿಕೆಯಾಗದಂತೆ ಕಟ್ಟುನಿಟ್ಟಾದ ತಂತ್ರಜ್ಞಾನ ಅಳವಡಿಸಿಕೊಳ್ಳುವ ಆಶ್ವಾಸನೆಯನ್ನು ಕಂಪೆನಿಯ ಮಾಲೀಕ ಆರ್ಕುಟ್‌ ಬಿಯುಕೋಕ್ಟನ್‌ ತಿಳಿಸಿದ್ದಾರೆ.