ಸುನ್ನೀಟುಡೇ
ಕಾಂಗ್ರೆಸ್ಸ್ ಪಕ್ಷದ ಸಿದ್ದಾಂತ, ಆದರ್ಶ ಮತ್ತು ತತ್ವಗಳಲ್ಲಿ ಬದ್ದತೆ, ವಿಶ್ವಾಸ ಮತ್ತು ಸಂಕಲ್ಪ ಇಲ್ಲದ ಕಾಂಗ್ರೆಸ್ಸ್ ನಾಯಕರು ನಾಳೆ, ಪಕ್ಷದ ಧ್ವಜವನ್ನು ಬೀದಿಗೆ ಎಸೆದು ಬೇರೆ ಪಕ್ಷದ ಧ್ವಜದ ನೆರಳಲ್ಲಿ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ಭದ್ರತೆ ಗಟ್ಟಿಗೊಳಿಸುತ್ತಾರೆ ಎಂದು ಇಲ್ಲಿನ ಮುಸ್ಲಿಮರಿಗೆ ಚೆನ್ನಾಗಿ ಗೊತ್ತಿದೆ. ಇಂತಹ ಸಿದ್ದಾಂತ ದ್ರೋಹಿಗಳು ಮಹಮ್ಮದ್ ನಳಪ್ಪಾಡ್ ನಂತ ಕಾಂಗ್ರೆಸ್ಸ್ ನಿಷ್ಠೆ ಇರುವವನ ಕಾಲರ್ ಹಿಡಿದು ಎಸೆಯುತ್ತಾರೆ. ತನ್ನ ಸಂಪತ್ತು, ವರ್ಜಸ್ಸು ಮತ್ತು ಯುವತ್ವದ ಕಿಚ್ಚನ್ನು ಕಾಂಗ್ರೆಸ್ಸ್ ನ ನಾಯಕರ ಪಾದಕ್ಕೆ ಅರ್ಪಿಸಿ ಕೃತರ್ಥ ನಾಗುವ ದುರದೃಷ್ಠ ನನಗೆ ಏಕೆ ಬಂತು ಎಂದು ನಳಪ್ಪಾಡ್ ಆಲೋಚಿಸುವುದಕ್ಕೆ ಇದು ಸಕಾಲ.
ಈ ದೇಶದಲ್ಲಿ ಜಾತ್ಯಾತೀತ ಮತ್ತು ಸೌಹಾರ್ಧತೆಯ ಪರಂಪರೆ ಉಳಿಯಬೇಕು, ಸಮಾನ ನ್ಯಾಯ -ಹಕ್ಕುಗಳಿಗೆ ಕಾಂಗ್ರೆಸ್ಸ್ ಪಕ್ಷ ಮಾತ್ರವೇ ಪರಿಹಾರ ಎಂದು 60% ಮುಸ್ಲಿಮರು ಇಂದಿಗೂ ಬಲವಾಗಿ ನಂಬಿದ್ದಾರೆ. ಹೀಗಿದ್ದೂ, ಮುಸ್ಲಿಮರಿಂದ ಅಂತರ ಕಾಯ್ದುಕೊಳ್ಳಲು ಬಯಸುವ ಕಾಂಗ್ರೆಸ್ಸ್ ನಾಯಕರ ಮನಸ್ಥಿತಿಯ ಹಿಂದೆ ಬಹು ಸಂಖ್ಯಾತರ ಸಂಪ್ರೀತಿ ಗಳಿಸುವ ತುರ್ತು ಅಗತ್ಯ ಅರಿವಾಗುತ್ತದೆ. ಮುಸ್ಲಿಮರು ಕಾಂಗ್ರೆಸ್ಸ್ ಪಕ್ಷದ ನಿರ್ಣಾಯಕ ಮತದಾರರು ಎಂದು ಆ ಪಕ್ಷದ ನಾಯಕರಿಗೆ ಗೊತ್ತಿದ್ದರೂ, ಮುಸ್ಲಿಮರು ಸಂಘಟಿತ ರಾಜಕೀಯ ಓಟ್ ಬ್ಯಾಂಕ್ ಆಗುವವರೆಗೂ ಮುಸ್ಲಿಮರನ್ನು ಎಲ್ಲಾ ಪಕ್ಷವು ಕಾಲು ಕಸ ಮಾಡುತ್ತಲೇ ಇರುತ್ತದೆ. ಕಾಲರ್ ಹಿಡಿದು ಎಸೆಯುತ್ತದೆ ಎಂದು ತಿಳಿಯಬೇಕು.
ಕಾಂಗ್ರೆಸ್ಸ್ ಪಕ್ಷವು ಸಮಪಾಲು-ಸಮಬಾಳು ತತ್ವದಲ್ಲಿ ರಾಜಿ ಮಾಡಿ ಕೊಂಡಿಲ್ಲ ಎಂಬುವುದು ಸತ್ಯ. ಪಕ್ಷ ನಿಷ್ಠೆ ಮತ್ತು ತತ್ವ ನಿಷ್ಠೆ ಇಲ್ಲದ ಅದರ ನಾಯಕರು, ಕಾಂಗ್ರೆಸ್ಸ್ ನಿಂದ ಮಾತ್ರವೇ ಮುಸ್ಲಿಮರಿಗೆ ಶ್ರೀ ರಕ್ಷೆ ಎಂದು, ಮುಸ್ಲಿಮರನ್ನು ಕಾಲುಕಸ ಮಾಡಿದರೂ, ಕಾಲರ್ ಹಿಡಿದು ಬಿಸಾಕಿದರೂ ಅವರು ಸಹಿಸಿಕೊಳ್ಳಬೇಕು. ಮುಸ್ಲಿಮರಿಗೆ ಕಾಂಗ್ರೆಸ್ಸ್ ನ ಅನಿವಾರ್ಯತೆ ಇರುವುದು, ನಮಗೆ ಮುಸ್ಲಿಮರ ಅಗತ್ಯ ಇಲ್ಲಾ ಎಂದು ಬಾವಿಸುವುದು ಪ್ರಸ್ತುತ ಸುಶಿಕ್ಷಿತ ಮುಸ್ಲಿಮರಲ್ಲಿ ಅಸಹ್ಯ ಹುಟ್ಟಿಸುವ ಆಲೋಚನೆಯಾಗಿದೆ. ಮುಸ್ಲಿಮರು ನಂಬಿರುವುದು ಕಾಂಗ್ರೆಸ್ಸ್ ನ ಉದಾತ್ತ ಸಿದ್ದಾಂತವನ್ನು ಹೊರತು ಸಿದ್ದಾಂತ ದ್ರೋಹ ಮಾಡಲು ಸಿದ್ದರಿರುವ ನಾಯಕರನ್ನಲ್ಲ ಎಂದು ಇವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.
ಮಹಮ್ಮದ್ ನಳಪ್ಪಾಡ್ ಗೆ ಕಾಂಗ್ರೆಸ್ಸ್ ನ ಅಗತ್ಯ ಇರಬಹುದು, ಆದರೆ ಮಹಮ್ಮದ್ ನ ಕಾಲರ್ ಹಿಡಿದು ಎಳೆದು ಬಿಸಾಕಿದ ಮನಸ್ಥಿತಿಯನ್ನು ಮುಸ್ಲಿಮರು ಅರ್ಥ ಮಾಡಿಕೊಂಡಿದ್ದಾರೆ. ನಿಮ್ಮ ಈ ಕೆಟ್ಟ ಮನಸ್ಥಿಯ ಹಿಂದೆ, ನಳಪ್ಪಾಡ್ ನ ಹಿರೋಯಿಝಿಂ ಬಗ್ಗೆಗಿನ ಅಸಹನೆ, ಅಥವಾ ನಳಪ್ಪಾಡ್ ನ ಉತ್ಸಾಹ ಮತ್ತು ಸ್ವಾಮಿ ನಿಷ್ಠೆಯಲ್ಲಿ ಸ್ವಾರ್ಥ ಇದೆ ಎನ್ನುವ ಆಲೋಚನೆ ಇರಬಹುದು. ಆತನ ಬಗ್ಗೆ ನಿಮ್ಮಲ್ಲಿರುವ ಊಹೆಗಳು ಮತ್ತು ಸಂಕಲ್ಪಗಳು ನಳಪ್ಪಾಡ್ ನಲ್ಲಿ ಮಾತ್ರವಲ್ಲ, ಬಹುತೇಕ ಮುಸ್ಲಿಂ ನಾಯಕರ ಬಗ್ಗೆ, ಮುಸ್ಲಿಮರ ಬಗ್ಗೆ ನಿಮ್ಮ ಹೃದಯದಲ್ಲಿ ಇಂತಹದೊಂದು ಶೈತಾನನ ಪ್ರಚೋದನೆ ಇದ್ದೇ ಇದೆ.
ಮಹಮ್ಮದ್ ನಳಪ್ಪಾಡ್ ನ ಜೀವನ ಶೈಲಿಯಲ್ಲಿ ಪರಿವರ್ತನೆ ಉಂಟಾದರೆ , ತನ್ನ ವ್ಯಕ್ತಿತ್ವ ಮತ್ತು ವರ್ಚಸ್ಸನ್ನು ಕಾಪಾಡಿಕೊಂಡು ಬಂದರೆ, ಪಕ್ಷ ದ್ರೋಹ ಮಾಡಲು ಸದಾ ಸಿದ್ದರಿರುವ ನಾಯಕರ ನಿಷ್ಠೆ ಮತ್ತು ನೀಯತ್ತು ಬಿಟ್ಟು , ಮುಸ್ಲಿಮರ ನಿಷ್ಠೆ-ನಂಬಿಕೆ ಉಳಿಸುವ ನಾಯಕನಾದರೆ, ರಾಜ್ಯದ ಜನರ ಕಾಳಜಿಯೊಂದಿಗೆ ದುಡಿದರೆ ಕಾಲರ್ ಹಿಡಿದ ಅದೇ ಕೈಯಲ್ಲಿ ಮಹಮ್ಮದ್ ನಳಪ್ಪಾಡ್ ಗೆ ‘ಕೈ’ ಮುಗಿಯುವ ಪರಿಸ್ಥಿತಿ ನಿರ್ಮಾಣ ಆಗಬಹುದು.
ಬಹುತೇಕ ಮುಸ್ಲಿಮ್ ನಾಯಕರು ಮೋಸ ಹೋದದ್ದು, ವಂಚಕರು ಎನಿಸಿದ್ದು ಮತ್ತು ಘಣತೆ ಕಳೆದುಕೊಂಡದ್ದು ಅವರು ಮುಸ್ಲಿಂ ಸಮುದಾಯಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಸ್ ಪಕ್ಷದಲ್ಲಿನ ಅವಕಾಶವನ್ನು ಸ್ವಾರ್ಥಕ್ಕಾಗಿ ಬಳಸಿದರು, ಪಕ್ಷದ ನಿಷ್ಠೆ ಮತ್ತು ನೀಯತ್ತು ಇಲ್ಲದ ನಾಯಕರು ಕಾಲರ್ ಹಿಡಿದಾಗ ಅಣ್ಣಾ, ಅಪ್ಪಾ ಎಂದು ಸಮರ್ಥಿಸಿದರು. ಹೆಚ್ಚಿನ ಮುಸ್ಲಿಂ ನಾಯಕರು ಸ್ವಾರ್ಥ ಮತ್ತು ಹಿತಾಸಕ್ತಿಗೆ, ಉನ್ಮಾದ ಮತ್ತು ಉಧ್ಯಮಕ್ಕೆ ಪಕ್ಷದ ನಾಯಕರ ಕಾಲು ಕಸವಾದರು.
ಕಾಂಗ್ರೆಸ್ಸ್ ಪಕ್ಷದ ಮೇಲೆ ಮುಸ್ಲಿಮರಿಗೆ ಇಂದಿಗೂ ನಂಬಿಕೆ ಇದೆ. ಇಲ್ಲಿನ ಬಹುತೇಕ ಮುಸ್ಲಿಂ ನಾಯಕರು ಅಲ್ಪಸಂಖ್ಯಾತರ ಪ್ರಾತಿನಿಧ್ಯದಲ್ಲಿ ಚುನಾವಣೆಗೆ ನಿಂತು, ಗೆದ್ದು, ಗುಡ್ಡೆ ಹಾಕಿದ್ದು ತಮಗೂ ತಮ್ಮ ಸಂಸಾರಕ್ಕೂ ಮಾತ್ರವೇ ಎಂದು ವಿವರಿಸುವ ಅಗತ್ಯವಿಲ್ಲ. ಅತೀ ಹೆಚ್ಚು ಮುಸ್ಲಿಮರು ಇಂದಿಗೂ ಸ್ಲಂನಲ್ಲಿದ್ದಾರೆ, ಅತೀ ಹೆಚ್ಚು ಮುಸ್ಲಿಮರು ಇಂದಿಗೂ ಸಾಮಾಜಿಕ – ಶೈಕ್ಷಣಿಕ ಮತ್ತು ಆರ್ಥಿಕವಾಗಿ ದಲಿತರಿಗಿಂತಲೂ ದುರ್ಬಲರು. ಇದಕ್ಕೆಲ್ಲ ಕಾರಣ, ಈ ಮುಸ್ಲಿಂ ನಾಯಕರು. ಕಾಂಗ್ರೆಸ್ಸ್ ನಲ್ಲಿ ತನ್ನ ಅಸ್ತಿತ್ವಕ್ಕಾಗಿ ಸಮುದಾಯವನ್ನು ಗುರಾಣಿ ಮಾಡಿ, ಇವರು ರಾಜಕೀಯದಲ್ಲಿ ಅಸ್ತಿತ್ವ ಉಳಿಸಿದರು.
ಕಾಂಗ್ರೆಸ್ಸ್ ನ ಸಿದ್ದಾಂತದಲ್ಲಿ ಗುಲಾಮಗಿರಿಗೆ ಅವಕಾಶ ಇಲ್ಲ. ಆದರೂ, ಈ ಮುಸ್ಲಿಂ ನಾಯಕರು ಸ್ವಾರ್ಥ ಹಿತಾಸಕ್ತಿಗಾಗಿ, ತಮ್ಮ ಸಮುದಾಯ ಮತ್ತು ಸ್ವಾಭಿಮಾನವನ್ನು ಬಿಟ್ಟು, ಮುಸ್ಲಿಮರ ಮಾನ ಮರ್ಯಾದೆ ಹೋದರೂ ಪರ್ವಾಗಿಲ್ಲಾ ನಾವು ಕಾಂಗ್ರೆಸ್ಸ್ ನ ನಾಯಕರ ಗುಲಾಮರು ಎಂದು ರಾತ್ರಿ ನಿದ್ದೆಯಿಂದ ಎದ್ದು ಬಂದು ಒಪ್ಪಿಕೊಳ್ಳುತ್ತಾರೆ ಎಂದರೆ ಇವರು ಸಮುದಾಯವನ್ನು ಯಾವಾಗ ಬೇಕಿದ್ದರೂ ಬಲಿಕೊಡಲು ತಾಯಾರಿದ್ದಾರೆ ಎಂದೆನಿಸುತ್ತದೆ.
ಸಿದ್ದಾಂತ ದ್ರೋಹ ಮಾಡಲು ನಾಳೆ ಬೆಳಿಗ್ಗೆ ಬೇಕಿದ್ದರೂ ತಯಾರು ಇರುವ ನಾಯಕನನ್ನು ಸಮರ್ಥಿಸಲು ರಾತ್ರಿ ಲೈವ್ ಬಂದ ನಳಪ್ಪಾಡ್
ರಾಜ್ಯದ ಮುಸ್ಲಿಮರ ಶಕ್ತಿ- ಸಾಮರ್ಥ್ಯ ಮತ್ತು ಅಸ್ತಿತ್ವದ ಮಹತ್ವ ತಿಳಿಯದೇ ತಾನು ಬದುಕಿದರೆ ಸಾಕು, ಅವರಿಗೆ ಖುಷಿಯಾಗಲಿ, ಮುಸ್ಲಿಮರ ಮಾನ ಹೋಗಲಿ ಎಂದು ತೀರ್ಮಾನಿಸಿದ್ದು ವಿಪರ್ಯಾಸ. ಇಂತಹ ನಾಯಕನನ್ನು ಸಮುದಾಯ ಬೆಳೆಸಿದರೆ ಈ ಮೊದಲು ಅನುಭವಿಸಿದ ಅಥವಾ ಇವರ ಹಿರಿಯರು ಮಾಡಿದ ರಾಜಕೀಯ ಅನ್ಯಾಯವನ್ನು ಸಮುದಾಯ ಸಹಿಸುತ್ತಲೇ ಇರಬೇಕಾದೀತು.
ಮಹಮ್ಮದ್ ನಳಪ್ಪಾಡ್ ಗೆ ಹೇಳಿಬಿಡಿ, ಮುಸ್ಲಿಮ್ ಸಮುದಾಯ ಭರವಸೆಯ ಯುವ ನಾಯಕನನ್ನು ನಿರೀಕ್ಷಿಸುತ್ತಿದೆ. ನಳಪ್ಪಾಡ್ ನಾಳೆ ತನ್ನ ವ್ಯಕ್ತಿತ್ವ ಮತ್ತು ನೀಯತ್ತನ್ನು ಮುಸ್ಲಿಮರ ಮತ್ತು ಕನ್ನಡ ನಾಡಿನ ಜನರ ಶ್ರೇಯಸ್ಸಿಗೆ ಸಮರ್ಪಿಸಿದರೆ ಆತನ ಮುಂದೆ ನಿಲ್ಲಲೂ ದುರಹಂಕಾರವೂ ಭಯಪಡಬಹುದು. ಲೀಡರ್ ನನ್ನು ಜನರು ಆಯ್ಕೆ ಮಾಡಬೇಕು, ಲೀಡರ್ ಜನರ ಮಧ್ಯದಿಂದ ಎದ್ದು ಬರುವವನು, ಕಾಸು-ಸ್ವಾಮಿನಿಷ್ಠೆಯಿಂದ ಲೀಡರ್ ಆಗುತ್ತೇನೆ ಎಂದು ಹೋದರೆ ಕಾಲರ್ ಹಿಡಿದು ಬಿಸಾಕಿದ ಮನಸ್ಥಿತಿಗೆ ಬಲಿಪಶು ಆಗುತ್ತಲೇ ಇರಬೇಕು.
ನನ್ನ ಕಾಲರ್ ಹಿಡಿದು ಎಳೆದೆದ್ದು ಮುಸ್ಲಿಮರಿಗೆ ನೋವಾಗಿದ್ದರೆ ಕ್ಷಮಿಸಬೇಕು, ಸಹನೆಯಿಂದ ಮುಸ್ಲಿಮರು ಕಾಂಗ್ರೆಸ್ಸ್ ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಇಡಬೇಕು. ನಾನು ನಿಮ್ಮೊಂದಿಗೆ ಇದ್ದೇನೆ. ಇದೊಂದು ಕೆಟ್ಟ ಗಳಿಗೆ, ಅದರ ಫಲವು ಅತಿರೇಕ ಅನಿಸಬಾರದು ಎನ್ನುವಷ್ಟು ದೊಡ್ಡ ಹೇಳಿಕೆ ನೀಡುವ ನಾಯಕನಾಗಿ ಮಹಮ್ಮದ್ ನಳಪ್ಪಾಡ್ ಬೆಳೆಯಬೇಕು. ಹಾಗೇ ಆಗಲು ನಾಳೆ ಪಕ್ಷ ದ್ರೋಹ ಮಾಡಲು ಸಿದ್ದರಿರುವ ನಾಯಕರ ನಿಷ್ಠೆ ಬಿಟ್ಟು, ಪಕ್ಷದ ಸಿದ್ದಾಂತದಲ್ಲಿ ನಿಷ್ಠೆ ಮತ್ತು ಜನರೊಂದಿಗೆ ನೀಯತ್ತಿನಲ್ಲಿ ರಾಜಕೀಯ ಮಾಡಬೇಕು.
✍🏻
*ಸುನ್ನೀಟುಡೇ*