ಕಿನ್ಯಾ : ಪವಿತ್ರ ಇಸ್ಲಾಮಿನ ಆದರ್ಶ, ತತ್ವ, ಸಿದ್ದಾಂತಗಳನ್ನು ಮೈಗೂಡಿಸಿ, ಸೃಷ್ಟಿಕರ್ತ ಅಲ್ಲಾಹನ ಆಜ್ಞೆಗಳನ್ನು ಪಾಲಿಸಿ ಕೆಡುಕಿನಿಂದ ದೂರ ನಿಂತು ಬದುಕುವುದರ ಜತೆಗೆ ಸಜ್ಜನರ ಸಹವಾಸವನ್ನು ಬೆಳೆಸಿದಾಗ ಮಾತ್ರ ನೈಜ ನೈತಿಕ ಜೀವನ ಸಾಧ್ಯವೆಂದು ಮುಸ್ಲಿಂ ಜಮಾಅತ್ ಕಾಸರಗೋಡು ಬದಿಯಡ್ಕ ಝೋನ್ ಸಮಿತಿ ಅಧ್ಯಕ್ಷ ಕುಂಬಡಾಜೆ ಅಬೂಬಕರ್ ಫೈಝಿ ಉಸ್ತಾದ್ ಹೇಳಿದರು.
SჄS ಕಿನ್ಯ ಸೆಂಟರ್ ಅಧೀನದ ಬದ್ರಿಯ್ಯಾನಗರ ಬ್ರಾಂಚ್ ಸಮಿತಿ ವತಿಯಿಂದ “ಸಾಂಘಿಕ ಕಾರ್ಯಾಚರಣೆಯ ಸಕ್ರಿಯತೆಗಾಗಿ” ನಡೆದ ಅಧ್ಯಯನ ಶಿಬಿರ ದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು ಆಳವಾದ ಧರ್ಮ ಜ್ಞಾನ ಕರಗತ ಮಾಡಿರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಸಾತ್ವಿಕ ವಿದ್ವಾಂಸರ ನಾಯಕತ್ವ ದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಸಂಘಟನೆಗಳಲ್ಲಿ ಹಲವಾರು ಸಜ್ಜನರು ರಾತ್ರಿ ಹಗಲೆನ್ನದೆ ಪವಿತ್ರ ಇಸ್ಲಾಮಿನ ಸೇವೆಯಲ್ಲಿದ್ದಾರೆ, ಎಸ್.ವೈ.ಎಸ್ ಎಸ್ಸೆಸ್ಸೆಫ್ ಮತ್ತು ಮುಸ್ಲಿಂ ಜಮಾಅತ್ ಸಂಘಟನೆಗಳಲ್ಲಿ ಸದಸ್ಯತ್ವ ಪಡೆದು ಸಜ್ಜನರ ಜತೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿರಬೇಂದು ಉಪದೇಶ ನೀಡಿದರು.
SჄS ಬದ್ರಿಯ್ಯಾನಗರ ಬ್ರಾಂಚ್ ಅಧ್ಯಕ್ಷ ಕೆ.ಎಚ್ ಮೂಸಕುಂಞಿ ರವರ ಅಧ್ಯಕ್ಷತೆಯಲ್ಲಿ ನಡೆದ ಅಧ್ಯಯನ ಶಿಬಿರ ವನ್ನು ಸ್ಥಳೀಯ ಖತೀಬ್ ಉಸ್ಮಾನ್ ಸಖಾಫಿ ಉಸ್ತಾದ್ ಉದ್ಘಾಟಿಸಿದರು.
SჄS ದ.ಕ ವೆಸ್ಟ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ,ಕಿನ್ಯ ಸೆಂಟರ್ ಸಮಿತಿ ಅಧ್ಯಕ್ಷ ಹಾಜಿ ಬಿ.ಎಂ ಇಸ್ಮಾಯಿಲ್ ಪರಮಾಂಡ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭೆ ಕೆ.ಎಂ ಸಯೀದ್ ರವರನ್ನು ಮೀಂಪ್ರಿ ಎಸ್ಸೆಸ್ಸೆಫ್ ನಿಂದ ಕಿನ್ಯ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಬಷೀರ್ ಕೂಡಾರ,ಕೋಶಾಧಿಕಾರಿ ಹುಸೈನಾರ್ ಮೀಂಪ್ರಿ ರವರು ನಾಯಕರ ಜತೆಯಲ್ಲಿ ಅಭಿನಂದಿಸಲಾಯಿತು,ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಬುಖಾರಿ ದುಆಗೆ ನೇತೃತ್ವ ನೀಡಿದರು.
SჄS ರಾಜ್ಯ ನಾಯಕ ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ,ದ.ಕ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್,ಮೀಡಿಯಾ ಕಾರ್ಯದರ್ಶಿ ಫಾರೂಖ್ ತಲಪಾಡಿ, ಕಿನ್ಯ ಸೆಂಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯಿಲ್ ಸಾಗ್,ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ,ಬದ್ರಿಯ್ಯಾನಗರ ಬ್ರಾಂಚ್ ಕೋಶಾಧಿಕಾರಿ ಮುಹಮ್ಮದ್ ರಫೀಖ್ ಮುಂತಾದವರು ಉಪಸ್ಥಿತರಿದ್ದರು.