ಬೆಂಗಳೂರು (ಜನಧ್ವನಿ ವಾರ್ತೆ): ಸುನ್ನೀ ವಿದ್ಯಾರ್ಥಿ ಸಂಘಟನೆ ಎಸ್ಸೆಸ್ಸೆಫ್ & ಸುನ್ನೀ ಯುವಜನ ಸಂಘ ಎಸ್.ವೈ.ಎಸ್ ಬೆಂಗಳೂರು ಜಿಲ್ಲಾ ಸಮಿತಿ ಸಂಘಟನೆಯ ಸಬಲೀಕರಣದ ನಿಟ್ಟಿನಲ್ಲಿ ಆಯೋಜಿಸಿದ ಎನ್ಲಿವನ್ ಕ್ಯಾಂಪ್ ಮರ್ಖಿನ್ಸ್ ಹಲ್ಸೂರಿನಲ್ಲಿ ನಡೆಯಿತು.


ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಮುಜೀಬ್ ಸಖಾಫಿಯವರ ಅಧ್ಯಕ್ಷ ತೆಯಲ್ಲಿ ನಡೆದ ಕ್ಯಾಂಪ್‌ನ ಉದ್ಘಾಟನೆಯನ್ನು ಎಸ್.ಎಮ್.ಎ ಅಧ್ಯಕ್ಷ ರಾದ ಅಬ್ದುಲ್‌ರಹ್‌ಮಾನ್ ಹಾಜಿ ಉದ್ಘಾಟಿಸಿದರು.ಕಣ್ಣೂರು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅನಸ್ ಅಮಾನಿ ತಳಿಪ್ಪರಂಬು ತರಗತಿ ನಡೆಸಿ ಕೊಟ್ಟರು.ದಅವಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳು ನಡೆಯಿತು.
ಎಸ್.ವೈ.ಎಸ್ ರಾಜ್ಯ ಇಸಾಬ ಕಾರ್ಯದರ್ಶಿ ಬಶೀರ್ ಸಅದಿ ಪೀಣ್ಯ,ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಹಬೀಬ್ ನೂರಾನಿ,ಶಿಹಾಬ್ ಮಡಿವಾಳ ಮತ್ತಿತರ ನೇತಾರರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು







