ಜಿದ್ದಾ: ಸೌದಿ ಅರೇಬಿಯಾದಿಂದ ಉತ್ತಮ ಸುದ್ದಿ. ಖಾಸಗಿ ವಲಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದ್ದು ಅವುಗಳಲ್ಲಿ ಶೇಕಡಾ 60 ರಷ್ಟು ವಿದೇಶಿಯರಾದ ಯೋಗ್ಯರನ್ನು ಹುಡುಕಲಾಗುತ್ತಿದೆ ಎಂದು ಸೌದಿ ಅರೇಬಿಯಾದ ಅಧಿಕಾರಿಗಳು ಹೇಳಿದ್ದಾರೆ.
ನಿಖರವಾಗಿ ಹೇಳುವುದಾದರೆ 116068ಉದ್ಯೋಗಗಳಲ್ಲಿ ಸ್ಥಳೀಯರಿಗೆ 45919 ಅವಕಾಶಗಳನ್ನು ನೀಡಲಾಗಿದೆ. ವಿದೇಶಿ ವಲಸಿಗರಿಗೆ 70149 ಅವಕಾಶಗಳನ್ನು ಕಾದಿರಿಸಲಾಗಿದೆ. ಇದು 2017 ರ ಅಂತ್ಯದ ಅಂಕಿಯಾಂಶಗಳನ್ನು ಆಧರಿಸಿದೆ.
ನಿರ್ಮಾಣ ಕ್ಷೇತ್ರದಲ್ಲಿ 85% ರಷ್ಟು ಹುದ್ದೆಗಳು (21657 ಖಾಲಿ ಹುದ್ದೆಗಳಲ್ಲಿ 18467) ವಿದೇಶಿಗರಿಗೆ ತೆರೆದಿವೆ. ವ್ಯವಹಾರ ಹೋಟೆಲ್ ಸೆಕ್ಟರುಗಳಲ್ಲಿ ಒಟ್ಟು 35194 ಹುದ್ದೆಗಳಲ್ಲಿ 63 ಶೇಕಡಾ ಕ್ಕಿಂತಲೂ ಹೆಚ್ಚು ಹುದ್ದೆಯು (22,359 ಖಾಲಿ ಹುದ್ದೆಗಳಲ್ಲಿ) ವಿದೇಶೀಯರನ್ನು ಸೌದಿ ಹುಡುಕುತ್ತಿದೆ. ಕೈಗಾರಿಕಾ ವಲಯದಲ್ಲಿ ಒಟ್ಟು 18,641 ಹುದ್ದೆಗಳಲ್ಲಿ 58 ಶೇ. ವಿದೇಶೀಗಳ ತಲಾಸ್ ಮಾಡಲಾಗುತ್ತಿದೆ.
ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸೌದಿ ಸಚಿವಾಲಯವು ಕಳೆದ 15 ತಿಂಗಳ ಅವಧಿಯಲ್ಲಿ 8,19881 ಉದ್ಯೋಗ ವೀಸಾಗಳನ್ನು ಜಾರಿಗೊಳಿಸಿದೆ. ಕಾನೂನು ಉಲ್ಲಂಘಕರನ್ನು ಗಡೀಪಾರು ಮಾಡಲಾಗಿದ್ದು, ಮತ್ತು ಹಲವರು ಸ್ವತಃ ಪಲಾಯಣಗೈದಿದ್ದರೂ ಸಹ ಹೆಚ್ಚು ಹೆಚ್ಚು ವಿದೇಶಿಯರು ಸೌದಿಗೆ ಕಾನೂನುಬದ್ಧವಾಗಿ ಬರುತ್ತಿದ್ದಾರೆ.
ಸೌದಿ ಅರೇಬಿಯಾದಲ್ಲಿ, ವೀಸಾಗಳ ದೊಡ್ಡ ಅನುದಾನ ಹೊರತಾಗಿಯೂ ವಿದೇಶೀ ಉದ್ಯೋಗಿಗಳನ್ನು ಹುಡುಕುವ ಸೌದಿಯ ಉದ್ಯೋಗಾವಕಾಶಗಳು ಅನ್ವೇಷಿಗಳ ಪಾಲಿಗೆ ಆಶಾದಾಯಕವಾಗಿದೆ.
ಏತನ್ಮಧ್ಯೆ, ಅಂಕಿ-ಅಂಶಗಳಿಗಾಗಿನ ಸೌದಿ ಜನರಲ್ ಪ್ರಾಧಿಕಾರವು ದೇಶದಲ್ಲಿ ವಿದೇಶಿ ಕಾರ್ಮಿಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆಯೆಂದು ತೋರಿಸುತ್ತವೆ. ವಿದೇಶಿಗರು ಹೆಚ್ಚಾಗಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಸ್ಥಳೀಯರು ಹೆಚ್ಚಾಗಿ ಕಚೇರಿ ಕೆಲಸದಲ್ಲಿರುತ್ತಾರೆ. ಒಟ್ಟು ಶೇಕಡ 31 ರಷ್ಟು ಉದ್ಯೋಗಿಗಳು ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಧ್ಯಮ ವರ್ಗದ ಶೇ .14 ರಷ್ಟು ಮತ್ತು ಸಣ್ಣ ಸಂಸ್ಥೆಗಳಲ್ಲಿ ಶೇಕಡಾ 29 ರಷ್ಟು ಸಣ್ಣ ಉದ್ಯಮಗಳಲ್ಲಿ ಮತ್ತು 29 ಶೇ. ಅತೀ ಸಣ್ಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ಅಂಕಿಯಾಂಶಗಳು ತೋರಿಸುತ್ತಿದೆ.