ರಿಯಾದ್: ಸೌದಿ ಅರೇಬಿಯಾದಲ್ಲಿ ಮೊಬೈಲ್ ಫೋನ್ ಸಿಮ್ ಕಾರ್ಡ್ ಗಳನ್ನು ಪಡೆಯಲು ರಾಷ್ಟ್ರೀಯ ವಿಳಾಸ ವ್ಯವಸ್ಥೆಯಲ್ಲಿ ನೋಂದಾಯಿಸಲು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ. ನಾಳೆಯಿಂದ ಹೊಸ ಸಿಮ್ ಕಾರ್ಡುಗಳನ್ನು ತೆಗೆದುಕೊಳ್ಳುವವರಿಗೆ ಕಾನೂನು ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಸಿಮ್ ಕಾರ್ಡ್ ಹೊಂದಿರುವ ವಿದೇಶಿಗಳು ಮತ್ತು ಸ್ವದೇಶೀಯರಿಗೆ ಈಗ ರಾಷ್ಟ್ರೀಯ ವಿಳಾಸ ವ್ಯವಸ್ಥೆಯಲ್ಲಿ ನೋಂದಾಯಿಸಿ ಮೊಬೈಲ್ ನಂಬರ್ ನೊಂದಿಗೆ ಬಂಧಿಸಬೇಕಾಗುತ್ತದೆ. ಲ್ಯಾಂಡ್ ಲೈನ್ ಸಂಪರ್ಕವನ್ನು ಪಡೆಯಲು ಮತ್ತು ಸಿಮ್ ಕಾರ್ಡ್ ಪಡೆದುಕೊಳ್ಳಲು ಅಡ್ರಸ್ ಸಿಸ್ಟಮ್ ವ್ಯವಸ್ಥೆಯಲ್ಲಿ ನೋಂದಾಯಿಸಬೇಕಾಗುತ್ತದೆ ಎಂಬ ಕಾನೂನು ನಾಳೆಯಿಂದ ಜಾರಿಗೆ ಬರಲಿದೆ.
ಬ್ಯಾಂಕ್ ಖಾತೆದಾರರು ಈ ತಿಂಗಳ 13ಕ್ಕೆ ಮೊದಲು ವಿಳಾಸ ವ್ಯವಸ್ಥೆಯಲ್ಲಿ ನೋಂದಾಯಿಸುವ ವೇಳೆ ಲಭಿಸುವ ಸಂಖ್ಯೆಯನ್ನು ತಮ್ಮ ಅಕೌಂಟ್ ಗೆ ಲಗತ್ತಿಸಬೇಕು. ಮೇಲ್ವಿಚಾರಣಾ ಪ್ರಾಧಿಕಾರವು ಈಗಾಗಲೇ ವಿಳಾಸ ವ್ಯವಸ್ಥೆಯಲ್ಲಿ ನೋಂದಾಯಿಸದವರ ಬ್ಯಾಂಕ್ ಖಾತೆಗಳನ್ನು ಅಸಾದುಗೊಳಿಸುವುದಿಲ್ಲ ಎಂದು ಘೋಷಿಸಿದೆ.
http://register.address.gov.sa/ ಎಂಬ ಪೋರ್ಟಲ್ ಮೂಲಕ ನೋಂದಣಿ ಪ್ರಕ್ರಿಯೆಯನ್ನು ರಾಷ್ಟ್ರೀಯ ವಿಳಾಸ ವ್ಯವಸ್ಥೆಯಲ್ಲಿ ತ್ವರಿತವಾಗಿ ಮಾಡಬಹುದು.
ವ್ಯಕ್ತಿಗಳು ತಮ್ಮ ವಿಳಾಸಗಳನ್ನು(ಕಟ್ಟಡ ಸಂಖ್ಯೆ) ಮತ್ತು ಗುರುತನ್ನು ಮತ್ತು ಗುರುತಿನ ಮಾಹಿತಿಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.
ಖಾಸಗಿ ಕಂಪನಿಗಳು ಮತ್ತು ಸರ್ಕಾರಿ ಇಲಾಖೆಗಳು, ವಿಳಾಸ ವ್ಯವಸ್ಥೆಯಲ್ಲಿ ಕಟ್ಟಡ ಸಂಖ್ಯೆ ಮತ್ತು ಸ್ಥಳ ನಕ್ಷೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ನೋಂದಾಯಿಸಬೇಕು. ಫ್ಲಾಟ್ ಗಳಲ್ಲಿ ವಾಸಿಸುವ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅದೇ ಕಟ್ಟಡ ಸಂಖ್ಯೆಯನ್ನು ಬಳಸಿಕೊಂಡು ನೋಂದಣಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.