janadhvani

Kannada Online News Paper

ಉಡುಪಿ: ಶೈಕ್ಷಣಿಕ ಸಂಸ್ಥೆಯಲ್ಲಿ ಧರ್ಮದ ಹೆಸರಿನಲ್ಲಿ ತಾರತಮ್ಯ- ಎಸ್ಸೆಸ್ಸೆಫ್ ಖಂಡನೆ

ಉಡುಪಿ, ಡಿಸೆಂಬರ್ 31: ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಧಾರ್ಮಿಕ ವಿಭಜನೆ ನಡೆಸುತ್ತಿರುವುದು ಖಂಡನೀಯ.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಂತದಲ್ಲಿ ನೈಜವಾದ ಶಿಕ್ಷಣ ನೀಡಬೇಕಾದ ವಿಧ್ಯಾ ಸಂಸ್ಥೆಯಲ್ಲಿ “ಹಿಜಾಬ್” ಎಂಬ ಧಾರ್ಮಿಕ ಶಿಷ್ಟಾಚಾರದ ಕ್ಷುಲ್ಲಕ ವಿಚಾರವಾಗಿ ಧಾರ್ಮಿಕವಾಗಿ ವಿದ್ಯಾರ್ಥಿಗಳನ್ನು ವಿಭಜಿಸುವುದು ಅಕ್ಷಮ್ಯ. ಅದು ಕೂಡ “ಸರಕಾರಿ” ‍ಪದವಿಪೂರ್ವ ಕಾಲೇಜಿನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ದುರದುಷ್ಠಕರ ಸಂಗತಿ. ಇದು ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗಿದ್ದು ಈ ಘಟನೆಯನ್ನು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಬಲವಾಗಿ ಖಂಡಿಸುತ್ತದೆ.

ಈ ಬಗ್ಗೆ ಶಿಕ್ಷಣ ಇಲಾಖೆ ವಿಧ್ಯಾರ್ಥಿನಿಯರಿಗೆ ಕೂಡಲೇ ನ್ಯಾಯವನ್ನು ಒದಗಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ, ಇಂತಹ ಘಟನೆ ಜಿಲ್ಲೆಯಲ್ಲಿ ಮರುಕಳಿಸದಂತೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಜಿಲ್ಲಾ ಎಸ್ಸೆಸ್ಸೆಫ್ ಕ್ಯಾಂಪಸ್ ವಿಭಾಗವು ಆಗ್ರಹಿಸುತ್ತದೆ.

error: Content is protected !! Not allowed copy content from janadhvani.com