ಬೆಂಗಳೂರು,ಡಿ.23: ಕೆಲ ದಿನಗಳ ಹಿಂದೆ ಇಲ್ಲಿನ ಕೆಲವು ಮಸಿದಿಗಳಿಂದ ಪೋಲೀಸರು ಧ್ವನಿ ವರ್ಧಕಗಳನ್ನು ತೆರವುಗೊಳಿಸಿದ್ದರು. ಈ ಬಗ್ಗೆ ಹಲವಾರು ದೂರು ಲಭಿಸಿದ ಹಿನ್ನೆಲೆಯಲ್ಲಿ ರಾಜ್ಯ ವಖ್ಫ್ ಬೋರ್ಡ್ ಕೂಡಲೇ ಸ್ಪಂದಿಸಿದೆ.
ಮುಂಚಿತವಾಗಿ ಯಾವುದೇ ಮಾಹಿತಿ, ನೋಟೀಸ್ ನೀಡದೆ ಪೋಲಿಸ್‌ನವರು ಮಸೀದಿಗಳಿಗೆ ಅಕ್ರಮ ಪ್ರವೇಶಿಸಿ ಧ್ವನಿವರ್ಧಕ ತೆಗೆದ ವಿಷಯ ಸಂಭಂದಿಸಿ, “ಇನ್ನು ಯಾವುದೇ ಮಸೀದಿಯ ಧ್ವನಿವರ್ಧಕ ತೆಗೆಯಬಾರದು. ತೆಗೆಯಲಾದ ಧ್ವನಿ ವರ್ಧಕಗಳನ್ನು ತಕ್ಷಣ ಪುನರ್ ಸ್ಥಾಪಿಸಬೇಕು” ಎಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿಯವರ ನೇತ್ರತ್ವದ ವಕ್ಫ್ ಮಂಡಳಿ ಪತ್ರ ಮೂಲಕ ಖಡಕ್ ಆದೇಶ ನೀಡಿದೆ.
ಇದರನ್ವಯ ವಶ ಪಡಿಸಲಾದ ಮಸೀದಿಯ ಮೈಕ್‌ಗಳನ್ನು ಪುನ ಸ್ಥಾಪಿಸಲು ಪೋಲಿಸರು ಒಪ್ಪಿದ್ದಾರೆ. ಸಿದ್ದಾಪುರದ ಎಲ್ಲಾ ಮಸೀದಿಗಳ ಸಮಿತಿ ಮತ್ತು ಜಯನಗರ ಮುಸ್ಲಿಮ್ ಸಂಘಟನೆಗಳ ಸಮಿತಿ ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿತ್ತು.ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಮೈಕ್ ಗಳನ್ನು ವಾಪಾಸ್ ಕೊಡುವುದಾಗಿ ಹೇಳಿದ್ದಾರೆ.
ವದಂತಿಗಳಿಗೆ ಕಿವಿಗೊಡದೆ ಜನರು ಶಾಂತಿ ಕಾಪಾಡಬೇಕೆಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಉಸ್ತಾದ್ ಜನರಿಗೆ ಮನವಿ ಮಾಡಿದ್ದಾರೆ.



