janadhvani

Kannada Online News Paper

ಜನವರಿಯಲ್ಲಿ ಸಿಎಂ ಬೊಮ್ಮಾಯಿ ಬದಲಾವಣೆ ಖಚಿತ- ಸಿಎಂ ಇಬ್ರಾಹಿಂ

ಪಾಪ ಬೊಮ್ಮಾಯಿ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಈಗ ಕಾಲು ಕುಂಟುವಂತೆ ಆಯ್ತು.

ಬೆಂಗಳೂರು: ಸಿಎಂ ಸ್ಥಾನದಿಂದ ಯಡಿಯೂರಪ್ಪ ಬದಲಾಗ್ತಾರೆ ಅಂತ ಹೇಳಿದ್ದೆ, ಅದು ನಿಜವಾಯ್ತು. ಬೊಮ್ಮಾಯಿಯೂ ಜನವರಿಯಲ್ಲಿ ಬದಲಾಗ್ತಾರೆ. ನಮ್ಮ ಭವಿಷ್ಯ ಯಾವತ್ತೂ ಸುಳ್ಳಾಗಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹದಿನೇಳು ಜನರನ್ನು ಪಕ್ಷ ಬಿಡಿಸಿ ಕರೆದುಕೊಂಡು ಹೋಗಿ ಅವರ ಪರಿಸ್ಥಿತಿ ಏನಾಯ್ತು ನೋಡಿ. ಸಿಡಿ ಬಿಡುಗಡೆ ಮಾಡಿಸಿ ಸ್ಟೇ ತರುವಂತೆ ಆಯ್ತು. ಪಾಪ ಬೊಮ್ಮಾಯಿ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಈಗ ಕಾಲು ಕುಂಟುವಂತೆ ಆಯ್ತು.

ಬೊಮ್ಮಾಯಿ ಅವರೇ ಕೇಶವ ಕೃಪಾದ ಮಾತು ಕೇಳಬೇಡಿ, ಬಸವಕೃಪಾ ಮಾತು ಕೇಳಿ ಅಂತ ಹೇಳಿದ್ದೆ. ಆಗಷ್ಟೇ ನಿಮಗೆ ಒಳ್ಳೆಯಾದಾಗುತ್ತೆ ಅಂದಿದ್ದೆ. ಬಿಜೆಪಿ ಮುಳುಗುತ್ತಿರುವ ಹಡಗು. ಸಿಎಂ ಸ್ಥಾನಕ್ಕೆ ಎರಡ್ಮೂರು ಹೆಸರು ಕೇಳಿ ಬರುತ್ತಿದೆ. ನೋಡೋಣ ಏನಾಗುತ್ತೆ ಅಂತ ಎಂದರು.

error: Content is protected !! Not allowed copy content from janadhvani.com