ದುಬೈ: ಪಾಕಿಸ್ತಾನೀಯರು ಗಲ್ಫ್ ಪ್ರದೇಶದ ಭದ್ರತೆಗೆ ಬೆದರಿಕೆಯಾಗಿದ್ದಾರೆ ಎಂದು ದುಬೈ ಭದ್ರತಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಹಿ ಖಲ್ಫಾನ್ ತಿಳಿಸಿದ್ದಾರೆ. ದುಬೈನಲ್ಲಿ ನಡೆದ ಅಮಲು ಪದಾರ್ಥ ಬೇಟೆಯಲ್ಲಿ ಪಾಕಿಸ್ತಾನೀ ತಂಡವೊಂದನ್ನು ಬಂಧಿಸಲ್ಪಟ್ಟ ಹಿನ್ನೆಲೆಯಲ್ಲಿ ಅವರು ಟ್ವಿಟರ್ ನಲ್ಲಿ ಈ ವಿಷಯ ತಿಳಿಸಿದ್ದಾರೆ.
ಭಾರತೀಯರು ಶಿಸ್ತುಬದ್ಧರಾಗಿದ್ದಾರೆ. ಆದರೆ,ಪಾಕಿಸ್ತಾನೀಯರು ಸೋಮಾರಿತನ, ಅಪರಾಧಗಳು ಮತ್ತು ಕಳ್ಳಸಾಗಾಣಿಕೆಯಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ.
ಗಲ್ಫ್ ದೇಶಗಳಿಗೆ ಲಹರಿ ಪದಾರ್ಥಗಳನ್ನು ತರುವ ಪಾಕಿಸ್ತಾನಿಗಳು ಈ ಪ್ರದೇಶಕ್ಕೆ ಗಂಭೀರ ಸವಾಲಾಗಿದ್ದಾರೆ. “ಪಾಕಿಸ್ತಾನದ ಜನರನ್ನು ಸೇವೆಗೆ ನಿಲ್ಲಿಸಬಾರದೆಂದು ದೇಶದ ನಾಗರಿಕರಿಗೆ ನಾನು ಮನವಿ ಮಾಡುತ್ತಿದ್ದೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದಿಂದ ಕೆಲಸಕ್ಕಾಗಿ ನೇಮಕಾತಿಯನ್ನು ನಿಲ್ಲಿಸುವ ನಿರ್ಧಾರ ರಾಷ್ಟ್ರೀಯ ಮಟ್ಟದಲ್ಲಿ ಅವಶ್ಯಕವಾಗಿದೆ ಎಂದು ದಹಿ ಖಾಲ್ಫಾನ್ ಹೇಳಿದರು. ಪಾಕಿಸ್ತಾನದ ಪ್ರಜೆಗಳ ತನಿಖೆಯನ್ನು ಬಿಗಿಗೊಳಿಸಬೇಕು ಎಂದು ಅವರು ಟ್ವೀಟ್ ಮಾಡಿದರು. ಟ್ವಿಟ್ ಗಳೊಂದಿಗೆ ಲಹರಿ ಬೇಟೆಯಲ್ಲಿ ಸಿಕ್ಕಿಬಿದ್ದ ಪಾಕಿಸ್ತಾನಿಗಳ ಛಾಯಾಚಿತ್ರವನ್ನು ಹಂಚಿಕೊಂಡಿದ್ದಾರೆ.
2013 ರವರೆಗೆ ದುಬೈ ಪೊಲೀಸ್ ಅಧಿಕಾರಿಯಾಗಿದ್ದ ದಹಿ ಖಲ್ಫಾನ್ ಅವರ ಟ್ವೀಟ್‌ಗಳನ್ನು ರಾಷ್ಟ್ರೀಯ ಮಾಧ್ಯಮಗಳು ಬಹಳ ಪ್ರಾಮುಖ್ಯತೆಯಿಂದ ವರದಿ ಮಾಡುತ್ತಿದೆ.