ಉಡುಪಿ: ಸುನ್ನೀ ವಿಧ್ಯಾರ್ಥಿ ಒಕ್ಕೂಟ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಪ್ರತಿಭೋತ್ಸವವು ಹೂಡೆ ದಾರುಸ್ಸಲಾಂ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಜರುಗಿತು. ಎಸ್ಸೆಸ್ಸೆಫ್ ಹಾಲಿ ಮತ್ತು ಮಾಜಿ ನಾಯಕರುಗಳ ನೇತೃತ್ವದಲ್ಲಿ ಎಸ್ಸೆಸ್ಸೆಫ್ ನ ಧ್ವಜಾರೋಹಣದೊಂದಿಗೆ ಆರಂಭಗೊಂಡ ಉದ್ಘಾಟನಾ ಸಮಾವೇಶವು ಜಿಲ್ಲಾ ಪ್ರತಿಭೋತ್ಸವ ಚೇರ್ ಮ್ಯಾನ್ ಕೆ.ಎಸ್.ಎಮ್ ಮನ್ಸೂರ್’ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ವೈ.ಎಸ್ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಕೆ.ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಸ್ಸಯ್ಯಿದ್ ಇಬ್ರಾಹಿಂ ಜುನೈದ್ ಅರ್ರಿಫಾಯಿ ತಂಙಳ್ ರಂಗಿನಕರೆ ಆಧ್ಯಾತ್ಮಿಕ ಮಜ್ಲಿಸ್ ಗೆ ನೇತೃತ್ವ ನೀಡಿದರು ಮೌಲಾನ ಫಕ್ರೇ ಆಲಂ ಮುಂಬೈ ನಅತೇ ಶರೀಫ್ ಆಲಾಪಿಸಿದರು.
ಏಳು ವಿಭಾಗದಲ್ಲಿ ಐದು ಡಿವಿಷನ್ ಗಳ 250ಕ್ಕೂ ಮಿಕ್ಕ ಪ್ರತಿಭೆಗಳ ಸ್ಪರ್ಧಾಕೂಟ ಎರಡು ದಿನಗಳಲ್ಲಿ ನಡೆಯಿತು ಎಸ್ಸೆಸ್ಸೆಫ್ ಕಾಪು ಡಿವಿಷನ್ ಪ್ರಥಮ,ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ದ್ವಿತೀಯ ಹಾಗೂ ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಕಲಾ ಸ್ನೇಹಕೂಟ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಎಸ್.ವೈ.ಎಸ್. ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ರಾಜ್ಯ ಪ್ರತಿಭೋತ್ಸವ ಚೇರ್ಮ್ಯಾನ್ ಕೆ.ಎಂ. ಮುಸ್ತಫ ನಈಮಿ ಹಾವೇರಿ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಬಂಗ್ಲೆಗುಡ್ಡೆ ತೈಬಾ ಗಾರ್ಡನ್ ಫ್ರಿನ್ಸಿಫಾಲ್ ಅಹ್ಮದ್ ಶರೀಫ್ ಸಅದಿ ಕಿಲ್ಲೂರು, ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಪಿ ಅಬೂಬಕ್ಕರ್ ನೇಜಾರು, ಎಸ್ ಎಮ್ ಎ ರಾಜ್ಯ ನಾಯಕ ಹಾಜಿ ಮೊಯ್ದಿನ್ ಗುಡ್ವಿಲ್,ರಾಜ್ಯ ಪ್ರತಿಭೋತ್ಸವ ಸ್ವಾಗತ ಸಮಿತಿ ಕನ್ವೀನರ್ ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, ರಾಜ್ಯ ಕಾರ್ಯದರ್ಶಿ ಎನ್.ಸಿ ರಹೀಂ ಹೊಸ್ಮಾರ್, ಹೂಡೆ ದಾರುಸ್ಸಲಾಮ್ ಅಧ್ಯಕ್ಷ ಅಶ್ರಫ್ ತೋನ್ಸೆ, ಮಾಜಿ ರಾಜ್ಯ ಎಸ್ಸೆಸ್ಸೆಫ್ ನಾಯಕರಾದ ಸುಬ್ಹಾನ್ ಹೊನ್ನಾಳ, ಇಲ್ಯಾಸ್ ಅಡ್ವಕೇಟ್ ನಾವುಂದ, ವೈ.ಬಿ.ಸಿ ಬಶೀರ್ ಮೂಳೂರ್, ಉಡುಪಿ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ನಾಯಕರಾದ ಅಬ್ದುರ್ರಶೀದ್ ಕಾಮಿಲ್ ಸಖಾಫಿ ಮಜೂರು, ಹೂಡೆ ದಾರುಸ್ಸಲಾಮ್ ಕಾರ್ಯದರ್ಶಿ ಖಯ್ಯೂಂ ತೋನ್ಸೆ, ರಹ್ಮತುಲ್ಲಾ ಹೂಡೆ, ಮುಂತಾದ ಹಲವು ಉಲಮಾ, ಉಮರಾ ನಾಯಕರು ಭೇಟಿ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಇಂಡಿಯನ್ ಅಚಿವರ್ಸ್ ಅವಾರ್ಡ್ ಪುರಸ್ಕೃತ ಬಿ.ಎಮ್ ಜಾಫರ್ ತೋನ್ಸೆ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪ್ರ.ಕಾರ್ಯದರ್ಶಿ ಎಮ್.ಕೆ ಇಬ್ರಾಹಿಂ ಮಜೂರು ವಂದಿಸಿ, ಜಿಲ್ಲಾ ಪ್ರತಿಭೋತ್ಸವ ಕನ್ವೀನರ್ ನಿಝಾಂ ಪಡುಕೆರೆ ಸ್ವಾಗತಿಸಿದರು. ಮುಹಮ್ಮದ್ ರಕೀಬ್ ಕನ್ನಂಗಾರ್, ಅನೀಸ್ ಸರ್’ಹಿಂದಿ, ಹರ್ಷಾದ್ ಕೋಡಿ ಮತ್ತು ತಾಜುದ್ಧೀನ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.