janadhvani

Kannada Online News Paper

ಸೌದಿ: ಅಲ್ ಉಲಾ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಸೇವೆ ಆರಂಭ

ಈ ತಾಣವು 008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದು ವಿಶ್ವದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.

ರಿಯಾದ್: ಸೌದಿ ಅರೇಬಿಯಾದ ಅಲ್ ಉಲಾ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಸೇವೆಗಳನ್ನು ಪ್ರಾರಂಭಿಸಲಾಗಿದೆ. ಪ್ರಥಮ ಹಾರಾಟವನ್ನು ​​​​ಫ್ಲೈನಾಸ್ ಏರ್ಲೈನ್  ದುಬೈನಿಂದ ನಡೆಸಿದೆ. 

ಇನ್ನಷ್ಟು ಅಂತಾರಾಷ್ಟ್ರೀಯ ವಿಮಾನಗಳ ಸೇವೆಯನ್ನು ಆರಂಭಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ಅಲ್ ಉಲಾ ಪ್ರಿನ್ಸ್ ಅಬ್ದುಲ್ ಮಜೀದ್ ವಿಮಾನ ನಿಲ್ದಾಣದಲ್ಲಿ ದೇಶೀಯ ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿತ್ತು. 

ನಾಗರಿಕ ವಿಮಾನಯಾನ ಜನರಲ್ ಅಥಾರಿಟಿ ತಿಂಗಳ ಹಿಂದೆ ಅಂತಾರಾಷ್ಟ್ರೀಯ ಸೇವೆಗಳ ಆರಂಭಕ್ಕೆ ಅನುಮತಿ ನೀಡಿತ್ತು. ಇದರ ನಂತರ ಫ್ಲೈನಾಸ್‌ನ ಮೊದಲ ಅಂತಾರಾಷ್ಟ್ರೀಯ ಸೇವೆಯು ಅಲ್ ಉಲಾ ವಿಮಾನ ನಿಲ್ದಾಣದಿಂದ ಆರಂಭಗೊಂಡಿದೆ.ದುಬೈನಿಂದ ಪ್ರಯಾಣಿಕರನ್ನು ಹೊತ್ತು ತಂದ  ವಿಮಾನವನ್ನು ಜಲಫಿರಂಗಿಗಳ ಮೂಲಕ ದ್ವಾರ ನಿರ್ಮಿಸಿ  ವಿಮಾನ ಸ್ವಾಗತಿಸಲಾಯ್ತು. ಶೀಘ್ರದಲ್ಲೇ ಹೆಚ್ಚಿನ ದೇಶಗಳ ಸೇವೆ ಲಭ್ಯವಾಗಲಿದೆ.

ಈ ತಾಣವು 008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ ಮತ್ತು ಇದು ವಿಶ್ವದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಈ ಸ್ಥಳದ ನೈಸರ್ಗಿಕ ಸೌಂದರ್ಯವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಅಂಶವಾಗಿದೆ. ಶತಮಾನಗಳ ಕಥೆಯನ್ನು ಹೇಳುವ ಅಲ್ ಉಲಾ ಪ್ರಾಚೀನ ನಾಗರಿಕತೆಯ ನೇರ ಉದಾಹರಣೆಯಾಗಿದೆ.2035ರ ವೇಳೆಗೆ, ವರ್ಷಕ್ಕೆ 20 ಲಕ್ಷ ಪ್ರವಾಸಿಗರಿಗೆ ಆತಿಥ್ಯ ನೀಡಬಹುದಾದ ಬೃಹತ್ ಪ್ರವಾಸೋದ್ಯಮ ಯೋಜನೆಗಳನ್ನು ಅಲ್ ಉಲಾ ರಾಯಲ್ ಕಮಿಷನ್  ಅನುಷ್ಠಾನಗೊಳಿಸುತ್ತಿದೆ.