janadhvani

Kannada Online News Paper

ವಿದೇಶಿಗಳ ಹಣ ವ್ಯವಹಾರಕ್ಕೆ ತೆರಿಗೆ-ಕುವೈಟ್ ಸರ್ಕಾರ ನಿರಾಕರಿಸುವ ಸಾಧ್ಯತೆ

ಕುವೈಟ್ ಸಿಟಿ: ವಿದೇಶಿಗಳು ಕಳುಹಿಸುವ ಹಣಕ್ಕೆ ತೆರಿಗೆಯನ್ನು ವಿಧಿಸುವ ನಿರ್ದೇಶನ ವನ್ನು ಕುವೈಟ್ ಸರ್ಕಾರವು ನಿರಾಕರಿಸುವ ಸಾಧ್ಯತೆ ಇದೆ. ಈ ಕಾನೂನಿನ ಅನುಷ್ಠಾನವು ಅಸಂವಿಧಾನಿಕವಾಗಿದೆ ಎಂದು ಶಾಸನ ಮಂಡಳಿಯ ವಾದವಾಗಿದೆ. ಆದರೆ ಕರಡು ಬಿಲ್‌ಗೆ ಅನುಮತಿ ನೀಡಿದ್ದ ಹಣಕಾಸು ಸಮಿತಿಯು ಸಂವಿಧಾನಿಕವಾಗಿ ಯಾವುದೇ ಅಡಚಣೆಯಿಲ್ಲ ಎಂಬ ತನ್ನ ನಿಲುವಿಗೆ ಬದ್ದವಾಗಿ ನಿಂತಿದೆ.

ಹೊಸ ಶಾಸನವು ಖೋಟಾನೋಟು ಬದಲಾಯಿಸಲು ಮತ್ತು ಭಯೋತ್ಪಾದಕರಿಗೆ ಹಣಕಾಸನ್ನು ತಲುಪಿಸುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯುಕ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಂಗ ಸದಸ್ಯರು ಹೇಳಿದ್ದಾರೆ.

ಜನರನ್ನು ಇಬ್ಬಗೆಗೊಳಿಸುವ ಅಂತಹ ಕಾನೂನುಗಳನ್ನು ಜಾರಿಗೆ ತಂದರೆ ಅದು ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಕಾನೂನು ವಿಚಾರಗಳ ಸಮಿತಿಯ ಅಧ್ಯಕ್ಷ ಹುಮೈದಿ ಅಲ್-ಸುಬಾಹಿ ಹೇಳಿದರು. ಇದರ ಕುರಿತು ಯಾವುದೇ ಸ್ಪಷ್ಟ ಗ್ರಹಿಕೆ ಇಲ್ಲ. ಈ ಕಾನೂನು ಜಾರಿಗೆ ಬರುವ ಮೊದಲು ವಿವರವಾದ ಅಧ್ಯಯನವನ್ನು ನಡೆಸಬೇಕು. ಈ ವಿಷಯದಲ್ಲಿ ಸರ್ಕಾರ ತನ್ನದೇ ಆದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ ಎಂದು ಅಲ್-ಹುಮೈದಿ ಹೇಳಿದರು. ಸಂಸತ್ತಿನ ಎರಡು ಪ್ರದಾನ ಸಮಿತಿಗಳು ಎರಡು ವಾದಗಳನ್ನು ಮಂಡಿಸಿರುವ ಕಾರಣ ಸರ್ಕಾರವು ನಿರ್ಣಯವನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಣ ವ್ಯವಹಾರಿಕ ಸಂಸ್ಥೆಗಳು ಮತ್ತು ಮನಿ ಎಕ್ಸ್‌ಚೇಂಜ್ ಯೂನಿಯನ್‌ಗಳು ದೇಶದ ಹೊಸ ಶಾಸನವನ್ನು ವಿರೋಧಿಸಿವೆ.ಹಣವನ್ನು ಕಳುಹಿಸಲು ತಪ್ಪು ಮಾರ್ಗಗಳನ್ನು ಹುಡುಕುವಲ್ಲಿ ವಿದೇಶಿಗಳಿಗೆ ಪ್ರೇರಣೆಯಾಗಲಿದೆ ಎಂಬುದು ಅವರ ವಾದವಾಗಿದೆ.

error: Content is protected !! Not allowed copy content from janadhvani.com