ರಿಯಾದ್: ಸೌದಿ ಅರೇಬಿಯಾದ ಯಾವುದೇ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮದ್ಯಪಾನ ಮಾಡುವಂತಿಲ್ಲ ಎಂದು ಪ್ರವಾಸೋದ್ಯಮ ಸಚಿವಾಲಯ ಹೇಳಿದೆ. ಸೌದಿ ಅರೇಬಿಯಾ ಅಂತಹ ವಿಷಯದ ಬಗ್ಗೆ ಯೋಚಿಸಿಲ್ಲ. ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಪ್ರವಾಸಿಗರ ಸಮೀಕ್ಷೆಯಿಂದ ಅಂತಹ ಯಾವುದೇ ದೂರುಗಳಿಲ್ಲ ಎಂದು ಸಚಿವಾಲಯ ಹೇಳಿದೆ.
ಸೌದಿ ಅರೇಬಿಯಾದಲ್ಲಿ ವಿಶೇಷವಾಗಿ ಗೊತ್ತುಪಡಿಸಿದ ಪ್ರವಾಸಿ ತಾಣಗಳಲ್ಲಿ ವಿದೇಶಿಯರಿಗೆ ಆಲ್ಕೋಹಾಲ್ ಬಳಸಲು ಅನುಮತಿ ನೀಡಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಈ ವರದಿಗಳನ್ನು ಪ್ರವಾಸೋದ್ಯಮ ಸಚಿವ ಅಹ್ಮದ್ ಅಲ್-ಖತೀಬ್ ನಿರಾಕರಿಸಿದ್ದಾರೆ.
ಸೌದಿ ಅಧಿಕಾರಿಗಳು ಅಂತಹ ವಿಷಯವನ್ನು ಪರಿಗಣನೆಗೆ ತೆಗೆಯಲೇ ಇಲ್ಲ . ಕೋವಿಡ್ಗೂ ಮುನ್ನ ಸೌದಿ ಅರೇಬಿಯಾದಲ್ಲಿ ಪ್ರವಾಸಿಗರ ಆದ್ಯತೆಗಳನ್ನು ತಿಳಿಯಲು ಸಮೀಕ್ಷೆ ನಡೆಸಲಾಗಿತ್ತು. ಸೌದಿ ಅರೇಬಿಯಾದಲ್ಲಿ ಮದ್ಯ ನಿಷೇಧದ ಬಗ್ಗೆ ವಿದೇಶಿ ಪ್ರವಾಸಿಗರಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಅವರು ಹೇಳಿದರು.
ಮುಂದಿನ ವರ್ಷ ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ 50 ಮಿಲಿಯನ್ ಪ್ರವಾಸಿಗರು ದೇಶಕ್ಕೆ ಭೇಟಿ ನೀಡಲಿದ್ದಾರೆ. ಸೌದಿ ಅರೇಬಿಯಾ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಯೋಜನೆಯನ್ನು ಸಿದ್ಧಪಡಿಸಿದೆ ಎಂದು ಸಚಿವರು ಹೇಳಿದರು.
ಸೌದಿ ಕಾನೂನಿನ ಪ್ರಕಾರ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ಬಳಸುವುದು ಕಾನೂನುಬಾಹಿರ. ಉಲ್ಲಂಘಿಸುವವರು ಕಾನೂನು ಕ್ರಮ ಎದುರಿಸಬೇಕು.
















ಇನ್ನಷ್ಟು ಸುದ್ದಿಗಳು
ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’
ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ