ನ್ಯೂಯಾರ್ಕ್: ಪ್ಯಾಲೆಸ್ತೀನಿರಿಗೆ ಮತ್ತು ಇಸ್ರೇಲಿಗಳಿಗೆ ತಮ್ಮ ಭೂಮಿಯಲ್ಲಿ ಶಾಂತಿಯುತವಾಗಿ ಬದುಕುವ ಹಕ್ಕಿದೆ ಎಂದು ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.
ಯುಎಸ್ ನ ಅಟ್ಲಾಂಟಿಕ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೌದಿ ರಾಜಕುಮಾರ ಈ ಹೇಳಿಕೆ ನೀಡಿದರು.
ಪ್ರಪಂಚದ ಯಾವುದೇ ಭಾಗದಲ್ಲಿನ ಜನರು ತಮ್ಮ ದೇಶದಲ್ಲಿ ಶಾಂತಿಯಿಂದ ಜೀವಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ. ಇಸ್ರೇಲ್ ಭೂ ವಿಸ್ತಾರವನ್ನು ಹೋಲಿಸಿದರೆ, ಅವರ ಆರ್ಥಿಕ ಭದ್ರತೆ ಪ್ರಭಲವಾಗಿದೆ.
ಆದರೆ ಸೌದಿ ಅರೇಬಿಯಾಗೆ ಜೆರುಸ್ಲೇಮ್ ನಲ್ಲಿರುವ ಮಸ್ಜಿದುಲ್ ಅಖ್ಸಾ ಮಸೀದಿಯ ಬಗ್ಗೆ ಆತಂಕವಿದೆ. ಅದೇರೀತಿ, ಪ್ಯಾಲೆಸ್ತೀನಿಯರ ಹಕ್ಕುಗಳ ಬಗ್ಗೆ ಕೂಡ ಆತಂಕ ಇದೆ.
ಆದರೆ ಇದು ಬೇರೆ ಯಾವುದೇ ದೇಶದ ಮೇಲಿರುವ ವಿರೋಧವಲ್ಲ. ಇಸ್ರೇಲಿಗಳು ಮತ್ತು ಪ್ಯಾಲೆಸ್ತೀನಿನವರು ತಮ್ಮ ಸ್ವಂತ ಭೂಮಿಯಲ್ಲಿ ವಾಸಿಸುವ ಹಕ್ಕನ್ನು ಹೊಂದಿದ್ದಾರೆ. ಸಂಪೂರ್ಣ ಶಾಂತಿಯ ಜೀವನವನ್ನು ಪಡೆಯುವುದು ಅತ್ಯಗತ್ಯ ಎಂದು ಯುವರಾಜ ಹೇಳಿದ್ದಾರೆ.