ದುಬೈ: ಯುಎಇಯಲ್ಲಿ ಕನಿಷ್ಠ ವೇತನವನ್ನು ಜಾರಿಗೊಳಿಸುವ ಉದ್ದೇಶವಿಲ್ಲ ಎಂದು ಮಾನವ ಸಂಪನ್ಮೂಲ ಸಚಿವಾಲಯವು ವ್ಯಕ್ತಪಡಿಸಿದೆ. ಮನೆ ಕೆಲಸಗಾರರಿಗೆ ಶೀಘ್ರದಲ್ಲೇ ಕಡಿಮೆ ವೇತನವನ್ನು ಪ್ರಕಟಿಸಲಿದೆ ಎನ್ನುವ ವರದಿಯ ಬಗ್ಗೆ ಅಧಿಕಾರಿಗಳು ಉತ್ತರಿಸುತ್ತಿದ್ದರು.
ಕೆಲಸಗಾರ ಮತ್ತು ಮಾಲೀಕನ ನಡುವೆ ನಿಶ್ಚಯಿಸಲಾಗುವ ನಿರ್ಣಯವೇ ಸರಿ ಎನ್ನುವುದು ದೇಶದ ನಿಲುವಾಗಿದೆ. ಪರಸ್ಪರ ಒಮ್ಮತದಿಂದ ಕೂಡಿದ ಉದ್ಯೋಗ ಮಾರುಕಟ್ಟೆ ಸಾವಿರಾರು ಅವಸರಗಳನ್ನು ಉಂಟುಮಾಡಲಿದೆ. ಸ್ವತಂತ್ರ ಉದ್ಯೋಗ ಮಾರುಕಟ್ಟೆಯಾಗಿದೆ ಯುಎಇ ಗೆ ಉತ್ತಮ.ಆವಶ್ಯಕತೆ ಮತ್ತು ಸರಬರಾಜಿನ ಸ್ಥಿತಿಯು ಈ ನೀತಿಯಿಂದ ಸಮತೋಲಿತವಾಗಲಿದೆ.
ಪ್ರತಿ ವರ್ಷ ಸಾವಿರಾರು ಅತಿಥಿ ಕೆಲಸಗಾರರನ್ನು ಸೇರಿಸಿಕೊಳ್ಳಬಹುದು. ಸಮರ್ಥನೀಯ ಆರ್ಥಿಕ ಅಭಿವೃದ್ಧಿಗೆ ಇದು ಅತ್ಯಗತ್ಯ. ಕಡಿಮೆ ವೇತನವನ್ನು ಜಾರಿಗೊಳಿಸಲಾಗುವುದು ಎನ್ನುವ ವರದಿಗೆ ಸಚಿವಾಲಯ ಹೊಣೆಯಲ್ಲ. ಅದೇ ವೇಳೆ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ದೇಶವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಮಾಲೀಕರು ಮತ್ತು ಕಾರ್ಮಿಕರು ಹೊಂದಾಣಿಕೆ ಯಾಗುವ ಪಾಲಿಸಿಯನ್ನು ಅಧ್ಯಕ್ಷರಾದ ಶೇಖ್ ಖಲೀಫಾ ಬಿನ್ ಝಾಯಿದ್ ಅಲ್ ನಹ್ಯಾನ್ ಈಗಾಗಲೇ ಜಾರಿಗೆ ತಂದಿದ್ದಾರೆ. ಅದು ಪ್ರತಿಯೊಬ್ಬರನ್ನು ತೃಪ್ತಿಪಡಿಸುತ್ತದೆ ಎಂದು ಸಚಿವಾಲಯ ಸೂಚಿಸಿದೆ.