janadhvani

Kannada Online News Paper

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಟ್ಟದ ಪ್ರತಿಭೋತ್ಸವ- ಸ್ಥಳೀಯ ಸ್ವಾಗತ ಸಮಿತಿ ರಚನೆ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಟ್ ಫೆಡರೇಶನ್ ದ.ಕ ಜಿಲ್ಲೆ ಈಸ್ಟ್ ವಿಭಾಗದ ಪ್ರತಿಭೋತ್ಸವ ಘೋಷಣೆ ಹಾಗೂ ಸ್ಥಳೀಯ ಸ್ವಾಗತ ಸಮಿತಿ ರಚನೆಯು ಇತ್ತೀಚೆಗೆ ದರ್ಗಾ ಶರೀಫ್ ಕಾಜೂರು ಸಮುದಾಯ ಭವನದಲ್ಲಿ ಜಿಲ್ಲಾ ಅಧ್ಯಕ್ಷರಾದ ಇಬ್ರಾಹಿಂ‌ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಯ್ಯಿದ್ ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ದುಃಅ ನೇತೃತ್ವ ನೀಡಿ ಪ್ರತಿಭೋತ್ಸವ ದಿನಾಂಕವನ್ನು ಘೋಷಿಸಿದರು.
ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಧ್ಯಕ್ಷರಾದ ಕೆ.ಯು ಇಬ್ರಾಹಿಂ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಪ್ರತಿಭೋತ್ಸವ ತೀಮ್ ಸಾಂಗ್ ಬಿಡುಗಡೆ ಮಾಡಿದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಹಾಗೂ ಜಿಲ್ಲಾ ಪ್ರತಿಭೋತ್ಸವದ ಚೇರ್ಮೆನ್ ಫೈಝಲ್ ಝುಹ್ರಿ ಪ್ರಾಸ್ತಾವಿಕ ವಾಗಿ ಮಾತಾಡಿದರು.
ದ.ಕ ಜಿಲ್ಲಾ ಈಸ್ಟ್ ಪ್ರತಿಭೋತ್ಸವವು ನವೆಂಬರ್ 20,21 ರಂದು ಕಾಜೂರು ದರ್ಗಾ ವಠಾರದಲ್ಲಿ ನಡೆಯುವುದರಿಂದ
ಕಾರ್ಯಕ್ರಮದ ಯಶಸ್ವಿಗಾಗಿ
ಸ್ಥಳಿಯ ಸ್ವಾಗತ ಸಮಿತಿ ರಚಿಸಲಾಯಿತು.

ಅಸ್ಸಯ್ಯಿದ್ ಝೈನುಲ್ ಆಬೀದೀನ್ ಜಮಾಲುಲೈಲಿ ತಂಙಳ್, ರಹ್ಮಾನಿಯ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಅಧ್ಯಕ್ಷರಾದ ಕೆ.ಯು ಇಬ್ರಾಹಿಂ ಕಾಜೂರು, ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಕಾಜೂರು, ಪ್ರಧಾನ ಕಾರ್ಯದರ್ಶಿ ಜೆ.ಎಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕಮಾಲ್ ಕಾಜೂರು‌ ರವರುಗಳನ್ನು ಸ್ವಾಗತ ಸಮಿತಿ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.
ಸ್ಥಳೀಯ ಸ್ವಾಗತ ಸಮಿತಿ ಚೆರ್ಮೇನ್ ಆಗಿ ಅಬೂಬಕ್ಕರ್ ಕುಕ್ಕಾವು, ಜನರಲ್ ಕನ್ವಿನರ್ ಆಗಿ ಅಝೀಝ್ ದಿಡುಪೆ
ಫೈನಾನ್ಸ್ ಕಾರ್ಯದರ್ಶಿಯಾಗಿ ಡಿ.ವೈ ಉಮರಬ್ಬ ಕುಕ್ಕಾವು,
ವೈಸ್ ಚೆಯರ್‌ಮೆನ್ ಗಳಾಗಿ ಕೆ.ಪಿ ಮುಹಮ್ಮದ್, ಪಿ.ಎ ಮುಹಮ್ಮದ್, ಜೆ.ಎಚ್.ಉಸ್ಮಾನ್, ರಶೀದ್ ಮದನಿ,
ವೈಸ್ ಕನ್ವೀನರ್ ಗಳಾಗಿ ಸಿರಾಜ್, ಶಾಕೀರ್, ಮಜೀದ್ ಕುಕ್ಕಾವು, ಪಿ.ಎ ಉಸ್ಮಾನ್, ಶರೀಫ್ ಸಖಾಫಿ ದಿಡುಪೆ,
ಹಾಗೂ ಸದಸ್ಯರಾಗಿ ಹಕೀಂ ಮುಸ್ಲಿಯಾರ್, ನಝೀರ್, ನಾಸಿರ್, ಹಸೈನಾರ್, ರಾಝೀಕ್, ಹೈದರಾಲಿ, ಅಬೂಸ್ವಾಲಿಹ್,ನೌಶಾದ್, ಶೌಕತ್ ಆಲಿ, ಇಬ್ರಾಹಿಂ ಕಾಜೂರು, ಫಾರೂಕ್, ಮುಸ್ತಫಾ ಬಿ ವೈ, ರಿಯಾಝ್, ಜಬ್ಬಾರ್, ಮುಂತಾದವರನ್ನು ಒಳಗೊಂಡ ಸ್ಥಳೀಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.


ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ‌ ಕೋಶಾಧಿಕಾರಿ ಎಂ.ಶರೀಫ್ ಬೆರ್ಕಳ, ಜಿಲ್ಲಾ ಪ್ರತಿಭೋತ್ಸವದ ಕನ್ವೀನರ್ ಹಕೀಂ ಕಳಂಜಿಬೈಲು, ಜಿಲ್ಲಾ ಕಾರ್ಯದರ್ಶಿಗಳಾದ ಇಕ್ಬಾಲ್ ಮಾಚಾರು, ಮುಸ್ತಫಾ ಉರುವಾಲುಪದವು, ಸಿದ್ದೀಕ್ ಗೂನಡ್ಕ ಹಾಗೂ ಸದಸ್ಯರಾದ ಶರೀಫ್ ನಾವೂರು ಉಪಸ್ಥಿತಿಯಿದ್ದರು
ಜಿಲ್ಲಾ ಸದಸ್ಯ ರಶೀದ್ ಮದನಿ ಇಂದಬೆಟ್ಟು ಸ್ವಾಗತಿಸಿ, ಜಿಲ್ಲಾ ಸಿ.ಸಿ‌ ಕನ್ವಿನರಾದ
ಮಸೂದ್ ಸ’ಅದಿ ವಂದಿಸಿದರು.