janadhvani

Kannada Online News Paper

ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಪ್ರತಿಭೋತ್ಸವ ಸಮಿತಿಗೆ ಆಯ್ಕೆ

ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ವತಿಯಿಂದ ಎರಡು ವರ್ಷಕ್ಕೊಮ್ಮೆ ನಡೆಸುವ ಪ್ರತಿಭಾನ್ವೇಷಣೆ ಕಾರ್ಯಕ್ರಮ ಪ್ರತಿಭೋತ್ಸವ ಇದೇ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ ನಡೆಯಲಿದೆ.ಇದರ ವಿಟ್ಲ ಡಿವಿಷನ್ ಮಟ್ಟದ ನಿರ್ವಹಣಾ ಸಮಿತಿಯನ್ನು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಪ್ರತಿಭೋತ್ಸವ ಸಮಿತಿ ಚೇರ್ಮನ್ ಫೈಝಲ್ ಝುಹುರಿ ಕಲ್ಲುಗುಂಡಿ ಘೋಷಣೆ ಮಾಡಿದರು.

ಚೇರ್ಮನ್ ಆಗಿ ಹಸನ್ ಸಅದಿ ಕುಕ್ಕಿಲ, ವೈಸ್ ಚೇರ್ಮನ್ ಆಗಿ ಹಾರಿಸ್ ಹಿಮಮಿ ಪೆರುವಾಯಿ ಹಾಗೂ ಗಫೂರ್ ಕಂಬಳಬೆಟ್ಟು, ಕನ್ವೀನರ್ ಆಗಿ ಅಶ್ಫಾಕ್ ಕೊಡಂಗಾಯಿ, ವೈಸ್ ಕನ್ವೀನರ್ ಆಗಿ ಆರಿಫ್ ಕೊಂಬರಬೆಟ್ಟು ಹಾಗೂ ಇಬ್ರಾಹಿಂ ಕೋಡಪದವು, ಫೈನಾನ್ಸಿಯಲ್ ಕಾರ್ಯದರ್ಶಿ ಆಗಿ ಹಕೀಂ ಮುಸ್ಲಿಯಾರ್ ನೆಲ್ಲಿಗುಡ್ಡೆ ಸೇರಿದಂತೆ ಡಿವಿಷನ್ ಸಮಿತಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಅವರನ್ನೊಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಎಸ್ಸೆಸ್ಸೆಫ್ ದ.ಕ ಜಿಲ್ಲೆ (ಈಸ್ಟ್) ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ಶುಭಹಾರೈಸಿದರು.

ವಿ.ಎಂ ಅಬೂಬಕ್ಕರ್ ಹಿಮಮಿ ಸಖಾಫಿ ಯವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ, ಕೋಶಾಧಿಕಾರಿ ಜಂಶಾದ್ ಕಂಬಳಬೆಟ್ಟು ಉಪಸ್ಥಿತರಿದ್ದರು. ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಹಾಝ್ ಅಳಿಕೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.