janadhvani

Kannada Online News Paper

ಎಸ್ಸೆಸ್ಸೆಫ್ ಗಾಂಧಿನಗರ ಶಾಖೆ: ಪ್ರತಿಭೋತ್ಸವ ಸಮಿತಿ ಚೆರ್ಮಾನ್ ಆಗಿ ಆಬಿದ್ ಕಲ್ಲುಮುಟ್ಲು ಆಯ್ಕೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ( ಎಸ್ ಎಸ್ ಎಫ್ ) ಇದರ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಶಾಖೆ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದ ವರೆಗೆ ನಡೆಯುವ ಕಲಾ-ಸಾಹಿತ್ಯ ಸಂಭ್ರಮ ‘ಎಸ್ ಎಸ್ ಎಫ್ ಪ್ರತಿಭೋತ್ಸವ’ ಇದರ ಗಾಂಧಿನಗರ ಶಾಖಾ ಸಮಿತಿಯನ್ನು ಶಾಖಾ ಅಧ್ಯಕ್ಷರಾದ ಅಬ್ದುಲ್ ರಶೀದ್ ಝೈನಿ ಯವರ ಅಧ್ಯಕ್ಷತೆಯಲ್ಲಿ ಶಾಖಾ ಸಭೆಯಲ್ಲಿ ರಚನೆ ಮಾಡಲಾಯಿತು.

ಚೆರ್ಮಾನ್ ಆಗಿ ಆಬಿದ್ ಕಲ್ಲುಮುಟ್ಲು, ಜನರಲ್ ಕನ್ವಿನರ್ ಆಗಿ ಸಾದಿಕ್ ಪಿ ಜಿ, ಫಿನಾನ್ಸ್ ಸೆಕ್ರೆಟರಿ ಆಗಿ ಕಮಾಲ್ ಎ ಬಿ, ವೈಸ್ ಚೆರ್ಮಾನ್ ಆಗಿ ಆರಿಫ್ ಬುಶ್ರಾ, ಜಾಯಿಂಟ್ ಕನ್ವಿನರ್ ಆಗಿ ಅಬ್ದುಲ್ ರಶೀದ್ ಝೈನಿ ಮತ್ತು ಅಬ್ದುಲ್ ನಾಫಿ ಹಾಗೂ ಜಾಯಿಂಟ್ ಫಿನಾನ್ಸ್ ಸೆಕ್ರೆಟರಿ ಆಗಿ ಸಿಯಾದ್ ಪಿ ಎ ಜಯನಗರ ರನ್ನು ಆಯ್ಕೆ ಮಾಡಲಾಯಿತು.