janadhvani

Kannada Online News Paper

ಪಾಲಾ ಬಿಷಪ್,ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು-ಕಾಂತಪುರಂ ಎ.ಪಿ.ಉಸ್ತಾದ್

ಕೋಝಿಕ್ಕೋಡ್ | ಇಸ್ಲಾಂನಲ್ಲಿ ಲವ್ ಜಿಹಾದ್ ಅಥವಾ ಇನ್ನಾವುದೇ ಜಿಹಾದ್ ಇಲ್ಲ ಎಂದು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಮುಸ್ಲಿಂ ಸಮುದಾಯವು ಇದಕ್ಕೆ ಕರೆ ನೀಡಿಲ್ಲ ಮತ್ತು ಇನ್ನು ಮುಂದಕ್ಕೂ ನೀಡುವುದಿಲ್ಲ. ಆದ್ದರಿಂದ ಪಾಲಾ ಬಿಷಪ್ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಹಿಂಪಡೆಯಬೇಕು.

ಅದನ್ನು ಚರ್ಚಿಸಲು ಯಾರೂ ಮುಂದೆ ಬರಬಾರದು. ನಾವು ಇಲ್ಲಿ ಶಾಂತಿಯನ್ನು ಬಯಸುವವರಾಗಿದ್ದೇವೆ. ವಿಭಜಿಸಲು ಮತ್ತು ಜಗಳವಾಡಲು ಬಯಸುವುದಿಲ್ಲ. ಬಿಷಪ್ ಹೇಳಿದ್ದು ತಪ್ಪು.ಮುಸ್ಲಿಂ ಸಮುದಾಯದ ವಿರುದ್ಧ ಸುಳ್ಳು ವಾದ ಮಾಡಿದವರು ಅದನ್ನು ಹಿಂಪಡೆಯಬೇಕೇ ಹೊರತು ಮಧ್ಯಸ್ಥಿಕೆ ಅಗತ್ಯವಿಲ್ಲ.ಇದಕ್ಕಾಗಿ ಯಾರು ಪ್ರಯತ್ನಿಸದರೂ ಸಂತೋಷ ಎಂದರು.

ಬಲವಂತದ ಮತಾಂತರವನ್ನು ಇಸ್ಲಾಂ ಅನುಮತಿಸುವುದಿಲ್ಲ. ಲೌ ಜಿಹಾದ್ ಇಲ್ಲ ಎಂದು ಸ್ಪಷ್ಟವಾದಾಗ, ನಾರ್ಕೋಟಿಕ್ ಜಿಹಾದ್ ಎಂದು ಮರುನಾಮಕರಣ ಮಾಡಲಾಯಿತು. ಈ ಹೆಸರನ್ನು ಬಳಸುವುದರಲ್ಲಿ ಅರ್ಥವಿಲ್ಲ. ಮುಸ್ಲಿಂ ಸಮುದಾಯ ಯಾವತ್ತೂ ಭಯೋತ್ಪಾದನೆ ಅಥವಾ ಉಗ್ರವಾದವನ್ನು ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ. ನಾವು ಎಂದೆಂದಿಗೂ ಅದರ ವಿರುದ್ಧ ಧ್ವನಿ ಎತ್ತುವವರಾಗಿದ್ದೇವೆ. ತಪ್ಪು ಕೃತ್ಯಗಳಲ್ಲಿ ತೊಡಗಿಕೊಂಡವರು ಎಲ್ಲಾ ಧರ್ಮಗಳಲ್ಲೂ ಇದ್ದಾರೆ ಎಂದು ಕಾಂತಪುರಂ ಹೇಳಿದರು.

ಬಲದಿಂದ ಅಥವಾ ವಂಚನೆಯಿಂದ ಕೂಡಿದ ಮತಾಂತರವನ್ನು ಇಸ್ಲಾಂ ಕಲ್ಪಿಸಿಲ್ಲ. ಇಸ್ಲಾಂ ಧರ್ಮವನ್ನು ಬಯಸುವವರು ಸ್ವೀಕರಿಸುವರು. ಇಲ್ಲದವರು ತೊರೆಯುವರು, ಇದಾಗಿದೆ ನೀತಿ. ಒಬ್ಬನು ಇಸ್ಲಾಂಗೆ ಮತಾಂತರಗೊಳ್ಳಲು ಹೇಳುವ ಮೊದಲ ಪದಗಳನ್ನು ‘ಮನಸ್ಸಿನಲ್ಲಿ ದೃಢಪಡಿಸಿ,ನಾಲಿಗೆಯಲ್ಲಿ ಉಚ್ಚರಿಸಬೇಕು’ ಬಲತ್ಕಾರದಿಂದ ಮನಸ್ಸಿನಲ್ಲಿ ದೃಢಪಡಿಸಲು ಸಾಧ್ಯವಿಲ್ಲ ಎಂದು ಕಾಂತಪುರಂ ಹೇಳಿದರು.

error: Content is protected !! Not allowed copy content from janadhvani.com