janadhvani

Kannada Online News Paper

ಸಬಿಯಾ ಸೈಫಿ ಅತ್ಯಾಚಾರ ಖಂಡನೀಯ- ಕಾನೂನು ಹೋರಾಟ ಮತ್ತು ಪ್ರತಿಭಟನೆಗೆ ಎಸ್ಸೆಸ್ಸೆಫ್ ಕರೆ

ಬೆಂಗಳೂರು: ದೆಹಲಿಯ ಸಬಿಯಾ ಸೈಫಿ (ಹೆಸರು ಬದಲಾಯಿಸಿದೆ) ಎಂಬ ಪೋಲಿಸ್ (Delhi Civil Defence) ಉದ್ಯೋಗಿಯ ಮೇಲೆ ನಾಲ್ವರು ಕ್ರೂರಿಗಳು ಸೇರಿ ನಡೆಸಿದ ಅತ್ಯಂತ ಅಮಾನವೀಯವಾದ ಅತ್ಯಾಚಾರವನ್ನು ಎಸ್ಸೆಸ್ಸೆಫ್ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

SSF ರಾಜ್ಯಾಧ್ಯಕ್ಷರಾದ ಅಬ್ದುಲ್‌ ಲತೀಫ್ ಸ‌ಅದಿ ಶಿವಮೊಗ್ಗ ರವರ ನೇತೃತ್ವದಲ್ಲಿ ಇಂದು ಸೇರಿದ ಎಸ್ಸೆಸ್ಸೆಫ್ ಸೆಕ್ರೆಟ್ರಿಯಟ್ ಸಭೆಯು ಇದನ್ನು ತೀವ್ರ ಖಂಡಿಸಿ, ಮಾದ್ಯಮಗಳು ಮೌನ ಮುರಿದು ರಾಜ್ಯ ಮತ್ತು ರಾಷ್ಟ್ರದಲ್ಲಿ ಸ್ತ್ರೀಗಳ ಮೇಲೆ ನಡೆಯುತ್ತಿರುವ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಜಾಗೃತಿ ಮೂಡಿಸಬೇಕೆಂದು ಒತ್ತಾಯ ಪಡಿಸಿತು.

ಇತ್ತೀಚೆಗೆ ಕರ್ನಾಟಕದ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಡೆದ ಅತ್ಯಾಚಾರವನ್ನು ಖಂಡಿಸಿದ ಸಭೆಯು, ಇಂತಹ ಅತ್ಯಾಚಾರಿಗಳನ್ನು ಪತ್ತೆಹಚ್ಚಿ, ಕಠಿಣ ಶಿಕ್ಷೆಗೆ ಒಳಪಡಿಸುವುದಕ್ಕಾಗಿ ಕಾನೂನು ಹೋರಾಟ ನಡೆಸಲು ಹಾಗೂ ರಾಜ್ಯಾದ್ಯಂತ ಸಾವಿರ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿತು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ ಹಾಫಿಝ್ ಸುಫಿಯಾನ್ ಸಖಾಫಿ ಕೊಪ್ಪಳ ಸಹಿತ ಇರುವ ಸೆಕ್ರಟ್ರಿಯೇಟ್ ನಾಯಕರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com