janadhvani

Kannada Online News Paper

ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ದುಬೈ ಕಸ್ಟಮ್ಸ್ ನಿಂದ ಉಪಯುಕ್ತ ಮಾಹಿತಿ

ದುಬೈ :ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರಿಗೆ ಸುಧಾರಿತ ಮಾನಿಟರ್‌ಗಳು ಮತ್ತು ತಪಾಸಣೆ ವ್ಯವಸ್ಥೆಗಳೊಂದಿಗೆ ಉತ್ತಮ ಸೌಲಭ್ಯಗಳು ಮತ್ತು ಸೇವೆಗಳನ್ನು ಒದಗಿಸಲು ಕೆಲಸ ಮಾಡುತ್ತಿದ್ದೇವೆ ಎಂದು ದುಬೈ ಕಸ್ಟಮ್ಸ್ ಅಧಿಕಾರಿಗಳು ಹೇಳುತ್ತಾರೆ.

ಪ್ರಯಾಣಿಕರಿಗೆ ದುಬೈ ಕಸ್ಟಮ್ಸ್ ಕಾರ್ಪೊರೇಟ್ ವೆಬ್‌ಸೈಟ್‌ನಲ್ಲಿ ‘ಕಸ್ಟಮ್ಸ್ ಪ್ಯಾಸೆಂಜರ್ ಗೈಡ್’ ಲಭ್ಯವಿದೆ (www.dubaicustoms.gov.ae). ಪ್ರಯಾಣಿಕರ ಗೈಡ್ ನಲ್ಲಿ ದುಬೈಗೆ ಅಥವಾ ಅಲ್ಲಿಂದ ಪ್ರಯಾಣಿಸುವವರು ಯಾವ ಸಾಮಾನುಗಳನ್ನು ಒಯ್ಯಬಹುದು ಎಂಬ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ.

AED 3,000 ವರೆಗಿನ ಮೌಲ್ಯದ ವೈಯಕ್ತಿಕ ಉಡುಗೊರೆಗಳು ಕಸ್ಟಮ್ಸ್ ರಿಯಾಯಿತಿಗೆ ಒಳಪಟ್ಟಿರುತ್ತವೆ. ಗರಿಷ್ಠ 400 ಸಿಗರೇಟ್, 50 ಸಿಗಾರ್ ಮತ್ತು 500 ಗ್ರಾಂ ತಂಬಾಕನ್ನು ಹೊಂದಲು ಸಹ ಅನುಮತಿಸಲಾಗಿದೆ. ಈ ಮೌಲ್ಯಕ್ಕಿಂತ ಹೆಚ್ಚಿನ ಎಲ್ಲಾ ವಸ್ತುಗಳು ಕಸ್ಟಮ್ಸ್ ಸುಂಕಕ್ಕೆ ಒಳಪಟ್ಟಿರುತ್ತವೆ.

ಸಾಕುಪ್ರಾಣಿಗಳು, ಮೊಳಕೆ ಗಿಡಗಳು, ಸಿನಿಮಾ ಚಿತ್ರೀಕರಣಕ್ಕಾಗಿ ಬಳಸುವ ಕ್ಯಾಮರಾಗಳು, ಸಲಕರಣೆಗಳು, ಪ್ರಿನ್ಟ್ ಗಳು, ಮೇಕ್ಅಪ್ ಉತ್ಪನ್ನಗಳು, ಕೋಳಿ ಮತ್ತು ಫ್ರೋಝೆನ್ ಬರ್ಡ್ಸ್ ಮುಂತಾದ ಆಹಾರ ವಸ್ತುಗಳು. ವೈರ್‌ಲೆಸ್ ಉಪಕರಣಗಳು ಮತ್ತು ಡ್ರೋನ್‌ಗಳಿಗೆ ಪೂರ್ವಾನುಮತಿ ಅಗತ್ಯವಿದೆ.

ಮೂರು ತಿಂಗಳಿಗಿಂತ ಹೆಚ್ಚು ಕಾಲ ಉಪಯೋಗಿಸುವ ಔಷಧಿಗಳನ್ನು ಸಾಗಿಸಲು ದುಬೈ ಕಸ್ಟಮ್ಸ್, ಯುಎಇ ಆರೋಗ್ಯ ಮತ್ತು ರೋಗನಿರೋಧಕ ಸಚಿವಾಲಯವು ಜಂಟಿಯಾಗಿ ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ. ಅಂತಹ ಔಷಧಿಗಳನ್ನು ಹೊಂದಲು ಆಸ್ಪತ್ರೆ ಅಥವಾ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಅಗತ್ಯವಿದೆ. ಇದರಲ್ಲಿ ಔಷಧ ಮತ್ತು ಪ್ರಯಾಣಿಕರ ಆರೋಗ್ಯ ಸ್ಥಿತಿಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಔಷಧಿಗಳನ್ನು ಅದರ ಮೂಲ ಪ್ಯಾಕೆಟ್ಗಳಲ್ಲಿ ತರಬೇಕು.ಅದರ ಎಕ್ಸ್ಪೆಯರಿ ಡೇಟ್ (ಅಂತಿಮ ದಿನಾಂಕ) ಪ್ಯಾಕೆಟ್ ಮೇಲೆ ಸ್ಪಷ್ಟವಾಗಿ ನಮೂದಿಸಿರಬೇಕು. ಯುಎಇಯಲ್ಲಿ ನಸ್ವರ್ ಮತ್ತು ಪ್ಯಾನ್ ಅನ್ನು ನಿಷೇಧಿಸಲಾಗಿದೆ.

2021-2026 ರ ಅವಧಿಯ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಪ್ರಯಾಣಿಕರ ಕಸ್ಟಮ್ಸ್ ಪ್ರಕ್ರಿಯೆಗಳನ್ನು ಸುಗಮಗೊಳಿಸುವಲ್ಲಿ ಪ್ರಯಾಣಿಕರ ಕಾರ್ಯಾಚರಣೆ ವಿಭಾಗವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಯಾಣಿಕರ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಇಬ್ರಾಹಿಂ ಕಮಾಲಿ ಹೇಳಿದರು. ಪ್ರಯಾಣಿಕರಿಗೆ ಅತ್ಯುತ್ತಮ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ. ನಿಷೇಧಿತ ವಸ್ತುಗಳಿಂದ ಉಂಟಾಗುವ ಅಪಾಯಗಳಿಂದ ಸಮಾಜವನ್ನು ರಕ್ಷಿಸುವುದು ಮತ್ತು ಉಲ್ಲಂಘನೆಗಳ ವಿರುದ್ಧ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.

ದುಬೈಗೆ ಆಗಮಿಸುವ ಪ್ರವಾಸಿಗರು iDeclare ಸ್ಮಾರ್ಟ್ ಆಪ್ ಮೂಲಕ ಯಾವ ವಸ್ತುಗಳನ್ನು ಸಾಗಿಸಲು ಅನುಮತಿಯಿದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದು. ಇದು ಪ್ರಯಾಣಿಕರು ಕಾಯುವ ಸಮಯವನ್ನು ಕಡಿತಗೊಳಿಸಲಿದೆ. ಆಪ್ ಗೂಗಲ್ ಪ್ಲೇ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯವಿದೆ. ಕಾನೂನು ಹೊಣೆಗಾರಿಕೆಯನ್ನು ತಪ್ಪಿಸಲು ಬೇರೆಯವರ ಹೆಸರಿನಲ್ಲಿ ಲಗೇಜ್ ಅನ್ನು ಎಂದಿಗೂ ಒಯ್ಯಬೇಡಿ ಎಂದು ಇಬ್ರಾಹಿಂ ಕಮಾಲಿ ಅವರು ತಿಳಿಸಿದರು.

error: Content is protected !! Not allowed copy content from janadhvani.com