ಚಿಕ್ಕಮಗಳೂರು ಜಾಮಿಯಾ ಕಂಜುಲ್ ಇಮಾನ್
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಪ್ರತಷ್ಠಿತ ಸುನ್ನಿ ಸಂಸ್ಥೆಯಾದ ಜಾಮಿಯಾ ಕಂಜೂಲ್ ಇಮಾನ್ ನಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದ್ ರಜ್ವೀ ರವರು ಧ್ವಾರೋಹಣವನ್ನು ನೆರವೇರಿಸಿದರು ಮತ್ತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ರಾಷ್ಟ್ರಗೀತೆ ಹಾಡುವ ಮೂಲಕ ನೆರೆದಿದ್ದ ವಿವಿಧ ಸುನ್ನಿ ಸಂಘಟನೆಗಳ ಮುಖಂಡರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು ನಂತರ ಡಾಕ್ಟರ್ ಅಲ್ಲಮ ಇಕ್ಬಾಲ್ ರವರ ಸಾರೆ ಜಹಾನ್ ಸೆ ಅಚ್ಚ ಗೀತೆಯನ್ನು ಹಾಡಿದರು.
ಕೋರೋನ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿ ನೆರೆದಿದ್ದ ಎಲ್ಲಾ ಸಾರ್ವಜನಿಕರಿಗೆ ಸಿಹಿಯನ್ನು ಹಂಚಲಾಯಿತು ಈ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಜಮಾತ್ ಮುಖಂಡರಾದ ಆರಿಫ್ ಅಲಿ ಖಾನ್, ಇತರೆ ಸಂಘಟನೆಗಳ ಮುಖಂಡರಾದ ಅಖ್ತರ್ ಹುಸೈನ್ ರಜ್ವಿ , ಫಾರೂಕ್ ಅಹಮದ್ ,ರಜ್ವಿ ಸೈಯದ್ ಮಜಹಾರ್ ಹುಸೈನ್ ಹಾಗು, ಇನ್ನಿತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಧಾನ ಕಾರ್ಯದರ್ಶಿ ಹಾಜಿ ಫೈರೋಜ್ ಅಹಮದ್ ರಜ್ವಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.