janadhvani

Kannada Online News Paper

ಕರೀಂ ಹಾಜಿ ಚೆನ್ನಾರ್ ಅವರಿಗೆ ಕುಂಬ್ರದಲ್ಲಿ ಸನ್ಮಾನ

ಈ ವರದಿಯ ಧ್ವನಿಯನ್ನು ಆಲಿಸಿ

ಪ್ರತಿಷ್ಠಿತ ವಿದ್ಯಾ ಸಂಸ್ಥೆ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಕುಂಬ್ರ ಇದರ ನೂತನ ಕೋಶಾಧಿ\nಕಾರಿಯಾಗಿ ಸಂಸ್ಥೆಯ ಮುಖ್ಯ ಪೋಷಕ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರಿಂದ ನೇಮಕಗೊಂಡ ಪ್ರಮುಖ ಸುನ್ನೀ ಉಮರಾ ಮುಂದಾಳು, ಸಿ.ಅಬ್ದುಲ್ ಕರೀಂ ಹಾಜಿ ಚೆನ್ನಾರ್ ಅವರನ್ನು ಇತ್ತೀಚೆಗೆ ಕುಂಬ್ರ ಮರ್ಕಝ್‌ನಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಕಾರ್ಯಾಧ್ಯಕ್ಷ ಹಾಜಿ ಅಬ್ದುಲ್‌ ರಹ್ಮಾನ್ ಅರಿಯಡ್ಕ ಅವರು ಮೆಮೆಂಟೋ ನೀಡಿ ಕರೀಂ ಹಾಜಿಯವರನ್ನು ಗೌರವಿಸಿದರು.ಅನೇಕ ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಕರೀಂ ಹಾಜಿಯವರು
ಎಸ್.ವೈ.ಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕೋಶಾಧಿಕಾರಿಯೂ ಆಗಿದ್ದಾರೆ.
ದೀರ್ಘ ಕಾಲ ಸಯ್ಯಿದ್ ತಾಹಿರುಲ್ ಅಹ್ದಲ್ ತಂಙಳ್ ಅವರ ಬಳಿ ದರ್ಸ್ ವಿದ್ಯಾಭ್ಯಾಸ ಕೂಡಾ ಪಡೆದಿದ್ದಾರೆ.ಸನ್ಮಾನ ಸಮಾರಂಭದಲ್ಲಿ ಸಂಸ್ಥೆಯ ಸೌದಿ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಜಿ ಮುಹಮ್ಮದ್ ಫಾರೂಖ್ ಕನ್ಯಾನ, ಸೌದಿ ಸಮಿತಿಯ ಪ್ರತಿನಿಧಿಗಳಾದ ಹಾಜಿ ಅನ್ವರ್ ಹುಸೈನ್ ಗೂಡಿನಬಳಿ, ಹಾಜಿ ಮುಹಮ್ಮದ್ ಕುಕ್ಕುವಳ್ಳಿ , ಬಹರೈನ್ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ, ಬಹರೈನ್ ಸಂಚಾಲಕ ಸಿದ್ದೀಖ್ ಮುಸ್ಲಿಯಾರ್ ಕಲ್ಕಟ್ಟ, ಮನ್ಸೂರ್ ಬೆಲ್ಮ ಉಪಸ್ಥಿತಿತರಿದ್ದರು.ಸಂಸ್ಥೆಯ ಉಪಾಧ್ಯಕ್ಷ ಹಾಜಿ ಕೆ.ಎಸ್.ಅಬೂಬಕರ್ ಸ‌ಅದಿ ಮಜೂರು ಸ್ವಾಗತಿಸಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಬಿಕೆ ರಶೀದ್ ಸಂಪ್ಯ ಧನ್ಯವಾದ ಸಲ್ಲಿಸಿದರು.

error: Content is protected !! Not allowed copy content from janadhvani.com