janadhvani

Kannada Online News Paper

ಪುತ್ತೂರು: ಈಶ್ವರಮಂಗಲ: ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಟೀಂ ಇಸಾಬ ವತಿಯಿಂದ ಎನೇಬ್ಳ್ ಇಸಾಬ-21 ಕಾರ್ಯಕ್ರಮ 2021 ಜುಲೈ 16 ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಈಶ್ವರಮಂಗಲ ತ್ವೈಬ ಸೆಂಟರ್ ನಲ್ಲಿ ನಡೆಯಿತು. ಸೆಂಟರ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ರವರ ಅಧ್ಯಕ್ಷತೆಯಲ್ಲಿ ದ.ಕ. ಈಸ್ಟ್ ಜಿಲ್ಲೆ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಕೊಯಿಲ ರವರು ಉದ್ಘಾಟಿಸಿದರು.

ಯೋಜನೆಗಳನ್ನು ಸಕಾರಾತ್ಮಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ಅಬ್ದುಲ್ ಅಝೀಝ್ ಮಿಸ್ಬಾಹಿ ಸವಿಸ್ತಾರವಾಗಿ ವಿವರಿಸಿದರು. ಸ್ವಚ್ಛತಾ ಅಭಿಯಾನ, ಗ್ರೀನ್ ಫಾಮ್, ತುರ್ತು ಸೇವಾ ವಿಭಾಗ ಯೋಜನೆಗಳನ್ನು ಸಕ್ರಿಯಗೊಳಿಸುವುದು. ಕೋವಿಡ್ ಪ್ರೋಟೋಕಾಲ್ ಪಾಲಿಸಿ ಅಂತ್ಯಸಂಸ್ಕಾರ ಮಾಡುವುದರ ಬಗ್ಗೆ ಜುಲೈ 25 ರಂದು ಎರಡನೇ ಹಂತದ ಪ್ರತ್ಯೇಕ ತರಬೇತಿ ನಡೆಸುವುದು. ಹಾಗೂ ಈದ್ ದಿನದಂದು ಆಹಾರ ಪೊಟ್ಟಣಗಳನ್ನು ವಿತರಿಸುವುದು.

ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧ್ಯಕ್ಷ ಅಬೂಬಕರ್ ಸಿಎಂ, ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರು, ತಖಿಯುದ್ದೀನ್ ಮದನಿ, ಇಬ್ರಾಹಿಂ ಮದನಿ, ಶಂಸುದ್ದೀನ್ ಹನೀಫಿ, ತ್ವಾಹ ಸಅದಿ, ಉಮರ್ ಸಅದಿ ಹಾಗೂ ಮಾಡನ್ನೂರ್, ಕುಕ್ಕಾಜೆ, ಕೊಯಿಲ, ಬಡಗನ್ನೂರ್, ಮೀನಾವು, ಪಾಳ್ಯತ್ತಡ್ಕ, ಮೇನಾಲ, ಕರ್ನೂರ್ ಬ್ರಾಂಚುಗಳಿಂದ ಇಸಾಬ ಟೀಮ್ ಸದಸ್ಯರು ಹಾಜರಿದ್ದರು. ಸಭೆಯಲ್ಲಿ ಸೆಂಟರ್ ವತಿಯಿಂದ ಫಾಗಿಂಗ್ ಮಿಷನ್ ಇಸಾಬ ಟೀಮ್ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಇಸಾಬ ಟೀಮ್ ಅಮೀರ್ ಇಸ್ಮಾಯಿಲ್ ಕೆಎಚ್ಚ್ ಸ್ವಾಗತಿಸಿ, ಹೆಚ್ಚುವರಿ ಅಮೀರ್ ರಫೀಕ್ ಕಾವುಂಜ ವಂದಿಸಿದರು.

error: Content is protected !! Not allowed copy content from janadhvani.com