janadhvani

Kannada Online News Paper

ಕರೋಪಾಡಿ: ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡದಿಂದ ಸ್ವಚ್ಛತಾ ಅಭಿಯಾನ

ಕರ್ನಾಟಕ ಮುಸ್ಲಿಂ ಜಮಾಅತ್ ಹಾಗೂ SჄS.SSF.KCF ಕಾರ್ಯಕರ್ತರನ್ನೊಳಗೊಂಡ ತುರ್ತು ಸೇವಾ ತಂಡ “ಸಹಾಯ್” ವತಿಯಿಂದ ರಾಜ್ಯಾದ್ಯಂತ ನಡೆಯುವ ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” ಸಹಾಯ್ ಸ್ವಚ್ಛತಾ ಅಭಿಯಾನದ ಅಂಗವಾಗಿ ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡದಿಂದ ಕರೋಪಾಡಿ ಗ್ರಾಮ ಪಂಚಾಯತ್ ಗ್ರಾಮ ಕರಣಿಕರ ಕಚೇರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತನಡ್ಕ ಹಾಗೂ ಧಾರ್ಮಿಕ ಕೇಂದ್ರ ಬಸ್ ತಂಗುದಾನ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಶುಚೀಕರಣ ಗೊಳಿಸುವ ಮೂಲಕ ದ್ವಿತೀಯ ಹಂತದ ನಿರ್ಮಲ ಮನಸ್ಸು ನೈರ್ಮಲ್ಯ ಪರಿಸರ” ಸಹಾಯ್ ಸ್ವಚ್ಛತಾ ಅಭಿಯಾನವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಸ್ವಚ್ಛತಾ ಕಾರ್ಯಕ್ರಮವನ್ನು ಸಾರ್ವಜನಿಕರು ವರ್ತಕರು ಹಾಗೂ ಊರ ಪ್ರಮುಖರು ತುಂಬು ಹೃದಯದಿಂದ ಶ್ಲಾಘಿಸಿದರು. ಆನಂದ ತೆಂಕ ಬಯಲು ಮಿತ್ತನಡ್ಕ ಅವರು ನೀವು ಮಾಡುವ ಸಮಾಜಸೇವೆ ಕಾರ್ಯಗಳು ಅಭಿನಂದನಾರ್ಹವಾಗಿದೆ ಎಂದು ಹೇಳಿ ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡಕ್ಕೆ ಕುಡಿಯಲು ತಂಪುಪಾನೀಯ ನೀಡಿದರು.

ಅದೇ ರೀತಿ, ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನ್ವರ್ ಕರೋಪಾಡಿ ಅವರು ಸಹಾಯ್ ವಿಟ್ಲ ಸರ್ಕಲ್ ತುರ್ತು ಸೇವಾ ತಂಡವನ್ನುದ್ದೇಶಿಸಿ ನಿಮ್ಮನ್ನು ಮೊದಲ ಬಾರಿ ನೋಡಿದ್ದು ಜನರು ಮನೆಯಿಂದ ಹೊರಗಡೆ ಹೋಗಲು ಹೆದರುತ್ತಿದ್ದ ಕೋವಿಡ್ ಅಬ್ಬರದ ಸಮಯದಲ್ಲಿ ಎಲ್ಲಾ ಊರಿಗೆ ಹೋಗಿ ಸ್ಯಾನಿಟೈಸರ್ ಸಿಂಪಡನೆ ಮಾಡಿ ಜನಜಾಗೃತಿ ಮೂಡಿಸಿದ ಹಾಗೆ ನಮ್ಮೂರಿಗೂ ಬಂದು ಸ್ಯಾನಿಟೈಸರ್ ಸಿಂಪಡನೆ ಮಾಡಿ ಜನಜಾಗೃತಿ ಮೂಡಿಸಿದ್ದರು.

ಅದಲ್ಲದೆ ನಮ್ಮ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಬಂದ ಮನೆಗೆ ಅಗತ್ಯ ವಸ್ತುಗಳನ್ನೊಳಗೊಂಡ ರೇಷನ್ ಕಿಟ್ಟನ್ನು ಸೋಂಕಿತರ ಮನೆಬಾಗಿಲಿಗೆ ತಲುಪಿಸಿ ಸಾಂತ್ವಾನ ಹೇಳಿ ಇದೀಗ ಮಗದೊಮ್ಮೆ ನಮ್ಮೂರಿಗೆ ಬಂದು ಸ್ವಚ್ಛತೆಯನ್ನು ಮಾಡಿದ ನಿಮಗೆ ನನ್ನ ಹಾಗೂ ನಮ್ಮ ಊರಿನ ಜನರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು, ದೇವರು ನಿಮ್ಮೆಲ್ಲ ಸತ್ಕರ್ಮವನ್ನು ಸ್ವೀಕರಿಸಿ ನಿಮಗೆ ಅರ್ಹವಾದ ಪ್ರತಿಫಲವನ್ನು ನೀಡಲಿ ಎಂದು ಪ್ರಾರ್ಥನೆ ಮಾಡಿ ಹಾರೈಸಿದರು.

ವರದಿ: D.A ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com