janadhvani

Kannada Online News Paper

ಲವ್ ಜಿಹಾದ್ ಕಾನೂನು ಹಿಂದೂಗಳಿಗೂ ಅನ್ವಯ- ಅಸ್ಸಾಂ ಸಿಎಂ

ಗುವಾಹಟಿ: ದೇಶದೆಲ್ಲೆಡೆ ಲವ್‌ ಜಿಹಾದ್ ಪ್ರಕರಣಗಳ ಕುರಿತ ಚರ್ಚೆ ವ್ಯಾಪಕ ಸುದ್ದಿಯಲ್ಲಿರುವಾಗಲೇ ಅಸ್ಸಾಂ ಸರಕಾರ ಲವ್‌ ಜಿಹಾದ್‌ ಮಟ್ಟ ಹಾಕಲು ಶೀಘ್ರದಲ್ಲೇ ಕಾನೂನು ಜಾರಿತರಲು ಮುಂದಾಗಿದೆ.

ಈ ಕಾನೂನು ಹಿಂದೂ ಮತ್ತು ಮುಸಲ್ಮಾನರು ಸೇರಿದಂತೆ ಎಲ್ಲರಿಗೂ ಏಕರೂಪವಾಗಿರುತ್ತದೆ ಎಂದು ಹೇಳಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಹಿಂದೂ ಯುವಕನೊಬ್ಬ ಹಿಂದೂ ಯುವತಿಗೆ ಪ್ರೀತಿ ಹೆಸರಲ್ಲಿ ತನ್ನ ಧರ್ಮ ಮತ್ತು ಇತರೆ ವೈಯಕ್ತಿಕ ಮಾಹಿತಿಗಳನ್ನು ಮರೆಮಾಚಿ ಮೋಸ ಮಾಡೋದು ಕೂಡ ಲವ್‌ ಜಿಹಾದ್ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಸರ್ಕಾರ ಬಂದು ಎರಡು ತಿಂಗಳಷ್ಟೇ ಆಗುತ್ತಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಮೊದಲು ಹಸು ಸಂರಕ್ಷಣಾ ಕಾನೂನನ್ನು ಜಾರಿ ತರುತ್ತೇವೆ. ಮುಂದಿನ ತಿಂಗಳು ಎರಡು ಮಕ್ಕಳು ನೀತಿಯನ್ನು ಅನುಷ್ಟಾನಗೊಳಿಸುತ್ತೇವೆ. ಬಳಿಕ ಲವ್‌ ಜಿಹಾದ್ ಕಾನೂನು ಜಾರಿ ತರುತ್ತೇವೆ ಎಂದು ಹೇಳಿದ್ದಾರೆ.

ನಾವು ಲವ್‌ಜಿಹಾದ್ ಪದವನ್ನು ಬಳಸಲು ಬಯಸುವುದಿಲ್ಲ. ಏಕೆಂದರೆ ಹಿಂದೂವೊಬ್ಬ ಹಿಂದೂ ಯುವತಿಗೆ ಮೋಸ ಮಾಡಬಾರದು ಎಂದು ನಾವು ಭಾವಿಸುತ್ತೇವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಗೆ ಮೋಸ ಮಾಡುವುದು ಮಾತ್ರ ಲವ್‌ ಜಿಹಾದ್ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲವ್‌ ಜಿಹಾದ್ ಅನ್ನೋದು ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಸಂಬಂಧವನ್ನು ಗುರಿಯಾಗಿಸಿಕೊಂಡು ಬಲಪಂಥೀಯ ಗುಂಪುಗಳು ಬಳಸುವ ಪದವಾಗಿದ್ದು, ಇದು ಮಹಿಳೆಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಹುನ್ನಾರವಾಗಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ಅಸ್ಸಾಂನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಲವ್‌ ಜಿಹಾದ್ ವಿರುದ್ಧ ಕಠಿಣ ಕಾನೂನು ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು

error: Content is protected !! Not allowed copy content from janadhvani.com