janadhvani

Kannada Online News Paper

ಶಾರ್ಜಾ: ತಂದೆಯ ಪ್ರೇಯಸಿಯಿಂದ ದೌರ್ಜನ್ಯ- ಪೋಲೀಸ್ ಆಶ್ರಯದಲ್ಲಿರುವ ವಿದ್ಯಾರ್ಥಿಗಳಿಗೆ ಮರ್ಕಝ್ ಆಸರೆ

ಶಾರ್ಜಾ :ತಂದೆಯ ಪ್ರೇಯಸಿಯಿಂದ ದೌರ್ಜನ್ಯಕ್ಕೊಳಗಾಗಿ ಶಾರ್ಜಾ ಪೊಲೀಸರೊಂದಿಗೆ ಆಶ್ರಯ ಪಡೆದಿರುವ ವಿದ್ಯಾರ್ಥಿಗಳ ಅಧ್ಯಯನವನ್ನು ಕೋಝಿಕ್ಕೋಡ್ ಕಾರಂದೂರ್ ಮರ್ಕಝ್ ವಹಿಸಿಕೊಂಡಿದೆ.

ದುಬೈ ಮರ್ಕಝ್ ಝಹ್ರತುಲ್ ಖುರ್ ಅನ್ ನಿರ್ದೇಶಕ ಯಾಹ್ಯಾ ಅಬ್ದುಲ್ ಖಾದಿರ್ ಮಾತನಾಡಿ, ಆಲಪ್ಪುಝದಲ್ಲಿರುವ ಮರ್ಕಝ್ ಸಂಸ್ಥೆ ಅಧ್ಯಯನಕ್ಕೆ ಸೌಲಭ್ಯಗಳನ್ನು ಒದಗಿಸಲಿದ್ದು, ಮಕ್ಕಳ ಪಾಸ್‌ಪೋರ್ಟ್‌ಗಳನ್ನು ಪಡೆಯುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು ಅವರು ಹೇಳಿದರು.

ಈ ಮಕ್ಕಳು ಊರಲ್ಲಿರುವ ಅವರ ಸ್ವಂತ ತಾಯಿಯ ಬಳಿ ತಲುಪಿಸುವಂತೆ ಸಹಾಯ ಕೋರಿ ಪೊಲೀಸರನ್ನು ಸಂಪರ್ಕಿಸಿದರು. ಆದಾಗ್ಯೂ, ನಾಲ್ಕು ವರ್ಷಗಳಿಂದ ವೀಸಾ ಇಲ್ಲದೇ ವಾಸವಾಗಿರುವ ಇವರಿಗೆ ಮನೆಗೆ ಮರಳಲು 60,000 ದಿರ್ಹಮ್ ದಂಡವನ್ನು ಪಾವತಿಸಬೇಕಾಗುತ್ತದೆ. ಅವರ ಅಧ್ಯಯನವನ್ನು ವರ್ಷಗಳಿಂದ ಮೊಟಕುಗೊಳಿಸಲಾಗಿದೆ.ಪೊಲೀಸರ ಸೂಚನೆಯಂತೆ ವಿದ್ಯಾರ್ಥಿಗಳು ಈಗ ಸಮಾಜ ಸೇವಕರ ಆರೈಕೆಯಲ್ಲಿದ್ದಾರೆ.

ಶಾರ್ಜಾದಲ್ಲಿ ಹುಟ್ಟಿ ಬೆಳೆದ ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ 17 ವರ್ಷ ಮತ್ತು ಇನ್ನೊಬ್ಬನಿಗೆ 12 ವರ್ಷ. ದಂಪತಿಗಳು ಪರಸ್ಪರ ಜಗಳವಾಡಿ, ಪತ್ತನಂತ್ತಿಟ್ಟಾ ಮೂಲದ ತಾಯಿ ಊರಿಗೆ ಮರಳಿದ್ದರು. ಈ ಮಕ್ಕಳು ಮಾಹಿ ಮೂಲದ ತಮ್ಮ ತಂದೆಯೊಂದಿಗೆ ಶಾರ್ಜಾದಲ್ಲೇ ಉಳಿದಿದ್ದರು. ತಾಯಿಯ ತಂಗಿಯು, ಇವರ ತಂದೆಯ ಪ್ರೇಯಸಿಯಾಗಿ ಬಂದಿದ್ದು,ಇವರ ಜೀವನವನ್ನು ಬದಲಿಸಿತು ಎಂದು ಮಕ್ಕಳು ಹೇಳುತ್ತಾರೆ.

ಒಬ್ಬನದ್ದು ಎಂಟನೇ ತರಗತಿಯಲ್ಲಿ ಅಧ್ಯಯನ ನಿಂತರೆ, ಇನ್ನೊಬ್ಬ ಐದನೇ ತರಗತಿಯಲ್ಲಿ ಕಲಿಕೆ ಮೊಟಕುಗೊಂಡಿದೆ. ನಾಲ್ಕು ವರ್ಷಗಳಿಂದ ವೀಸಾವನ್ನೂ ನವೀಕರಿಸಿಲ್ಲ.ಪಾಸ್‌ಪೋರ್ಟ್ ಕೂಡಾ ಅವಧಿ ಮೀರಿದೆ. ಅವರ ತಂದೆ ಈ ಬೇಸಿಗೆಯಲ್ಲೂ ಕೂಡಾ ಈ ಮಕ್ಕಳನ್ನು ಎಸಿ ಸಹ ಇಲ್ಲದ ಕೋಣೆಯಲ್ಲಿ ಇರಿಸಿದ್ದಾಗಿ ಮಕ್ಕಳು ಹೇಳಿದ್ದಾರೆ. ಅನಾರೋಗ್ಯದ ಮಕ್ಕಳಿಗೆ ಚಿಕಿತ್ಸೆಯನ್ನೂ ನೀಡಿಲ್ಲ. ಚಿತ್ರಹಿಂಸೆ ಸಹಿಸಲಾಗದ ಕಾರಣ ಅವರು ಪೊಲೀಸರನ್ನು ಸಂಪರ್ಕಿಸಿದರು.

ಮಕ್ಕಳ ಪಾಸ್‌ಪೋರ್ಟ್ ಮತ್ತು ಇತರ ದಾಖಲೆಗಳನ್ನು ಹಾಜರುಪಡಿಸುವಂತೆ ಶಾರ್ಜಾ ಪೋಲೀಶರು ತಂದೆಯನ್ನು ಕೇಳಿದ್ದಾರೆ.ತಂದೆಯೊಂದಿಗೆ ಹೋಗಲು ನಿರಾಕರಿಸಿದ್ದಕ್ಕಾಗಿ ಪೊಲೀಸರು ಮಕ್ಕಳನ್ನು ಶಾರ್ಜಾ ಭಾರತೀಯ ಸಂಘ ಮತ್ತು ಮಕ್ಕಳ ರಕ್ಷಣಾ ತಂಡದ ಕಾರ್ಯಕರ್ತರಿಗೆ ಹಸ್ತಾಂತರಿಸಿದ್ದಾರೆ.

error: Content is protected !! Not allowed copy content from janadhvani.com