janadhvani

Kannada Online News Paper

KSWA: ಸಹಾಯ್ ತಂಡಕ್ಕೆ ಆಕ್ಸಿಜನ್ ಸಿಲಿಂಡರ್ ಹಸ್ತಾಂತರ

ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ತ್ ಸಹಾಯಿ ತಂಡಕ್ಕೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ (KSWA) ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ವತಿಯಿಂದ ಆಕ್ಸಿಜನ್ ಸಿಲಂಡರುಗಳನ್ನು ಹಸ್ತಾಂತರಿಸಲಾಯಿತು.

ಕೊಟ್ಟಮುಡಿ ಮರ್ಕಝುಲ್ ಹಿದಾಯ ಕ್ಯಾಂಪಸಿನಲ್ಲಿ ನಡೆದ ಕಾರ್ಯಕ್ರಮದಲ್ಲಿ KSWA ಸೌದಿ ರಾಷ್ಟ್ರೀಯ ಸಮಿತಿ ಚೆಯರ್ಮೇನ್ ಸಯ್ಯಿದ್ ಅಬ್ದುಲ್ ಖಾದರ್ ತಂಙಳ್ ಅಲ್ ಬುಖಾರಿ, ಸೌದಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ, ಸೌದಿ ರಾಷ್ಟ್ರೀಯ ಸಮಿತಿ ಕೋರ್ಡಿನೇಟರ್ ಹಫೀಲ್ ಸಅದಿ ಮತ್ತು KSWA ನಾಯಕರ ನೇತೃತ್ವದಲ್ಲಿ ಕೊಡಗು ಜಿಲ್ಲಾ ಸಹಾಯ್ ತಂಡಕ್ಕೆ ಹಸ್ತಾಂತರಿಸಿದರು

ಪ್ರಸ್ತುತ ಕಾರ್ಯಕ್ರಮದಲ್ಲಿ SYS ಜಿಲ್ಲಾ ಅಧ್ಯಕ್ಷ ಅಬ್ದುಲ್ಲ ಸಖಾಫಿ, SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ V. P. ಮೊಯ್ದೀನ್,KMJ ಕೊಡಗು ಜಿಲ್ಲಾ ಸಹಾಯ್ ತಂಡ ಚೇರ್ಮೇನ್ ಲತೀಫ್ ಸುಂಟಿಕೊಪ್ಪ, KMJ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, KMJ ನಾಯಕರಾದ ಇಸ್ಮಾಯಿಲ್ ಸಖಾಫಿ, ಯೂಸುಫ್ ಕೊಂಡಂಗೇರಿ,ಹನೀಫ್ ಸಖಾಫಿ ಕೊಂಡಂಗೇರಿ. ರಾಜ್ಯ ಇಸಾಬ ಚೆಯರ್ಮ್ಯಾನ್ ಉಮರ್ ಸಖಾಫಿ ಎಡಪ್ಪಲ, ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ, SSF ಪ್ರಧಾನ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ,KSWA ಸೌದಿ ಮತ್ತು GCC ನೇತಾರರು ಭಾಗವಹಿಸಿದ್ದರು