ದುಬೈ ವಿಮಾನ ನಿಲ್ದಾಣದ ಟರ್ಮಿನಲ್ ವನ್ ಒಂದೂವರೆ ವರ್ಷಗಳ ಬಳಿಕ ಇದೀಗ ತೆರೆಯಲಾಗಿದೆ.
ಕೋವಿಡ್ ವಿಸ್ತರಣೆಯಿಂದಾಗಿ ಕಳೆದ ಮಾರ್ಚ್ನಲ್ಲಿ ಟರ್ಮಿನಲ್ ಮುಚ್ಚಲಾಗಿತ್ತು.ಮುಚ್ಚಿದ 15 ತಿಂಗಳ ನಂತರ, ವಿಶ್ವ ದರ್ಜೆಯ ಟರ್ಮಿನಲ್ ಮತ್ತೆ ಪ್ರಯಾಣಿಕರನ್ನು ಸ್ವಾಗತಿಸುತ್ತಿದೆ. ಮೊದಲ ವಿಮಾನ ರಿಯಾದ್ನ ಫ್ಲೈನಾಸ್ ಬಂದಿಳಿದಿದೆ.
ಈ ಟರ್ಮಿನಲ್ ನಿಂದ ಸೇವೆಯನ್ನು ನಿರ್ವಹಿಸುತ್ತಿದ್ದ 65 ವಿಮಾನಯಾನ ಸಂಸ್ಥೆಗಳು ಟರ್ಮಿನಲ್ಗೆ ಮರಳುವುದಾಗಿ ತಿಳಿಸಿವೆ. ಏರ್ ಇಂಡಿಯಾ ವಿಮಾನಗಳು ಈಗ ಟರ್ಮಿನಲ್ ಒನ್ ನಿಂದ ನಿರ್ಗಮಿಸಲಿವೆ.
ಟರ್ಮಿನಲ್ 2 ರಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳು ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿವೆ. ಸ್ಪೈಸ್ಜೆಟ್ ಮತ್ತು ಇಂಡಿಗೊ ಸೇರಿದಂತೆ ವಿಮಾನಗಳು ಟರ್ಮಿನಲ್ ಒನ್ನಿಂದ ನಿರ್ಗಮಿಸಲಿವೆ. ತಾತ್ಕಾಲಿಕವಾಗಿ ಟರ್ಮಿನಲ್ ಎರಡು ಮತ್ತು ಮೂರಕ್ಕೆ ಸ್ಥಳಾಂತರಗೊಂಡ ಅನೇಕ ವಿಮಾನಗಳು ಕ್ರಮೇಣ ಟರ್ಮಿನಲ್ ಒನ್ಗೆ ಮರಳಲಿದೆ.
ಟರ್ಮಿನಲ್ ಒನ್ನಲ್ಲಿ ಡ್ಯೂಟಿ ಫ್ರೀ ಶಾಪ್ ಗಳು ಕೂಡ ಸಕ್ರಿಯವಾಗಿದೆ. ವರ್ಷಕ್ಕೆ 180 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಹಾದು ಹೋಗುವ, ವಿಶ್ವದ ಪ್ರಮುಖ ವಿಮಾನ ನಿಲ್ದಾಣ ಟರ್ಮಿನಲ್ಗಳಲ್ಲಿ ಒಂದಾಗಿದೆ ದುಬೈನ ಟರ್ಮಿನಲ್ ಒನ್.
















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ