ಎಸ್ಸೆಸ್ಸೆಫ್ ದ.ಕ ಜಿಲ್ಲೆ, ವೆಸ್ಟ್ ಇದರ ಅಧೀನದ ದಅ್ ವಾ ಸಮಿತಿಯು ಜೂನ್ 15,16,17 ದಿನಾಂಕಗಳಲ್ಲಿ
ಹಮ್ಮಿಕೊಂಡ ಮೂರು ದಿನಗಳ ಆನ್ ಲೈನ್ ‘ಮಖ್ದೂಮಿಯ ಸಮ್ಮಿಟ್’ ಎಂಬ ಮುತಅಲ್ಲಿಮರಿಗಾಗಿ ಆಯೋಜಿಸಲಾದ ಕಾರ್ಯಕ್ರಮವು ಜಿಲ್ಲಾಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಉಳ್ಳಾರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಸಮಾಪ್ತಿಗೊಂಡಿತು.
ರಾತ್ರಿ 8.45 ರಿಂದ 10 ಗಂಟೆ ತನಕ ನಡೆದ ಸಂಗಮಗಳಲ್ಲಿ ಇನ್ನೂರರಷ್ಟು ಮುತಅಲ್ಲಿಮರು ಭಾಗವಹಿಸಿದ್ದರು.
ಮೊದಲನೇ ದಿನದ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಲ್ ಸುಫ್ಯಾನ್ ಸಖಾಫಿ, ಮೂಡಬಿದ್ರೆ ಉದ್ಘಾಟಿಸಿದ್ದು,ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಫಾರೂಖ್ ನಈಮಿ ಕೊಲ್ಲಂ ‘ಮುತಅಲ್ಲಿಂ:ಇಮಾಂ ಗಝ್ಝಾಲಿ(ರ) ಕಂಡಂತೆ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು.
ಎರಡನೇ ದಿನದಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಉದ್ಘಾಟಿಸಿದ್ದು, ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಯವರು ‘ ವಿದ್ವಾಂಸ ಬದುಕು’ ಎಂಬ ವಿಷಯದ ಕುರಿತು ಬೋಧನೆ ನೀಡಿದರು.ಕೊನೆಯ ದಿನದಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ದಅ್ ವಾ ಕಾರ್ಯದರ್ಶಿ ಕೆಎಂ ಮುಸ್ತಫಾ ನಈಮಿ ಸಖಾಫಿಯವರು ಉದ್ಘಾಟಿಸಿದರೆ.
ಕೊಳತ್ತೂರು ಇರ್ಶಾದಿಯ್ಯಃ ಸಂಸ್ಥೆಯ ಪ್ರ.ಕಾರ್ಯದರ್ಶಿ ಅಲವಿ ಸಖಾಫಿ ಕೊಳತ್ತೂರು ‘ಮುತಅಲ್ಲಿಂ ಮತ್ತು ಸಂಘಟನೆ’ ಎಂಬ ವಿಷಯದಲ್ಲಿ ಉದ್ಭೋದನೆ ನೀಡಿದರು.
ಮುನೀರ್ ಅಹ್ಮದ್ ಸಖಾಫಿ ಅಧ್ಯಕ್ಷೀಯ ಭಾಷಣ ಮಾಡಿದರು.ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಪ್ರ.ಕಾರ್ಯದರ್ಶಿ ಹೈದರ್ ಕೃಷ್ಣಾಪುರ,ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ,
ಮೂರು ದಿನಗಳ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ದಅ್ ವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ಸ್ವಾಗತಿಸಿದ್ದು,ಜಿಲ್ಲಾ ದಅ್ ವಾ ಕನ್ವೀನರ್ ಫಾರೂಖ್ ಸಖಾಫಿ ಕಾಟಿಪಳ್ಳ ವಂದಿಸಿದರು.ತಾಂತ್ರಿಕ ಸಹಾಯವನ್ನು ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ ನೀಡಿದರು.ಮುತಅಲ್ಲಿಮರು ಅರಿತಿರಬೇಕಾದ ಪ್ರಮುಖ ಪಾಠಗಳು ಈ ಕಾರ್ಯಕ್ರಮದಲ್ಲಿ ನಮಗೆ ದೊರೆಯಿತು ಎಂದು ಭಾಗವಹಿಸಿದ್ದ ಅನೇಕ ಮುತಅಲ್ಲಿಮರು ಅಭಿಪ್ರಾಯ ವ್ಯಕ್ತಪಡಿಸಿದರು.