janadhvani

Kannada Online News Paper

ರಿಯಾದಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದ ಕೆಸಿಎಫ್

ರಿಯಾದಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕೋಲ ನಿವಾಸಿ ಅಮ್ಜದ್ ಖಾನ್ ಸತ್ತಾರ್ ಖಾನ್ ಎಂಬ ವ್ಯಕ್ತಿಯೊಬ್ಬರು 14/06/2021ರಂದು ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ರಿಯಾದ್ ಝೋನ್ ಸಾಂತ್ವನ ಇಲಾಖೆಗೆ ಮೃತ ವ್ಯಕ್ತಿಯ ಸಂಬಂಧಿಗಳು ತಿಳಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮಜೀದ್ ವಿಟ್ಲ ಮತ್ತು ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಭಾಷಾ ಗಂಗಾವಳಿಯವರು ಭಾರತೀಯ ರಾಯಭಾರಿ ಕಚೇರಿಯ ಮತ್ತು ಊರಿನಿಂದ ಬೇಕಾದ ದಾಖಲೆಗಳನ್ನು ತ್ವರಿತವಾಗಿ ಮಾಡಿಸಿ 16/06/2021 ರಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಾಂತ್ವನ ತಂಡ ಮತ್ತು ಮೃತ ವ್ಯಕ್ತಿಯ ಸಂಬಂಧಿಗಳ ಸಹಕಾರದೊಂದಿಗೆ ರಿಯಾದಿನ ನಸೀಮ್ ಕಬ್ರ್ ಸ್ಥಾನದಲ್ಲಿ ದಫನ ಕಾರ್ಯವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕೆಸಿಎಫ್ ರಿಯಾದ್ ನಾಯಕರಾದ ಸಿದ್ದೀಕ್ ಮದನಿ, ಐಎನ್‌ಸಿ ನೇತಾರ ನಝೀರ್ ಹಾಜಿ ಕಾಶಿಪಟ್ಣ, ಝೋನ್ ಅಧ್ಯಕ್ಷರಾದ ಹನೀಫ್ ಕಣ್ಣೂರು, ಝೋನ್ ಪಬ್ಲಿಷಿಂಗ್ ವಿಂಗ್‌ ಕಾರ್ಯದರ್ಶಿ ಫಾರೂಕ್ ಪಾಣೆಮಂಗಳೂರು ಮತ್ತು ಮೃತ ವ್ಯಕ್ತಿಯ ಸಂಬಂಧಿಗಳಾದ ಬಶೀರ್ ಮತ್ತು ಮುಹಮ್ಮದ್ ಹಾಗೂ ಮೃತ ವ್ಯಕ್ತಿಯ ಕಂಪೆನಿ ಸಂಪೂರ್ಣವಾಗಿ ಸಹಕಾರ ನೀಡಿದರು. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ. ಮೃತರ ಕುಟುಂಬಸ್ಥರು, ಗೆಳೆಯರು ಮತ್ತು ಕೆಸಿಎಫ್ ನಾಯಕರು ಭಾಗಿಯಾಗಿ ಮೃತರಿಗಾಗಿ ದುವಾ ನೆರವೇರಿಸಿದರು.