janadhvani

Kannada Online News Paper

ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವ್ಯಕ್ತಿಗೆ ಊರಿಗೆ ತಲುಪಲು ನೆರವು ನೀಡಿದ ಕೆಸಿಎಫ್

ದಮ್ಮಾಮಿನ ಕತೀಫ್ ನಲ್ಲಿ ವಿಟ್ಲ ಬೈರಿಕಟ್ಟೆಯ ನಿವಾಸಿಯೊಬ್ಬರು ಕೆಲಸವಿಲ್ಲದೇ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ವಿಷಯವನ್ನು ವ್ಯಕ್ತಿಯ ಊರಿನ ಕುಟುಂಬದವರ ಮಾಹಿತಿ ಪ್ರಕಾರ ರಿಯಾದ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮಜೀದ್ ವಿಟ್ಲವರಿಗೆ ಸಿಕ್ಕಿದಾಗ ತಕ್ಷಣ ಸ್ಪಂದಿಸಿ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟು ಮತ್ತು ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಭಾಷಾ ಗಂಗಾವಳಿಯವರ ನೆರವಿನೊಂದಿಗೆ ಫೈನಲ್ ಎಕ್ಸಿಟ್ ಗೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿ ಊರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.