janadhvani

Kannada Online News Paper

Ride ٢١ – ಜಿಲ್ಲಾ ಮಟ್ಟದ ಐತಿಹಾಸಿಕ ಆನ್’ಲೈನ್ ಮೀಟಪ್ ಸಂಭ್ರಮದ ಸಮಾರೋಪಕ್ಕೆ ಕ್ಷಣಗಣನೆ

ಉಡುಪಿ, ಜೂನ್ 05: “ಸತ್ಯಕ್ಕಾಗಿ ಯುವತ್ವ” ಎಂಬ ಧ್ಯೇಯದೊಂದಿಗೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಅಧೀನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ Ride ٢١ “Online Meetup” ಕಾರ್ಯಕ್ರಮದ ಸಮಾರೋಪ ಸಮಾರಂಭ & ಕಾರ್ಯಕರ್ತರ ಒಗ್ಗೂಡು ಇಂದು ರಾತ್ರಿ 09 ಗಂಟೆಯಿಂದ ಝೂಮ್ ಹಾಗೂ ಯು-ಟೂಬ್ ಚಾನಲ್ ಮುಖಾಂತರ ನಡೆಯಲಿದ್ದು,

ದಾರುಲ್ ಅಮಾನ್ ಎಲ್ಲೂರು ಅಧ್ಯಕ್ಷರಾದ ಸಲೀಮ್ ಮದನಿ ಉಸ್ತಾದ್ ದುಆಃದೊಂದಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ರಾಜ್ಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಉದ್ಘಾಟಿಸುವರು.
ಬಂಗ್ಲೆಗುಡ್ಡೆ ತೌೃಬಾ ಗಾರ್ಡನ್ ಪ್ರಾಂಶುಪಾಲರಾದ ಅಹ್ಮದ್ ಶರೀಫ್ ಸಅದಿ ಕಿಲ್ಲೂರು ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯ ಸದಸ್ಯರಾದ ರವೂಫ್ ಖಾನ್ ಮೂಡುಗೋಪಾಡಿ, KSM ಮನ್ಸೂರ್ ಉಡುಪಿ, ರಾಜ್ಯ ಮಾಜಿ ಪ್ರ.ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಆಶಂಸಾ ಮಾತುಗಳನ್ನಾಡಲಿದ್ದಾರೆ.

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಹಿರಿಯ ಸದಸ್ಯರಾಗಿರುವ ಮುಹಮ್ಮದ್ ಶರೀಫ್ ಸಖಾಫಿ, ಅಲ್ಹಾಜ್ ಅಬ್ದುರ್ರಹ್ಮಾನ್ ರಝ್ವಿ, ಅಶ್ರಫ್ ರಝಾ ಅಂಜದಿ, ಹನೀಫ್ ಸಅದಿ ನಾವುಂದ, ನಝೀರ್ ಅಹ್ಮದ್ ಸಅದಿ, ಅಬ್ದುರ್ರಝಾಖ್ ಸಖಾಫಿ ಹಾಗೂ ಕಾಪು, ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ ಡಿವಿಷನ್ ಅಧ್ಯಕ್ಷರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸದ್ದಾರೆ.

ಜಿಲ್ಲಾಧ್ಯಕ್ಷ ಎಂ.ಎಚ್. ಅಹ್ಮದ್ ಶಬೀರ್ ಸಖಾಫಿ ಘನ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಸ್ತುವಾರಿ ಮುನೀರ್ ಅಹ್ಮದ್ ಸಖಾಫಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ SYS ರಾಜ್ಯ ಕಾರ್ಯದರ್ಶಿ ಅಸ್ಸಯ್ಯಿದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ಪ್ರಾರ್ಥನಾ ಮಜ್ಲಿಸ್ ನೇತೃತ್ವವನ್ನು ನೀಡಲಿದ್ದಾರೆ.

ಈ ಒಂದು ಕಾರ್ಯಕ್ರಮವನ್ನು ಸುನ್ನೀ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಭಾಗವಹಿಸುವಂತೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾ ಸಮಿತಿ ಮೀಡಿಯಾ ಸೆಲ್ ವರದಿ ಮಾಡಿದೆ.