janadhvani

Kannada Online News Paper

ಇತಿಹಾಸದಿಂದ ಪಾಠ ಕಲಿಯದವರಿಗೆ ಕಾಲವು ತಕ್ಕ ಪಾಠ ಕಲಿಸಲಿದೆ!

ಫಲಸ್ತೀನಿಯರಿಗಾಗಿ ರಂಝಾನ್ ಕೊನೆಯಲ್ಲಿ ಒಂದು ಪ್ರಾರ್ಥನೆ ಇರಲಿ
#FreePalastine
#EndOccupation

✍️ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಕೋಶಾಧಿಕಾರಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

ಯಹೂದಿ ದುಷ್ಟರು ಮತ್ತೊಮ್ಮೆ ಪ್ಯಾಲೆಸ್ತೀನ್‌ನಲ್ಲಿರುವ ನಿರಪರಾಧಿಗಳ ಮೇಲೆ ಸವಾರಿಗಿಳಿದಿದ್ದಾರೆ. ಪವಿತ್ರ ರಂಝಾನಿನ ಆರಾಧನೆಗಳಲ್ಲಿ ನಿರತರಾದ ಮುಗ್ಧ ಮನುಷ್ಯರ ಮೇಲೆ ನಿಷ್ಠೂರವಾಗಿ ದಾಳಿ ಮಾಡಿ ಪುಟ್ಟ ಪುಟ್ಟ ಮಕ್ಕಳ ಸಹಿತ ಹಲವರನ್ನು ಕೊಂದು ಹಾಕಿದ್ದಾರೆ. ಈ ದೃಶ್ಯಗಳು ವೀಡಿಯೋ ಮೂಲಕ ವೀಕ್ಷಿಸಲು ಕೂಡ ಸಾಧ್ಯವಿಲ್ಲದಷ್ಟು ಭೀಭತ್ಸವಾಗಿದೆ.ಆದರೆ ಒಂದು ಮಾತ್ರ ಸತ್ಯ. ಇದು ಈ ಯಹೂದಿ ದುರಹಂಕಾರಿಗಳ ಸರ್ವನಾಶಕ್ಕೆ ಕಾರಣವಾಗಲಿದೆ!

ಇಸ್ರೇಲ್ ಸೇನೆಯು ಅಷ್ಟೊಂದು ಭೀಕರ ವಾತಾವರಣವನ್ನು ಸೃಷ್ಟಿಸಿ ತಮ್ಮವರನ್ನು ಕೊಂದು ಹಾಕಿ, ತಮ್ಮನ್ನು ಬಂಧಿಸಿ ಕರೆದೊಯ್ಯುವಾಗಲೂ ಕೂಡ ಹೆದರದೆ ಬೆದರದೆ ಕುಗ್ಗದೆ ಜಗ್ಗದೆ ನಗುಮೊಗದೊಂದಿಗೆ ಹೊರಟು ನಿಲ್ಲುವ ಅವರ ಆ ಹಿಮ್ಮತ್ ಯಹೂದಿ ದುರಹಂಕಾರಿಗಳ ನಿದ್ದೆಗೆಡಿಸಲಿದೆ!
ಇಸ್ರೇಲ್ ದುಷ್ಟರ ಬಂದೂಕುಗಳ ಮುಂದೆ ನಿಂತು. “ನಿಮ್ಮ ಅನ್ಯಾಯವನ್ನು ನಾವು ಮೆಟ್ಟಿ ನಿಲ್ಲಲಿದ್ದೇವೆ. ನಮ್ಮೊಂದಿಗೆ ಅಲ್ಲಾಹನಿದ್ದಾನೆ. ಇನ್ನು ಹುಟ್ಟಿ ಬರುವ ಪ್ರತಿಯೊಂದು ಮಗೂ ಕೂಡ ನಿಮ್ಮೊಂದಿಗೆ ಹೋರಾಡಲಿದೆ. ಈ ಪವಿತ್ರ ಖುದ್‌ಸ್ ಸ್ವತಂತ್ರಗೊಳಿಸಿಯೇ ತೀರುತ್ತೇವೆ. ಅದಕ್ಕಾಗಿ ನಮ್ಮ ಕೊನೆಯುಸಿರು ತನಕ ಹೋರಾಡಲಿದ್ದೇವೆ.” ಎಂದು ಬುಸುಗುಟ್ಟುವ ಫಲಸ್ತೀನ್ ಬಾಲೆಯರ ಮಾತಿನಲ್ಲಿ ಕಂಡುಬರುವ ರೋಷಾಗ್ನಿ ಇಸ್ರೇಲಿನ ದುರಹಂಕಾರವನ್ನು ಸುಟ್ಟು ಬೂದಿ ಮಾಡಲಿದೆ.

ದುರಹಂಕಾರಿಗಳು ಕೊನೆಗೆ ಸತ್ಯನಾಶವಾಗಿ ಹೋದ ಚರಿತ್ರೆಗಳು ಮಾತ್ರವೇ ನಮ್ಮ ಮುಂದಿರುವುದು. ಈ ಇತಿಹಾಸಗಳಿಂದ ಪಾಠ ಕಲಿಯದವರಿಗೆ ಕಾಲವು ತಕ್ಕ ಪಾಠ ಕಲಿಸಲಿದೆ!!
ಪವಿತ್ರ ರಂಝಾನಿನ ಕೊನೆಯ ಕ್ಷಣಗಳಲ್ಲಿ ಫಲಸ್ತೀನ್ ಮುಸ್ಲಿಮರಿಗಾಗಿ ಪ್ರಾರ್ಥಿಸಲು ನಮ್ಮ ಉಲಮಾಗಳು ಕರೆ ಕೊಟ್ಟಿದ್ದಾರೆ. ಅಲ್ಲಾಹು ಆ ಫಲಸ್ತೀನಿಯರನ್ನು ಕಾಪಾಡಲಿ, ಆ ಜನತೆ ಕನಸು ಕಾಣುವ ಸುಂದರ ನಾಳೆಗಳು ಆದಷ್ಟು ಬೇಗ ಬರಲಿ – ಆಮೀನ್