SSF ಕಾರ್ಕಳ ಡಿವಿಷನ್ ನೂತನ ಕಛೇರಿಯು ಕಾರ್ಕಳ ಜಾಮಿಯಾ ಮಸ್ಜಿದ್ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಉದ್ಘಾಟನಾ ಸಮಾರಂಭ ಸಯ್ಯದ್ ಅಲವಿ ತಂಘಳ್ ಉದ್ಘಾಟಿಸಿ ದುಆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಿಲ್ಲೂರು ಸ ಅದಿ, ಶುಭ ಹಾರೈಸಿ ಮಾತನಾಡಿದರು.
ಕಾರ್ಕಳ ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಮದನಿ ಅಲ್ ಹುಮೈದಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ SSF ವಿಸ್ಡಂ ಕಾರ್ಯದರ್ಶಿ NC ರಹೀಂ ಹೊಸ್ಮಾರ್, ಕಾರ್ಕಳ SYS ಸೆಂಟರ್ ಅಧ್ಯಕ್ಷ ಹೈದರ್ ಕಾಬೆಟ್ಟು, SMA ,ಕಾರ್ಕಳ ಅಧ್ಯಕ್ಷ ಅಬ್ದುಲ್ ರಹ್ಮಾನ್ ಐಡಿಯಲ್, SSF ಕಾರ್ಕಳ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್ ಮುಸ್ಲಿಯಾರ್,
ಕಾಬೆಟ್ಟು ಮಸೀದಿ ಖತೀಬ್ ಉಸ್ತಾದ್, SSF ನೋರ್ತ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅಮ್ಜದಿ, SSF ಉಡುಪಿ ಜಿಲ್ಲಾ ಸದಸ್ಯ ನವಾಝ್ ಬಂಗ್ಲೆಗುಡ್ಡೆ ಉಪಸ್ಥಿತತಿದ್ದರು.
ಡಿವಿಷನ್ ಪ್ರ. ಕಾರ್ಯದರ್ಶಿ ಹಾರಿಸ್ ಮಾಸ್ಟರ್ ಸ್ವಾಗತಿಸಿ, ಬಿರುದುದಾರಿಯಾಗಿ ಸನ್ಮಾನಿಸಲ್ಪಟ್ಟ ಅನೀಸ್ ಸರ್ ಹಿಂದಿ ಅಲ್ ಫಾಳಿಲಿ ವಂದಿಸಿದರು.







