janadhvani

Kannada Online News Paper

ತ್ವೈಬ ಈಶ್ವರಮಂಗಲ: ದಶ ವಾರ್ಷಿಕ ಸಂಭ್ರಮ- ಸ್ವಾಗತ ಸಮಿತಿ ರಚನೆ

ಪುತ್ತೂರು: ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸದ ಗುರಿಯಿಟ್ಟು ಪುತ್ತೂರು ಈಶ್ವರಮಂಗಳದಲ್ಲಿ ಕಾರ್ಯಾಚರಿಸುತ್ತಿರುವ ತ್ವೈಬ ಎಜುಕೇಶನಲ್ ಸೆಂಟರ್ ಈಶ್ವರಮಂಗಲ ಇದರ ದಶವಾರ್ಷಿಕ ಕಾರ್ಯಕ್ರಮವು ವೈವಿಧ್ಯಮಯ ಪದ್ದತಿಗಳೊಂದಿಗೆ ಜರಗಲಿದೆ.

ಈ ಒಂದು ವರ್ಷ ನಡೆಯುವ ಕಾರ್ಯಕ್ರಮಕ್ಕೆ ತ್ವೈಬ ಅಧ್ಯಕ್ಷರಾದ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತು ಕೋಯ ತಂಙಳ್ ಕಣ್ಣವಂ ರವರ ನೇತೃತ್ವದಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಭೆಯನ್ನು ಸಯ್ಯಿದ್ ಪೂಕುಂಞಿ ತಂಙಳ್ ಅಲ್ ಅಹ್ದಲ್ ಆದೂರು ದುಆ ಮಾಡಿ ಉದ್ಘಾಟಿಸಿದರು.

ವೈವಿಧ್ಯ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಯೋಜನೆಗಳೊಂದಿಗೆ ವರ್ಷವಿಡೀ ದಶವಾರ್ಷಿಕ ಸಡಗರ ಸಂಭ್ರಮದಲ್ಲಿ ಆಚರಿಸಲಾಗುವುದು. ಪ್ರಸ್ತುತ ಸಂಭ್ರಮದ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಆಗಿ ಸಯ್ಯಿದ್ ಉಮರ್ ಜಿಫ್ರಿ ತಂಙಳ್, ವರ್ಕಿಂಗ್ ಚೆಯರ್ಮ್ಯಾನ್ ಮುಹಮ್ಮದ್ ಮದನಿ, ಕನ್ವೀನರ್ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಪಳ್ಳತ್ತೂರ್ ರವರನ್ನು ಆಯ್ಕೆ ಮಾಡಲಾಯಿತು.

ಸಯ್ಯಿದ್ ಉಮರ್ ಜಿಫ್ರಿ ತಂಙಳ್, ಸೂಫಿ ಮದನಿ ಪಳ್ಳಂಗೋಡ್, ದಾವೂದುಲ್ ಹಕೀಂ ಹಿಮಮಿ ಸಖಾಫಿ ತ್ವೈಬ, ಮುಹಮ್ಮದ್ ಮದನಿ, ಎಂಎ ಮುಹಮ್ಮದ್ ಕುಂಞ್ಞಿ ಮುಂತಾದವರು ಸಭೆಯಲ್ಲಿ ಮಾತನಾಡಿದರು. ತ್ವೈಬ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ ಸ್ವಾಗತಿಸಿ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ವಂದಿಸಿದರು.

error: Content is protected !! Not allowed copy content from janadhvani.com