ಸಂಘಟನೆ, ಗ್ರೂಪಿಸಂನ ನಶೆಯೇರಿದ ಕೆಲವರಿಗೆ ಜಿಲ್ಲೆಯಲ್ಲಿ ಮತ್ತೆ ಪರಸ್ಪರ ಕಂದಕ ಸ್ರಷ್ಟಿಸುವುದು ಮತ್ತು ಒಬ್ಬರು ಇನ್ನೊಬ್ಬರ ಕಾಲೆಳೆಯುವುದು ಮೊದಲಾದ ಪ್ರಸಂಗಗಳು ಫೇಸ್ಬುಕ್ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ.
ಗ್ರೂಪಿಸಂನ ಹೆಸರಿನಲ್ಲಿ ಮೊಹಲ್ಲಾ ಜಮಾತ್
ಕಮಿಟಿಯಲ್ಲಿ ನಡೆಯುತ್ತಿದ್ದ ಹೊಡೆದಾಟ ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಣುತ್ತಿದೆ.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಖಾಝಿ ತ್ವಾಖಾ ಉಸ್ತಾದ್ ರನ್ನು ಎಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಭೇಟಿಯಾಗಿದ್ದರು. ಗ್ರೂಪಿಸಂನ ನಶೆಯಲ್ಲಿದ್ದವರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಪರಸ್ಪರ ಕಚ್ಚಾಟಕ್ಕೆ ಸೋಶಿಯಲ್ ಮೀಡಿಯಾವನ್ನು ವೇದಿಕೆಯಾಗಿ ಉಪಯೋಗಿಸಿ ಕೊಂಡಿದ್ದಾರೆ.
ಎರಡೂ ವಿಭಾಗದ ಉಲಮಾಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬ ಪರಿಜ್ಞಾನವಿಲ್ಲದ, ದೀನಿನ ವಿಷಯದಲ್ಲಿ ಅರೆ ಬರೆ ಕಲಿತ ಅರೆಪಡಿಪುಗಳಿಗೆ ಇದನ್ನು ಅರಗಿಸಿಕೊಳ್ಳಲಾಗದೆ ಫಿತ್ನ ಫಸಾದ್ ಮಾಡುವ
ಮೂಲಕ ನಂಜನ್ನು ಹೊರ ಹಾಕುವ ಪೋಸ್ಟ್ ಗಳು, ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ನಿಂದ ಗ್ರೂಪ್ ಗೆ ಫಾರ್ವರ್ಡ್ ಆಗುವ ಬರಹಗಳು, ವಾಯ್ಸ್ ಕ್ಲಿಪ್ ನಿಂದ ಮತ್ತೆ ಜಿಲ್ಲೆಯಲ್ಲಿ
ಗ್ರೂಪಿಸಂನ ಕಮಟು ವಾಸನೆ ಬಡಿಯುತ್ತಿದೆ.
ಜಿಲ್ಲೆಯಲ್ಲಿ ಎರಡು ವಿಭಾಗದ ಉಲಮಾ ಉಮರಾಗಳು ಒಗ್ಗಟ್ಟಾಗುವುದು ಕಾಲದ
ಅನಿವಾರ್ಯತೆಯಾಗಿದೆ.ಗ್ರೂಪಿಸಂನ
ಅಮಲೇರಿದವರಿಗೆ ಈ ಒಗ್ಗಟ್ಟು ಬೇಕಾಗಿಲ್ಲ..
ಬದಲಾಗಿ ಇವರಿಗೆ ಅದು ಜೀವಂತ
ವಾಗಿರಬೇಕು..ಗ್ರೂಪಿಸಂನಿಂದಲೇ ಉಸಿರಾಡಬೇಕು.. ಅದಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುವ ಕೆಲ ಮಂದಿಯಿಂದ ಉಭಯ ಜಿಲ್ಲೆಯ ಎರಡೂ ಗ್ರೂಪ್ ಗಳ ಐಕ್ಯತೆಯನ್ನು ಮುರಿಯಲು ಇಲ್ಲ ಸಲ್ಲದ
ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾ
ಗಳಲ್ಲಿ ಶೇರ್ ಮಾಡುವ ಈ ಮಂದಿಯಿಂದ
ನಿರೀಕ್ಷಿಸುವುದಾದರೂ ಏನು?
ಒಬ್ಬರು ಇನ್ನೊಬ್ಬರನ್ನು ಅವಹೇಳಿಸಿ ಪೋಸ್ಟ್ ಮಾಡುವ ಬರಹಗಳನ್ನು ಗಮನಿಸುವಾಗ
ಕುಂತುಮ್ ಖೈರ ಉಮ್ಮತ್ ಸಮುದಾಯ
ಇಂದು ಎತ್ತ ಸಾಗುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೆ
ಸಂಬಂಧಿಸಿ ಭಿನ್ನತೆಯನ್ನು ಎತ್ತಿ ತೋರಿಸುವ ನಾವು ಕಳೆದ ವರ್ಷದ ಎನ್ನ್ಆರ್ಸಿ ಸಿಎಎ ಹೋರಾಟದಲ್ಲಿ ಕೈ ಕೈ ಹಿಡಿದು ಅಡ್ಯಾರ್ ಗಾರ್ಡನ್ ನ ಮೈದಾನದಲ್ಲಿ ಕರಾಳ ಕಾಯ್ದೆಯ ವಿರುದ್ಧ ಒಂದೇ ವೇದಿಕೆಯಲ್ಲಿ ಧ್ವನಿ ಎತ್ತಿದ ನಾವು ಬಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಕೈ ಜೋಡಿಸಿ ಕೊಂಡು ಜಯ ಸಾದಿಸಿದ ಆ ದಿನವನ್ನು ಒಮ್ಮೆ ಮೆಲುಕು ಹಾಕಿ ನೋಡಿ..
ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಂದ ಒಂದು ಸಣ್ಣ ತುಣುಕು ಪೋಸ್ಟ್ ಗೆ ಸಂಬಂಧಿಸಿ ವಾದ ವಿವಾದ ಉಂಟು ಮಾಡುವ ತರ್ಕಕ್ಕೆ ಪೂರ್ಣ ವಿರಾಮ ಕೊಡೋಣ. ವಿವಾದವನ್ನು ಅಂತ್ಯಗೊಳಿಸೋಣ.. ಪರಸ್ಪರ ದ್ವೇಷ ಸಾಧಿಸುವುದನ್ನು ಬಿಟ್ಟು ಬಿಡೋಣ.. ಕ್ಷಮಿಸುವ ಕ್ಷಮೆ ಕೇಳುವ ಗುಣ ಬೆಳೆಸೋಣ.. ನಮ್ಮ ಬಾಯನ್ನು ಹೊಲಸಾಗಿಸದೆ ಶುದ್ಧವಾಗಿಡೋಣ.. ಮುನಾಫಿಕ್ ಗಳ ಸ್ವಭಾವದಿಂದ ಹೊರ ಬರೋಣ.. ಮತ್ತೆ ನಮ್ಮೊಳಗಿನ ಒಗ್ಗಟ್ಟನ್ನು
ಎತ್ತಿ ಹಿಡಿಯೋಣ.
✍️ ಮುಹಮ್ಮದ್ ಉಳ್ಳಾಲ್.