janadhvani

Kannada Online News Paper

ಮದೀನಾ ಮಸೀದಿಯಲ್ಲಿ ರಂಜಾನ್ ಸಿದ್ಧತೆ- ಪ್ರತಿದಿನ 60 ಸಾವಿರ ಮಂದಿಗೆ ಪ್ರಾರ್ಥನೆಗೆ ಅವಕಾಶ

ಮದೀನತುಲ್ ಮುನವ್ವರ|ಮದೀನಾದ ಪ್ರವಾದಿ ಮಸೀದಿಯಲ್ಲಿ(ಮಸ್ಜಿದುನ್ನಬವಿ) ರಂಜಾನ್ ಸಿದ್ಧತೆಗಳನ್ನು ಘೋಷಿಸಲಾಗಿದೆ. ರಂಜಾನ್ ಕೊನೆಯ ಹತ್ತು ದಿನಗಳಲ್ಲಿ ವಿಶ್ವಾಸಿಗಳಿಗೆ ಪೂರ್ಣ ಸಮಯ ಮಸೀದಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಪ್ರತಿದಿನ 60 ಸಾವಿರ ಜನರಿಗೆ ಪ್ರಾರ್ಥನೆ ಸಲ್ಲಿಸಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಹರಮ್ ಕಚೇರಿಯ ಮುಖ್ಯಸ್ಥರು ಹೇಳಿದರು.

ಶಅಬಾನ್ ಮತ್ತು ರಂಜಾನ್ ತಿಂಗಳುಗಳಲ್ಲಿ ಮದೀನಾದಲ್ಲಿನ ಮಸೀದಿ ಅಲ್-ನಬವಿಗಾಗಿ ಸಿದ್ಧತೆಗಳು ಮತ್ತು ಮುನ್ನೆಚ್ಚರಿಕೆಗಳನ್ನು ಎರಡು ಹರಮ್ ಕಚೇರಿಗಳ ಮುಖ್ಯಸ್ಥರು ಘೋಷಿಸಿದರು.

ಈದ್ ಅಲ್-ಫಿತರ್ ದಿನ ಸೇರಿದಂತೆ ರಂಜಾನ್ ನ ವಿಶೇಷ ಯೋಜನೆಯನ್ನು ಎರಡೂ ಹರಮ್ ಕಚೇರಿಯ ಮುಖ್ಯಸ್ಥ ಶೈಖ್ ಅಬ್ದುಲ್ ರಹ್ಮಾನ್ ಅಲ್ ಸುದೈಸ್ ಉದ್ಘಾಟಿಸಿದರು.

ರಂಜಾನ್ ಸಮಯದಲ್ಲಿ ರಾತ್ರಿ ತಾರವೀಹ್ ಪ್ರಾರ್ಥನೆ ಮುಗಿದ ಅರ್ಧ ಘಂಟೆಯ ನಂತರ ಮಸೀದಿಯನ್ನು ಮುಚ್ಚಲಾಗುವುದು. ಬೆಳಿಗ್ಗಿನ ಪ್ರಾರ್ಥನೆಗೆ ಎರಡು ಗಂಟೆಗಳ ಮುಂಚಿತವಾಗಿ ತೆರೆಯಲಾಗುವುದು. ಆದರೆ, ರಂಜಾನ್‌ನ ಕೊನೆಯ ಹತ್ತು ದಿನಗಳಲ್ಲಿ ಭಕ್ತರಿಗೆ ಪೂರ್ಣ ಸಮಯ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಎರಡೂ ಹರಂ ಕಚೇರಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಕೋವಿಡ್ ಪ್ರೋಟೋಕಾಲ್ನ ಸಂಪೂರ್ಣ ಪಾಲನೆಯೊಂದಿಗೆ ಮಾತ್ರ ಹರಂ ಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ.ಹರಮಿನ ಹಳೆಯ ಭಾಗಕ್ಕೆ ಮತ್ತು ರೌಳಾ ಪ್ರವೇಶಿಸಲು ವಿಶೇಷ ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ.

ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ, ಪ್ರವಾದಿಯ ಮಸೀದಿಯಲ್ಲಿ ಪ್ರತಿದಿನ ಪ್ರತಿದಿನ 45,000 ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ. ಆದಾಗ್ಯೂ, ಮಸೀದಿಯ ನವೀಕರಣ ಪೂರ್ಣಗೊಂಡ ಸ್ಥಳಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗುವುದು ಎಂದು ಅಲ್-ಸುದೈಸ್ ಹೇಳಿದರು. ಇದರೊಂದಿಗೆ ಪ್ರತಿದಿನ 60,000 ಜನರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದು.

error: Content is protected !! Not allowed copy content from janadhvani.com