janadhvani

Kannada Online News Paper

ಬಡಕಬೈಲ್ ನೂತನ ಮಸೀದಿ ಉದ್ಘಾಟನೆ: ಸುಲ್ತಾನುಲ್ ಉಲಮಾ ಮುಖ್ಯ ಅತಿಥಿ

ಬಡಕಬೈಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ಬದ್ರಿಯಾ ಜುಮಾ ಮಸೀದಿ ಮಾರ್ಚ್ 18ರ ಗುರುವಾರ ಸಯ್ಯಿದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ರವರರಿಂದ ಉದ್ಘಾಟನೆಗೊಳ್ಳಲಿದೆ.

ಮಾರ್ಚ್ 19ರಂದು ಶುಕ್ರವಾರ ಸುಲ್ತಾನುಲ್ ಉಲಮಾ ಎಪಿ ಉಸ್ತಾದರು ಜುಮಾ ನಿರ್ವಹಣೆ ಮಾಡಲಿದ್ದಾರೆ.

ಮಸೀದಿ ಉದ್ಘಾಟನೆ ಸಮಾರಂಭದ ಪ್ರಯುಕ್ತ ಮಾರ್ಚ್ 17ರಂದು ಇಲ್ಯಾಸ್ ಸಅದಿ ಯವರ ಮತ ಪ್ರಭಾಷಣ ನಡೆಯಲಿದೆ.

ಮಾರ್ಚ್ 18ರಂದು ಸಯ್ಯಿದ್ ಕೆ ಎಸ್ ಜಅಫರ್ ಸ್ವಾದಿಖ್ ತಂಙಳ್ ಕುಂಬೋಳ್ ರವರ ನೇತ್ರತ್ವದಲ್ಲಿ ಸ್ವಲಾತ್ ವಾರ್ಷಿಕ ಹಾಗೂ ಜಲಾಲಿಯ್ಯಾ ರಾತೀಬ್ ನಡೆಯಲಿದೆ.

ಮಾರ್ಚ್ 19ರಂದು ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ಮಲ್ಲೂರು ರವರ ನೇತ್ರತ್ವದಲ್ಲಿ ಬದ್ರ್ ಮೌಲೂದ್ ಮಜ್ಲಿಸ್ ಹಾಗೂ ಸಯ್ಯಿದ್ ತ್ವಾಹಾ ತಂಙಳ್ ಗಾಣೆಮಾರ್ ರವರ ನೇತ್ರತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.

ಕಾರ್ಯಕ್ರಮದಲ್ಲಿ ಡಾ| ಅಬ್ದುರ್ರಶ್ಶೀದ್ ಝೈನಿ, ಬಿಕೆ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಇರ್ಶಾದ್ ದಾರಿಮಿ ಅಲ್-ಅಝ್’ಹರಿ ಮಿತ್ತಬೈಲು ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಭಾಗವಹಿಸಲಿದ್ದಾರೆ.